ಧರ್ಮಸ್ಥಳ: ಶಿವನ ಮತ್ತು ಕೃಷ್ಣನ ವಿವಿಧ ಅವತಾರಗಳ ಮತ್ತು ಅವುಗಳೊಂದಿಗಿನ ವಿವಿಧ ಕಥಾನಕ ಪ್ರಸಂಗಗಳನ್ನು ನಿರೂಪಿಸುವಲ್ಲಿ ಮಂಜೇಶ್ವರ ನಾಟ್ಯ ನಿಲಯ ತಂಡವು ಯಶಸ್ವಿಯಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವದ ಪ್ರಯುಕ್ತ ಶನಿವಾರ ವಸ್ತು ಪ್ರದರ್ಶನ ಮಂಟಪದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯ ಮುಖಾಂತರ ಶಿವನ ಮತ್ತು ಕೃಷ್ಣನ ವಿವಿಧ ಅವತಾರ ವೇದಿಕೆಯಲ್ಲಿ ಅನಾವರಣಗೊಂಡವು.
ಡಾ. ಸಾತ್ವಿಕಾ ಕೃಷ್ಣ ಮಂಜೇಶ್ವರವರಿಂದ ಆರಂಭವಾದ ಚಂದ್ರಚೂಡ ಮತ್ತು ನರಸಿಂಹ ಅವತಾರದ ಕಥಾಭಾಗದ ನೃತ್ಯದಲ್ಲಿ ಪರಮೇಶ್ವರನನ್ನು ವಿಭಿನ್ನ ಬಿರುದುಗಳೊಂದಿಗೆ ಅವನ ಲೀಲೆಗಳ ಗುಣಗಾನ ಮಾಡಲಾಯಿತು. ಹಾಗೂ ಬಾಲಕೃಷ್ಣನು ಪುತಿನಿಯನ್ನು ಸಂಹಾರ ಮಾಡಿದ ಬಗೆಯನ್ನು ತಮ್ಮ ಕುಚುಪುಡಿ ನೃತ್ಯದ ಮೂಲಕ ಅದ್ಬುತ ಮುಖ ಭಾವಗಳೊಂದಿಗೆ ತೆರೆಯ ಮೇಲೆ ಪ್ರಸ್ತುತ ಪಡಿಸಿದರು.
ಪುರಂದರದಾಸರು ರಚಿಸಿದ ‘ನಿಲ್ಲಬೇಕಯ್ಯ ಕೃಷ್ಣ' ಸಂಗೀತದಲ್ಲಿ ದಾಸರು ಕೃಷ್ಣನ ಬಳಿ ಸದಾ ಹೃದಯದಲ್ಲಿ ನೆಲೆಸುವಂತೆ ಬೇಡಿಕೊಂಡ ಬಗೆಯು ವಿದ್ಯಾ ಕಾಸರಗೋಡುರವರ ನೃತ್ಯದಲ್ಲಿ ಸೊಗಸಾಗಿ ಮೂಡಿಬಂದಿದೆ. ನೀಲಗಗನದೊಳ್ ಮೇಘಗಳ ಎಂಬ ನೃತ್ಯದಲ್ಲಿ ನವಿಲು ಮಳೆಗಾಲದಲ್ಲಿ ಗರಿ ಬಿಚ್ಚಿ ಕುಣಿಯುವ ಬಗೆಯಲ್ಲಿ ಮಾಸ್ಟರ್ ಆಕಾಶ್ ಕೊಬ್ರಂಗಳ, ಸನಿಹಾ ಮಂಗಳೂರು, ಧಾತ್ರಿ ಧರ್ಮತಡ, ಆದ್ಯ ಗೌರಿ ಮಂಜೇಶ್ವರ, ವಿಧ್ಯಶ್ರೀ ಕಾಸರಗೋಡು, ಪ್ರಶಂಸಾ ಕಾಸರಗೋಡು, ಪ್ರಶಂಸಾ ಕುಂಜಕ್ಕೂರು, ಪೂರ್ವಿಕಿರಣ್ ಮಂಗಳೂರು,ಅನುಪ್ರಿಯಾ ಕಾಸರಗೋಡು, ದಿಯಾ ಶನೈ ಕಾಸರಗೋಡು, ತನಿಷಾ ಕಾಸರಗೋಡು, ಪ್ರಣತಿ ಬದಿಯಡ್ಕರವರ ಪ್ರದರ್ಶನ ನಾಟ್ಯ ಮಯೂರಿಯೇ ವೇದಿಕೆಯಲ್ಲಿ ನರ್ತಿಸಿದಂತಿತ್ತು.
ಶಂಕರ ನಾದಸ ನೀಲಾಪರ ಸಂಗೀತಕ್ಕೆ ನಾಟ್ಯ ನಿಲಯದ ಸಂಚಾರಿ ತಂಡದ ಸದಸ್ಯರಾದ ಕಿರಣ್ ಮಂಜೇಶ್ವರ, ಸನಿಹಾ ಮಂಗಳೂರು, ಧಾತ್ರಿ ಧರ್ಮತಡ್ಕ, ಶ್ರೀ ವಿಧ್ಯಾ ಕಾಸರಗೋಡು, ಆದ್ಯ ಗೌರಿ ಮಂಜೇಶ್ವರ, ತನಿಷಾ ಕಾಸರಗೋಡು,ಮಾನಸಾ ಕಾಸರಗೋಡು, ಪ್ರಶಂಸಾ ಮಂಜೇಶ್ವರ, ಪೂರ್ವಿ ಕಿರಣ್ ಮಂಗಳೂರು, ಅನುಪ್ರಿಯಾ ಕಾಸರಗೋಡು,ಪ್ರಣತಿ ಮದ್ಯಡ್ಕ ಹಾಗೂ ದಿವ್ಯಾ ಶಣಾಯ್ ಕಾಸರಗೋಡು,
ಶಂಭೋ ಶಿವ ಶಂಭೋ ನೃತ್ಯದಲ್ಲಿ ತಲೆ ಮೇಲೆ ಗಂಗೆ ಧರಿಸಿದ ಗಂಗಾಧರ, ಸ್ಮಶಾನವಾಸಿಯಾದ ಶಿವನ ರೌದ್ರ ಮತ್ತು ಶಾಂತ ರೂಪವನ್ನು ವಿದ್ವಾನ್ ಕಿರಣ್ ಮಂಜೇಶ್ವರ ಹಾಗೂ ಡಾ ಸಾತ್ವಿಕ ಕೃಷ್ಣ ಮಂಜೇಶ್ವರ ನೃತ್ಯ ಪ್ರದರ್ಶನ ನೀಡಿದರು. ಯಾವುದೇ ರೀತಿಯ ಧ್ವನಿ ಮುದ್ರಿಕೆಯ ಸಂಗೀತ ಬಳಸದೇ ಹಿಮ್ಮೇಳನದೊಂದಿಗೆ ಕಾರ್ಯಕ್ರಮ ನೀಡುವ ಹೆಗ್ಗಳಿಕೆ ಇವರದ್ದಾಗಿದೆ. ವೇದಿಕೆಯಲ್ಲಿ ನೃತ್ಯದ ತಾಳಕ್ಕೆ ತಕ್ಕಂತ ಹಾಡುಗಾರಿಕೆ, ವೀಣಾಲಯಂ, ಮೃದಂಗ,ಕೊಳಲು,ತಬಲದ ನಾದಗಳು ಶಾಸ್ತ್ರೀಯ ನೃತ್ಯ ಪ್ರೀಯರನ್ನು ಆಕರ್ಷಿಸಿತು.
ಹಿನ್ನೆಲೆ ಸಂಗೀತದಲ್ಲಿ ಹಾಡುಗಾರಿಕೆ ಶ್ರೀ ಉನ್ನಿ ಕೃಷ್ಣಂ, ವೀಣಾಲಯ ನೀಲೇಶ್ವರ ಶ್ರೀ ಸುರೇಶ್ ಕಾಯಂಗಾಡು, ಮೃದಂಗ ಶ್ರೀ ದೇವೀಶ್ ಉಡುಪಿ, ಕೊಳಲು ಸಮರ್ಥ್ ಮಂಗಳೂರು,ತಬಲಾ ಶ್ರೀ ಮನಿಯಾಳ್, ನೃತ್ಯ ನಿರ್ದೇಶನ ಮತ್ತು ನಟ್ವಾಂಗದಲ್ಲಿ ನಾಟ್ಯ ನಿಲಯಂ ಗುರುಗಳಾದ ಬಾಲಕೃಷ್ಣ ಮಂಜೇಶ್ವರ,ವ್ಯವಸ್ಥಾಪರು ಕಿರಣ್ ಕುಮಾರ್ ಮಂಜೇಶ್ವರ, ವರ್ಣಾಲಂಕಾರ ಕಿರಣ್ ಮಂಜೇಶ್ವರ ಹಾಗೂ ಕಿರಣ್ ಕಾಸರಗೋಡು ಇವರು ನಡೆಸಿಕೊಟ್ಟರು. ನೃತ್ಯ ಮತ್ತು ಸಂಗೀತಕ್ಕೆ ತಕ್ಕಂತಹ ಮುಖಭಾವನೆ, ನಾಟ್ಯ ಭಂಗಿಗಳು ನೆರೆದಿದ ಜನರ ಮೆಚ್ಚುಗೆಗೆ ಪಾತ್ರವಾಯಿತು.ಈ ನಾಟ್ಯ ಪ್ರದರ್ಶನವು ಶಿವ ಪ್ರಿಯರನ್ನು ಭಕ್ತಿ ಭಾವದೆಡೆಗೆ ಕೊಂಡೊಯ್ಯಿತು.
- ಲಿಖಿತಾ ಹೆಗಡೆ
ದ್ವಿತೀಯ ಎಂ.ಎ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ