ಬೆಂಗಳೂರು: ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಗ್ಲೋಬಲ್ ಯೋಗ ಸಮಿಟ್ 2023 ಸಮಾರಂಭದಲ್ಲಿ ಅಂಕಣಕಾರ, ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಕಾರ್ಯನಿರ್ವಾಹಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರಿಗೆ ಪ್ರತಿಷ್ಠಿತ 'ಯುವ ವಿಕಾಸ ಪ್ರಶಸ್ತಿ 'ನೀಡಿ ಗೌರವಿಸಲಾಯಿತು.
ಭಾರತ ವಿಕಾಸ ಸಂಗಮದ ವತಿಯಿಂದ ಆಯೋಜಿಸಲಾಗಿದ್ದ ಯುವಶಕ್ತಿ ಸಂಗಮದಲ್ಲಿ ಶ್ರೀಯುತರು ಮಾಧ್ಯಮಗಳ ಮೂಲಕ ನಡೆಸುತ್ತಿರುವ ಆಧ್ಯಾತ್ಮಿಕ ಜಾಗೃತಿಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಕಾರ್ಯಕ್ರಮದ ಮುಖ್ಯ ಸಂಯೋಜಕ ಭಾರತೀಯ ವಿಕಾಸ ಪರಿಷತ್ ಅಕಾಡೆಮಿಕ್ ಡೀನ್ ಸೇಡಂನ ಡಾ. ವಾಸುದೇವ ಅಗ್ನಿಹೋತ್ರಿ ತಿಳಿಸಿರುತ್ತಾರೆ.
ವಿಚಾರ ಸಂಕಿರಣದಲ್ಲಿ ಖ್ಯಾತ ಲೆಕ್ಕಪತ್ರ ಪರಿಶೋಧಕ ಬಿವಿಎಸ್‌ನ ರಾಜ್ಯ ಸಂಚಾಲಕ ಮತ್ತು ರಾಷ್ಟ್ರೀಯ ಖಜಾಂಚಿ ಡಾ.ಸಿ ಆರ್ ಡವಳಗಿ, ಪತ್ರಕರ್ತ ಸೇಡಂನ ಪ್ರಭಾಕರ ಜೋಶಿ, ಡಾ. ವಾಸುದೇವ ದೇಶಪಾಂಡೆ, ಎಂ.ಡಿ ಪಾಟೀಲ್, ಡಾ ಶಾಂತಣ್ಣ ಕಡಿವಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಖ್ಯಾತ ವೇದ ಗಣಿತ ಶಾಸ್ತ್ರಜ್ಞ ವೈ.ಎಸ್ ಗಾಯತ್ರಿ ಹಾಗೂ ಹರಿದಾಸ ಸಾಹಿತ್ಯ ಸಂಶೋಧಕಿ ರಮ ಕಲ್ಲೂರ್ಕರ್ ರವರಿಗೆ ಮಾತೃ ಶಕ್ತಿ ಸಂಗಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ