ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳು: ಮಹಾತ್ಮ ಗಾಂಧಿ ಮ್ಯೂಸಿಯಂ ಉದ್ಘಾಟನೆ

Upayuktha
0


ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಕೆನರಾ ಸಮೂಹ ಶಿಕ್ಷಣ ಸಂಸ್ಥೆ ಮಂಗಳೂರು ಇದರ ಹಳೆ ವಿದ್ಯಾರ್ಥಿಗಳ ಜಾಗತಿಕ ಸಮ್ಮಿಲನ-2023 ಇಂದು ಭಾನುವಾರ ಕೆನರಾ ಪ್ರೌಢಶಾಲೆ, ಕೊಡಿಯಾಲ್ ಬೈಲ್ ಇಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಶತಮಾನಗಳಷ್ಟು ಹಳೆಯದಾದ ಮಹಾತ್ಮ ಗಾಂಧಿ ಮ್ಯೂಸಿಯಂನ ಉದ್ಘಾಟನೆಯು ನೆರವೇರಿತು.


ಭಾರತ ಸರಕಾರದ ಪುರಾತತ್ವ ಮತ್ತುಉತ್ಖನನ ಇಲಾಖೆಯ ಮಾಜಿ ನಿರ್ದೇಶಕರಾದ ರಾಮಚಂದ್ರ ಹೆಗಡೆ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಮಾಜಿ ಪ್ರಾಧ್ಯಾಪಕರು ಮುರುಗೇಶ್ ತುರುವೇಕೆರೆ, ಕೇರಳ ಸರ್ಕಾರದ ಪುರಾತತ್ವ ಇಲಾಖೆಯ ಡಾ.ವಿ.ಆರ್.ಶಾಜಿ, ಪ್ರಭಾಕರ ಕಿಣಿ, ರಾಮದಾಸ್ ಪ್ರಭು,ಮಹಾತ್ಮ ಗಾಂಧಿ ಮ್ಯೂಸಿಯಂನ ಪುನರ್ವಿನ್ಯಾಸಕ್ಕೆ ಕೊಡುಗೆ ನೀಡಿದ ಸುಜಯ್ ಲೋಬೋ ದೀಪ ಬೆಳಗಿಸಿ ಮ್ಯೂಸಿಯಂನ ಉದ್ಘಾಟನೆ ಮಾಡಿದರು. ಮ್ಯೂಸಿಯಂ ನಿರ್ದೇಶಕರಾದ ಪಯ್ಯನೂರು ರಮೇಶ್ ಪೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಕೆನರಾ ಹಳೆ ವಿದ್ಯಾರ್ಥಿಗಳ ಜಾಗತಿಕ ಸಮಾವೇಶದ ದಿನ ಜರುಗಿದ ಈ ವಿಶಿಷ್ಟ ಪೂರ್ಣ ಕಾರ್ಯಕ್ರಮವು ಪುರಾತನ ವಸ್ತುಗಳು ಹಾಗೂ ಶಾಸನ ಶಾಸ್ತ್ರದ ಆಸಕ್ತಿ ಉಳ್ಳವರ ಮನಸೆಳೆಯಿತು. ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಈ ಮ್ಯೂಸಿಯಂನ ವೀಕ್ಷಣೆಗೆ ಮುಕ್ತ ಅವಕಾಶವನ್ನು ನೀಡಲಾಯಿತು.


ಕೆನರಾ ಆಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಕಾಮತ್, ಕಾರ್ಯದರ್ಶಿ ಎಂ.ರಂಗನಾಥ್ ಭಟ್, ಸದಸ್ಯರಾದ ಸುರೇಶ್ ಕಾಮತ್, ಗೋಪಾಲಕೃಷ್ಣ ಶೆಣೈ, CA ಎಂ.ವಾಮನ್ ಕಾಮತ್, ಬಸ್ತಿ ಪುರುಷೋತ್ತಮ ಶೆಣೈ, ಶಿವಾನಂದ ಶೆಣೈ, ಯೋಗೀಶ್ ಕಾಮತ್, ನರೇಶ್ ಶೆಣೈ, ಶ್ರೀಮತಿ ಅಶ್ವಿನಿ ಕಾಮತ್, ಗೋಪಿನಾಥ್ ಭಟ್, ಯೋಗೀಶ್ ಕಾಮತ್, ಆಡಳಿತ ಅಧಿಕಾರಿ ಡಾ. ದೀಪ್ತಿ ನಾಯಕ್, ಪಿ ಆರ್ ಒ ಶ್ರೀಮತಿ ಉಜ್ವಲ್ ಮಲ್ಯ, ಸಮ್ಮಿಲನದ ಉಸ್ತುವಾರಿ ಗೋಪಾಲಕೃಷ್ಣ ಶೆಟ್ಟಿ, ಕೆನರಾ ಸಹೋದರಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರುಗಳು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ, ಸಂಸ್ಥೆಯ ಹಳೆಯ ಹಿರಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top