ಲಕ್ಷದೀಪೋತ್ಸವದ ಪ್ರಯುಕ್ತ ಶಾಸ್ತ್ರೀಯ ಗಾನಸುಧೆ

Upayuktha
0



ಧರ್ಮಸ್ಥಳ: ರಾಗ ತಾಳಗಳಷ್ಟೇ ಅಲ್ಲ, ವಾದಕರು ಮತ್ತು ಗಾಯಕರು ಒಬ್ಬರಿಗೊಬ್ಬರು ವೇದಿಕೆಯಲ್ಲಿ ಹುರಿದುಂಬಿಸಿದರೆ ಅದ್ಭುತ ಸಂಗೀತವನ್ನು ಹೊಮ್ಮಿಸಬಹುದೆಂದು ಗಾಯಕಿ ವಿದುಷಿ ಶೃತಿ ಎಸ್. ಭಟ್ ನೇತೃತ್ವದ ಯುವ ಕಲಾಭಾರತಿ ತಂಡವು ತೋರಿಸಿ ಕೊಟ್ಟಿದೆ. ಇವರ ಗಾನ ಸುಧೆಯಿಂದೆ ಸಂಗೀತ ಪ್ರಿಯರ ಮನ ಸಮೃದ್ಧವಾಯಿತು. ಪಿಟೀಲು, ಮೃದಂಗ ಮತ್ತು ಗಾಯಕರ ಜುಗಲ್‍ಬಂದಿ ಕೇಳುಗರ ಮನಸ್ಸನ್ನು ಸಂಗೀತದೊಳಗೆ ಬಂಧಿಸಿಟ್ಟಿತ್ತು.




ಲಕ್ಷದೀಪೋತ್ಸವದ ಪ್ರಯುಕ್ತ ಶನಿವಾರ ವಸ್ತುಪ್ರದರ್ಶನ ಮಂಟಪದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ನಡೆದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ಶಾಸ್ತ್ರೀಯ ಸಂಗೀತ ನೆರೆದಿದ್ದವರ ತಲೆದೂಗುವಂತೆ ಮಾಡಿದವು.




ಗಣಪತಿಯಲ್ಲಿ ನಿರ್ವಘ್ನಕ್ಕಾಗಿ ಬೇಡುತ್ತಾ ಸಂಗೀತ ಪ್ರಾರಂಭವಾಯಿತು. ನಂಬಿ ಬಂದಿಹೆ ಸಲಹು ಇಷ್ಟಾರ್ಥದಾಯೇ ಎಂದು ಕುಡುಮಪುರ ವಾಸಿನಿಯನ್ನು ಆಲಾಪದಿಂದ ಅರ್ಚಿಸಿದರು. ಪರಮ ಶಾಂಭವನನ್ನು ಸರಸ ಸಾಮ ದಾನ ಬೇಧ ದಂಡ ಚತುರ ಎಂದು ಸಂಗತಿಗಳೊಟ್ಟಿಗೆ ಗುಣಗಾನ ಮಾಡಿದರು. ರಘುವರನನ್ನು ಭಜಿಸಿ ಶಂಕರನ ಪಾದಾರವಿಂದಗಳಲ್ಲಿ ಮಂಗಳ ಹಾಡಿದರು. ನಡುವೆ ವಾದ್ಯ ವಾದಕರು ತಮ್ಮ ಪ್ರಾವೀಣ್ಯತೆಯನ್ನು ಮೆರೆದರು.




ಪಿಟೀಲು ವಾದಕಿ ಶ್ರೀಲಕ್ಷ್ಮೀ ಎಸ್. ಭಟ್ ಕೇಳುಗರ ಮನಸ್ಸನ್ನು ಪರವಶಗೊಳಿಸಿದರು. ಕೆ. ಆರ್ ರಕ್ಷಿತ್ ಶರ್ಮ ಮೃದಂಗವನ್ನು ಪಕ್ವವಾಗಿ ನುಡಿಸಿದರು. ಸುಮುಖರ ಕಂಜಿಲು ವಾದನ ಸಂಗೀತಕ್ಕೆ ವಿಶೇಷ ಕಳೆ ತಂದುಕೊಟ್ಟಿತು. 




-ಅಮಿತ ಹೆಬ್ಬಾರ್

ದ್ವಿತೀಯ ಎಂ.ಎ

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 






Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top