ಹಂಸ ಜ್ಯೋತಿ ಟ್ರಸ್ಟ್ ನಿಂದ ಕಿದ್ವಾಯಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಗಳ ವಿತರಣೆ

Upayuktha
0


ಬೆಂಗಳೂರು: ಬೆಂಗಳೂರಿನ ಹಂಸ ಜ್ಯೋತಿ ಟ್ರಸ್ಟ್ 68ನೇ ಕನ್ನಡ ನಾಡ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿತು. ಹಂಸ ಸಾಂಸ್ಕೃತಿಕ ಸಾಮಾಜಿಕ ಸಿಂಚನ ಎಂಬ ಕಾರ್ಯಕ್ರಮದಡಿ ಕಿದ್ವಾಯಿ ಸ್ಮಾರಕ ಗ್ರಂಥಿ ರೋಗಿಗಳಿಗೆ ಆಸ್ಪತ್ರೆಯ ಬೆಳಗಿನ ಉಪಹಾರ ಹಣ್ಣು ಮತ್ತು ಸಿಹಿ ವಿತರಣೆಯನ್ನು ಮಾಡಲಾಯಿತು.


ಅನೇಕ ಪೌಷ್ಟಿಕಾಂಶ ಇರುವ ಬಾಳೆಹಣ್ಣು, ಸೀಬೆ, ಸೇಬು, ಮೂಸಂಬಿ, ಸಪೋಟ, ದಾಳಿಂಬೆ, ಕರಬೂಜ ಕಿತ್ತಳೆ ಹಾಗೂ ಔಷಧೀಯ ಗುಣವುಳ್ಳ ಸೌತೆಕಾಯಿ ಮುಂತಾದ ವಿವಿಧ ಬಗೆಯ ಹಣ್ಣುಗಳನ್ನು ಮತ್ತು ಮಕ್ಕಳಿಗೆ ಒಣ ಹಣ್ಣುಗಳನ್ನು ರೋಗಿಗಳಿಗೆ ವಿತರಿಸುವ ಮೂಲಕ ಮಾನವೀಯ ನೆಲೆಯಲ್ಲಿ ವಿತರಿಸಲಾಯಿತು. ಸಾಮಾಜಿಕ ಕಳಕಳಿಯುಳ್ಳ ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿ ಭವನದ ಮಾಲೀಕರಾದ ಎಸ್ ರಾಮಕೃಷ್ಣ ಅಡಿಗ, ಹಿರಿಯ ರಂಗಸಂಘಟಕ ಶ್ರೀನಿವಾಸ ಜಿ ಕಪ್ಪಣ್ಣ, ಎನ್ಟಿಪಿಸಿಯ ಮುಖ್ಯ ಸಲಹೆಗಾರ ಎಂ ಬಿ ಜಯರಾಮ್, ಬೆಂಗಳೂರು ನಗರ ಜಿಲ್ಲೆ ಅಬಕಾರಿ ಇಲಾಖೆಯ ಉಪ ಆಯುಕ್ತ ಡಾ. ಬಿ ಆರ್ ಹಿರೇಮಠ, ಆರ್ ಶ್ರೀನಿವಾಸ್ ಮೊದಲಾದ ಸಹೃದಯಿ ದಾನಿಗಳು ಅನೇಕರು ಕೈಜೋಡಿಸಿ ಯಶಸ್ವಿಗೊಳಿಸಿದರು ಎಂದು ಆಯೋಜಕರಾದ ಎಮ್ ಮುರಳಿಧರ ತಿಳಿಸಿರುತ್ತಾರೆ.

Post a Comment

0 Comments
Post a Comment (0)
Advt Slider:
To Top