ಧರ್ಮಸ್ಥಳ ಲಕ್ಷದೀಪೋತ್ಸವ : ವೈಭವದ ಲಲಿತೋದ್ಯಾನ ಉತ್ಸವ

Upayuktha
0



ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ದೇವಾಲಯದ ಲಕ್ಷದೀಪೋತ್ಸವ ಪ್ರಯುಕ್ತ ಭಾನುವಾರ ಲಲಿತೋದ್ಯಾನ ಉತ್ಸವ ವೈಭವದಿಂದ ನಡೆಯಿತು. 




ಕಾರ್ತೀಕ ಮಾಸದ ಶುಭಮಹೂರ್ತದಲ್ಲಿ ಲಕ್ಷದೀಪೋತ್ಸವದ ಧಾರ್ಮಿಕ ಪೂಜಾ ಕೈಂಕರ್ಯಗಳು ಶುಕ್ರವಾರದಿಂದ ಪ್ರಾರಂಭಗೊಂಡಿವೆ. ಎರಡನೇ ದಿನ ಶನಿವಾರ ರಾತ್ರಿ ಕೆರೆಕಟ್ಟೆ ಉತ್ಸವ ನೆರವೇರಿತು. ಮೂರನೇಯ ದಿನದ ಲಲಿತೋದ್ಯಾನ ಉತ್ಸವದ ಮೆರಗು ಕಂಗೊಳಿಸಿತು.




ದೇವಳದ ಪ್ರಾಂಗಣದಲ್ಲಿ ಸ್ವಾಮಿಗೆ ಪೂಜೆ ನಡೆದು ಸಂಪ್ರದಾಯದಂತೆ  ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಸ್ವರ್ಣ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ನಡೆಯಿತು. ಚೆಂಡೆ, ನಾದಸ್ವರ,ಸಂಗೀತ, ಕೊಳಲು, ಶಂಖ ಸೇರಿ ಸರ್ವವಾದ್ಯಗಳೊಂದಿಗೆ 16 ಸುತ್ತುಗಳಲ್ಲಿ ದೇವಳದಲ್ಲಿ ಪ್ರದಕ್ಷಿಣೆ ಹಾಕಲಾಯಿತು. ತದನಂತರ ಒಳಾಂಗಣದಿಂದ ಹೊರಾಂಗಣಕ್ಕೆ ಅದ್ದೂರಿ ಮೆರವಣಿಗೆಯ ಮೂಲಕ ಲಲಿತೋದ್ಯಾನಕ್ಕೆ ಕರೆತರಲಾಯಿತು.




ಉತ್ಸವ ಮೂರ್ತಿಯನ್ನು ಲಲಿತೋದ್ಯಾನದ ಕಟ್ಟೆಯ ಮೇಲೆ ಕುಳ್ಳಿರಿಸಿ ಚತುರ್ವೇದ, ಸಂಗೀತ, ಮೌರ್ಯವಾದ್ಯ, ಸರ್ವವಾದ್ಯಗಳೊಂದಿಗೆ ಅಷ್ಟವಿಧಾನ ಸೇವೆಯನ್ನು ನೆರವೇರಿಸಲಾಯಿತು. ಪೂಜಾ ಕೈಂಕರ್ಯಗಳ ನಂತರ ಆರಾಧ್ಯ ಮೂರ್ತಿಯನ್ನು ಲಲಿತೋದ್ಯಾನದಿಂದ ಕರೆತಂದು ದೇವಾಲಯದ ಮುಂದಿರುವ ಬೆಳ್ಳಿರಥದಲ್ಲಿ ಕುಳ್ಳಿರಿಸಿ ಭಕ್ತಗಣ ರಥವನ್ನು ಎಳೆಯುವುದರ ಮೂಲಕ ಒಂದು ಪ್ರದಕ್ಷಿಣೆ ಹಾಕಲಾಯಿತು. 




ತರುವಾಯ ಸ್ವಾಮಿ ಮೂರ್ತಿಯನ್ನು ದೇವಳದ ಒಳಗೆ ಕರೆದೊಯ್ಯುವುದುರೊಂದಿಗೆ ಮೂರನೇ ದಿನದ ಲಲಿತೋದ್ಯಾನ ಉತ್ಸವ ಸಂಪನ್ನಗೊಂಡಿತು. ಇದೇ ಸಂದರ್ಭದಲ್ಲಿ ಸ್ವಾಮಿಯ ಭಕ್ತವೃಂದವು ವೈಭವದ ಉತ್ಸವನ್ನು ಕಣ್ತುಂಬಿಕೊಂಡಿದ್ದು  ಸಾರ್ಥಕ ಕ್ಷಣಗಳಿಗೆ ಸಾಕ್ಷಿಯಾಯಿತು. ಕ್ಷೇತ್ರದ ಆಡಳಿತ ವರ್ಗ, ಪುರೋಹಿತರು, ಪೊಲೀಸ್ ಇಲಾಖೆ ಸಿಬ್ಬಂದಿಗಳು ಉತ್ಸವವನ್ನು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದರು.




-ವಿಜಯಕುಮಾರ ಹಿರೇಮಠ 

ದ್ವಿತೀಯ ಎಂ.ಎ

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ

ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರ, ಉಜಿರೆ




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top