ಧರ್ಮಸ್ಥಳ : ‘ಓಡಿ ಓಡಿ ಬಂದು ಹಣೆಗೆ ನೀಡಿ ನೀಡಿ ಡಿಡಿಕ್ಕ ಡಿಡಿಕ್ಕ’..... ಈ ಸಾಲುಗಳನ್ನು ಕೇಳದವರಾರು? ಪುಟ್ಟ ಬಾಲಕಿಯ ಇಂಪಾದ ದನಿಯಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಜನಜನಿತವಾದ ಈ ಹಾಡು ಧರ್ಮಸ್ಥಳದ ದೀಪೋತ್ಸವದಲ್ಲಿ ಒಟ್ಟಿಗೆ ಮೂರು ಗಾಯಕಿಯರ ಕಂಠದಲ್ಲಿ ಮೂಡಿಬಂದು ನೆರೆದಿದ್ದ ಸಂಗೀತ ಪ್ರಿಯರನ್ನು ಭಾವಪರವಶಗೊಳಿಸುಲ್ಲಿ ಯಶಸ್ವಿಯಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ವಸ್ತು ಪ್ರದರ್ಶನ ಮಂಟಪದಲ್ಲಿ ನಡೆದ ಭಕ್ತಿಗಾನಾಮೃತ ಸಂಗೀತ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರನ್ನು ಇಮ್ಮಡಿಗೊಳಿಸಿತು. ಗಾಯಕಿಯರು ಶ್ರೇಷ್ಠಾ ಆಳ್ವ, ಪ್ರಸೀದಿ ಪಿ ರಾವ್, ದಿಯಾ ರಾವ್ ಅವರ ನೇತೃತ್ವದಲ್ಲಿ ಲಕ್ಷದೀಪೋತ್ಸವದ ಮೊದಲ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ಪ್ರಾರಂಭಗೊಂಡವು.
ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಡಿಡಿಕ್ಕ ಡಿಡಿಕ್ಕ ಈ ಹಾಡು ನೆರೆದಿದ್ದ ಸಮೂಹಕ್ಕೆ ಸಂಗೀತದ ಮೂಲಕ ಭಕ್ತಿಯನ್ನು ಉಣಬಡಿಸಿದರು. ಅಲ್ಲಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಹಾಡಿಗೆ ತಲೆಯಾಡಿಸುವುದು ಕಾರ್ಯಕ್ರಮದಲ್ಲಿ ಗಮನಸೆಳೆಯಿತು. ಹಿರಿಯ ಜೀವಗಳು ಸಂಗೀತಕ್ಕೆ ಭಾವುಕ ಮಗ್ನರಾಗಿದ್ದು ಕಂಡುಬಂದಿದ್ದು ವಿಶೇಷ.
ಕಾರ್ಯಕ್ರಮದಲ್ಲಿ ‘ಡಿಡಿಕ್ಕ ಡಿಡಿಕ್ಕ’ ‘ಓಂ ಮಹಾಪ್ರಾಣ ದೀಪಂ ಶಿವಂ ಶಿವಂ’ ಗೀತೆಗಳು ಮನಸೂರೆಗೊಂಡವು. ಮೊದಲಿಗೆ ಗಣೇಶ ಸ್ತುತಿಯ ಮೂಲಕ ಪ್ರಾರಂಭವಾದ ಸಂಗೀತ ಕಾರ್ಯಕ್ರಮವು ನಂತರದಲ್ಲಿ ಮಂಜುನಾಥಸ್ವಾಮಿ, ಪಾಂಡುರಂಗ, ಶಿವಸ್ತುತಿ ಮತ್ತು ತುಳುನಾಡಿನ ಧಾರ್ಮಿಕ ಸಂಸ್ಕೃತಿಗಳನ್ನು ಪರಿಚಯಿಸುವ ಗೀತೆಗಳು ಕೇಳುಗರ ಪ್ರೀತಿಗೆ ಪಾತ್ರವಾದವು.
ಗಾಯಕಿಯರು ವಾದ್ಯ ಕಲಾವಿದರ ಜೊತೆಗೂಡಿ ಭಕ್ತಿಗೀತೆ, ಜಾನಪದ, ಭಾವಗೀತೆ ಹಾಡುಗಳನ್ನು ಹಾಡುವುದರ ಮೂಲಕ ನೆರೆದಿದ್ದವರನ್ನು ಮನಸೂರೆಗೊಳಿಸಿದರು. ಕಾರ್ಯಕ್ರಮದಲ್ಲಿ ಗಾಯಕಿಯರ ಹಾಡುಗಳಿಗೆ ಹಾರ್ಮೋನಿಯಂ, ತಬಲಾ ಮತ್ತು ತರಂಗದಾಟಿ ವಾದ್ಯಗಳನ್ನು ಕಲಾವಿದರು ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ಹೆಚ್ಚಿಸಲು ಕಾರಣರಾದರು. ನಿರಂತರ ಒಂದು ಗಂಟೆಯವರೆಗೆ ಸಂಗೀತ ಪ್ರಸ್ತುತಿಯ ಮೂಲಕ ಪ್ರೇಕ್ಷಕರ ಮನಗೆದ್ದರು.
ತಬಲಾ ವಾದಕ ಗಿರೀಶ್ ಪೆರ್ಲ, ಹಾರ್ಮೋನಿಯಂ ವಾದಕ ಸಚಿನ್ ಪುತ್ತೂರು, ಹಾಗೂ ದಿಧಮ್ ವಾದಕ ಅಶ್ವಿನ್ ಬಾಬಣ್ಣ ಸಂಗೀತದ ಸಾಥ್ ನೀಡಿದರು. ದೀಕ್ಷಾ ರೈ ನಿರ್ವಹಿಸಿದರು.
- ವಿಜಯಕುಮಾರ ಹಿರೇಮಠ
ದ್ವಿತೀಯ ಎಂ ಎ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ
ಎಸ್‍ಡಿಎಂ ಸ್ನಾತಕೋತ್ತರ ಕೇಂದ್ರ ಉಜಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ