ಸುರತ್ಕಲ್ : ವಿದ್ಯೆ ಎಂಬುದು ಶಾಶ್ವತವಾದ ಸಂಪತ್ತು. ವಿದ್ಯಾರ್ಥಿಗಳಲ್ಲಿ ಆತ್ಮಗೌರವ ಮತ್ತು ಕೃತಜ್ಞತಾ ಭಾವವಿದ್ದಾಗ ಯಶಸ್ಸು ಕಾಣಲು ಸಾಧ್ಯ. ಶಿಕ್ಷಣ ಸರ್ವರಿಗೂ ಲಭಿಸುವಲ್ಲಿ ವಿದ್ಯಾರ್ಥಿ ವೇತನ ನೀಡಿಕೆ ಅತ್ಯಂತ ಉಪಯುಕ್ತ ಎಂದು ಮೆ. ಕೊನ್ನಾರ್ ಆ್ಯಂಡ್ ಕೋ. ನ ಮಾಲಕಿ ಮತ್ತು ಕಾಲೇಜಿನ ಹಳೆ ವಿದ್ಯಾರ್ಥಿನಿ ಸಿ.ಎ. ವೃಂದಾ ಕೊನ್ನಾರ್ ನುಡಿದರು.
ಅವರು ಭಕ್ತ ಶ್ರೀ ಕುತ್ತೆತ್ತೂರು ಗೋವಿಂದ ದಾಸ ಚಾರಿಟೇಬಲ್ ಟ್ರಸ್ಟ್ ಫೌಂಡೇಶನ್‍ನ ವತಿಯಿಂದ ಹತ್ತನೇ ವರ್ಷದ ಶ್ರೀ ಹಯಗ್ರೀವ ಆಚಾರ್ಯ ಮತ್ತು ಶ್ರೀಮತಿ ಭಾರತಿ ದೇವಿ ವಿದ್ಯಾರ್ಥಿವೇತನ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಟ್ರಸ್ಟ್‍ನ ಅಧ್ಯಕ್ಷ ಡಾ. ಕೆ. ರಾಜಮೋಹನ ರಾವ್ ಮಾತನಾಡಿ ವಿದ್ಯಾರ್ಥಿಗಳು ಲಭ್ಯ ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ ಸತ್ಪ್ರಜೆಗಳಾಗಬೇಕು. ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ವೈ.ವಿ. ರತ್ನಾಕರ ರಾವ್ ಶುಭ ಹಾರೈಸಿದರು. ಪ್ರಾಂಶುಪಾಲೆ ಲಕ್ಷ್ಮೀ ಪಿ. ಅತಿಥಿಗಳಾಗಿದ್ದರು. ಗೋವಿಂದ ದಾಸ ಕಾಲೇಜಿನ ಉಪಪ್ರಾಚಾರ್ಯ ಪ್ರೊ. ರಮೇಶ್ ಭಟ್ ಎಸ್.ಜಿ ಮತ್ತು ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪಲ್ಲವಿ ವಿದ್ಯಾರ್ಥಿವೇತನದ ಪಟ್ಟಿಯನ್ನು ವಾಚಿಸಿದರು.
ಟ್ರಸ್ಟನ ಕಾರ್ಯದರ್ಶಿ ರಮೇಶ್ ರಾವ್ ಎಂ. ಸ್ವಾಗತಿಸಿದರು. ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಪಿ., ವಂದಿಸಿದರು. ಪೂರ್ಣಿಮಾ ಗೋಖಲೆ ನಿರೂಪಿಸಿದರು. ಭಕ್ತ ಶ್ರೀ ಕುತ್ತೆತ್ತೂರು ಗೋವಿಂದ ದಾಸ ಚಾರಿಟೇಬಲ್ ಟ್ರಸ್ಟ್‍ನ ಕೋಶಾಧಿಕಾರಿ ಆಶಾ, ಟ್ರಸ್ಟಿ ವರದರಾಜ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಉಪಸ್ಥಿತರಿದ್ದರು.
ಗೋವಿಂದ ದಾಸ ಕಾಲೇಜು ಮತ್ತು ಗೋವಿಂದ ದಾಸ ಪದವಿಪೂರ್ವ ಕಾಲೇಜಿನ 71 ವಿದ್ಯಾರ್ಥಿಗಳಿಗೆ 3,55,000 ಮೌಲ್ಯದ ವಿದ್ಯಾರ್ಥಿ ವೇತನವನ್ನು ಮತ್ತು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಭೋಜನ ನಿಧಿಗೆ 50,000ವನ್ನು ಟ್ರಸ್ಟ್‍ನ ವತಿಯಿಂದ ನೀಡಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ