ಲಕ್ಷದೀಪೋತ್ಸವದಲ್ಲಿ ಭರತನಾಟ್ಯ ರಸದೌತಣ

Upayuktha
0



ಧರ್ಮಸ್ಥಳ : ರಾಗ, ತಾಲಗಳಷ್ಟೇ ಅಲ್ಲ, ನೃತ್ಯಗಾರರು ಒಬ್ಬರಿಗೊಬ್ಬರು ಹುರಿದುಂಬಿಸಿದರೆ ಅದ್ಭುತ ನಾಟ್ಯ ಪ್ರದರ್ಶನ ಸಾಧ್ಯವೆಂದು ನಾಟ್ಯ ಪ್ರವೀಣೆ ಪ್ರಿಯದರ್ಶಿನಿ ವಾಸುದೇವ್ ರಾವ್ ತಂಡ ತೋರಿಸಿ ಕೊಟ್ಟಿದೆ. ನವ ರಸಗಳನ್ನು ಒಳಗೊಂಡ ನಾಟ್ಯ ಶೈಲಿ ನೆರೆದಿದ್ದವರನ್ನು ಮೂಕವಿಸ್ಮಿತರನ್ನಾಗಿಸಿತ್ತು. ಲಕ್ಷ ದೀಪೋತ್ಸವದ ಪ್ರಯುಕ್ತ ಶನಿವಾರ ವಸ್ತು ಪ್ರದರ್ಶನ ಮಂಟಪದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯವನ್ನು ಆಯೋಜಿಸಲಾಗಿತ್ತು. ಅರ್ಘ್ಯ ತಂಡದ ಭರತನಾಟ್ಯ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. 



 

ರಾಗ ಬೃಂದಾವನಿ ಸಾರಂಗ ಆದಿ ತಾಳದಲ್ಲಿ ಮೃತ್ಯಾಂಜಲಿ ನಾಟ್ಯ ಪ್ರದರ್ಶನ ಸುತ್ತಲಿನ ಜನರಲ್ಲಿ ಭರತನಾಟ್ಯವನ್ನು ನೋಡಲು ಆಸಕ್ತಿ ಮೂಡುವಂತೆ ಮಾಡಿತು. ನಂತರ ಎಲ್ಲಾ ಅಡೆತಡೆಗಳನ್ನು ನಿವಾರಿಸುವ ಭಗವಾನ್ ಗಣೇಶನನ್ನು ಪೂಜಿಸುವ ವರ್ಣ ರಾಗ ಆದಿ ಕಮಾಜ್‌ನಲ್ಲಿ ಗಣೇಶ ಸ್ತುತಿ ನಾಟ್ಯವನ್ನು ಪ್ರದರ್ಶಿಸಿದರು. ರಂಜನಿ ರಾಗ ಆದಿ ತಾಳದಲ್ಲಿ ನರ್ತಕ ಭಗವಾನ್ ಶಿವನನ್ನು ಸ್ತುತಿಸುತ್ತಾ ಶಿವಸ್ತುತಿ ಏಕ ವ್ಯಕ್ತಿ ನೃತ್ಯವನ್ನು ಸುಂದರವಾಗಿ ಮಾಡಿ, ಜನರಿಗೆ ಶಿವನ ನಾಟ್ಯದ ಮಹತ್ವವನ್ನು ತಿಳಿಯುವಂತೆ ನೃತ್ಯ ಮಾಡಿದರು. ಕೊನೆಯದಾಗಿ ಸಿಂಹೇಂದ್ರ  ಮಧ್ಯಮ ರಾಗ ಆದಿ ತಾಳದಲ್ಲಿ ತಿಲ್ಲಾನ ನೃತ್ಯವನ್ನು ಲಯಬದ್ಧವಾಗಿ ಸಂಗೀತದ ಜೊತೆಗೆ ಪ್ರದರ್ಶಿಸಿದರು. 


 

ಸುಮಾರು ಒಂದು ಗಂಟೆಗಳ ಅವಧಿಯ ಭರತನಾಟ್ಯ ಪ್ರೇಕ್ಷಕರನ್ನು ರಂಜಿಸಿತು. ಪ್ರಿಯದರ್ಶಿನಿ ನಾಟ್ಯ ತಂಡ ತಮ್ಮ ನಾಟ್ಯ ಪ್ರದರ್ಶನದ ಮೂಲಕ ಕಾರ್ಯಕ್ರಮದ ಮೆರುಗನ್ನು ಇಮ್ಮಡಿಗೊಳಿಸಿದರು. 



-ಅಪೂರ್ವ 

ದ್ವಿತೀಯ ಎಂ.ಎ 

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ 

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top