ಪುಣೆ: ಗೋಕರ್ಣ ಮಂಡಲಾಧೀಶ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಗುರುವಾರ (ಡಿ.7) ಬೆಳಗ್ಗೆ 6 ಗಂಟೆಗೆ ಶ್ರೀ ಕೃಷ್ಣ ದೇವಸ್ಥಾನ, ಜವಲ್ಕರ್ ನಗರ ಪಿಂಪ್ಲೆ ಗುರಾವ್ ಪುಣೆ ಇಲ್ಲಿಗೆ ಆಗಮಿಸಿದರು. ಪುಣೆ ಘಟಕದ ಅಧ್ಯಕ್ಷರಾದ ಮದಂಗಲ್ಲು ಆನಂದ ಭಟ್ ಮತ್ತು ಅವರ ಪತ್ನಿ ಹೇಮಾ ಭಟ್ ಗುರುಗಳನ್ನು ಸ್ವಾಗತಿಸಿ ದೂಳಿಪೂಜೆಯನ್ನು ಮಾಡಿ ಕರೆತಂದರು.
ಆ ಮೇಲೆ ಶ್ರೀರಾಮ ಪೂಜೆ, ಗುರು ಭಿಕ್ಷೆ, ಪಾದಪೂಜೆ, ಸ್ವರ್ಣ ಪಾದುಕಾ ಪೂಜೆ ಮುಂತಾದ ಸೇವೆಗಳು ನಡೆದವು. ಸಂಜೆ ಸಭಾ ಕಾರ್ಯಕ್ರಮದಲ್ಲಿ ಶಿಷ್ಯರನ್ನುದ್ದೇಶಿಸಿ ಮಾತನಾಡಿ ಮಂತ್ರಾಕ್ಷತೆ ನೀಡಿ ಆಶೀರ್ವಾದ ಮಾಡಿದರು.
ಇದೇ ಸಂದರ್ಭದಲ್ಲಿ ಶ್ರೀಗಳು ಸಾಧಕರಿಗೆ ಸನ್ಮಾನ ಮಾಡಿ ಆಶೀರ್ವದಿಸಿ ಹರಸಿದರು. ಡಾ. ಪ್ರಕಾಶ್ ಕೊಡ್ಲೆಕೆರೆ ಮತ್ತು ಹೇಮಾ ಹೆಗಡೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಡಾ. ರಾಜಗೋಪಾಲ ಭಟ್ ಎಡಕ್ಕಾನ, ಡಾ. ಎಂ.ವಿ. ಹೆಗಡೆ, ಮಹಾಬಲ ಭಟ್ ಪೆಲತ್ತಡ್ಕ, ಕಾರ್ಯದರ್ಶಿ ಶ್ಯಾಮ್ ಸುಂದರ್ ಭಟ್ ವಳಕ್ಕುಂಜ, ಖಜಾಂಚಿ ಗಣೇಶ ಪ್ರಸಾದ ಕೊಣಿಲ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಶುಕ್ರವಾರ (ಡಿ.8) ಬೆಳಗ್ಗಿನ ಪೂಜೆ ನೆರವೇರಿಸಿದ ಬಳಿಕ ಶ್ರೀಗಳು ಪಕ್ಕದಲ್ಲಿರುವ ಶ್ರೀಕೃಷ್ಣ ಮಂದಿರಕ್ಕೆ ಭೇಟಿ ನೀಡಿ ಭಕ್ತಾದಿಗಳಿಗೆ ಫಲ ಮಂತ್ರಾಕ್ಷತೆ ನೀಡಿ ಹರಸಿದರು. ಅನಂತರ ಮುಂಬೈಗೆ ನಿರ್ಗಮಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ