ಶ್ರೀ ಕ್ಷೇತ್ರ ಬದನಡಿ: ಸಂಭ್ರಮದ ಷಷ್ಠಿ ಮಹೋತ್ಸವ, ಭಜನೆ ಸಹಿತ ಪಲ್ಲಕಿ ಉತ್ಸವ

Upayuktha
0


ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಬದನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ಪ್ರಯುಕ್ತ ಸೋಮವಾರ ಮಧ್ಯಾಹ್ನ ಭಜನೆ ಸಹಿತ ದೇವರ ಪಲ್ಲಕಿ ಉತ್ಸವ ನಡೆಯಿತು.


ಇಲ್ಲಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ಸಂಭ್ರಮ ಸಡಗರದಿಂದ ಸೋಮವಾರ ನಡೆಯಿತು. ಕ್ಷೇತ್ರದ ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯರ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಕೆ. ಸುಂದರ ರಾವ್ ಮತ್ತು ಅರ್ಚಕ ನಾಗೇಶ ರಾವ್ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.


ಇದೇ ವೇಳೆ ದೇವರ ಬಲಿ, ನೃತ್ಯ ಭಜನೆ ಸಹಿತಪಲ್ಲಕಿ ಉತ್ಸವ, ಸಾಮೂಹಿಕ ಆಶ್ಲೇಷ ಬಲಿ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು. 


ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ, ಸದಸ್ಯರಾದ ರಾಜೇಶ ಗೋವಿಂದಬೆಟ್ಟು, ಶರತ್ ಕುಮಾರ್ ಕೊಯಿಲ, ಆನಂದ ಬುರಾಲು, ಲೋಕೇಶ ಕೈತ್ರೋಡಿ, ನಳಿನಿ ಬದನಡಿ, ಯಮುನಾ ಕೈತ್ರೋಡಿ, ವಾಸ್ತುಶಿಲ್ಪಿ ಮೋನಪ್ಪ ಆಚಾರ್ಯ ಬೈದಗುತ್ತು, ರಾಯಿ ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ಮಾಜಿ ಅಧ್ಯಕ್ಷರಾದ ಬಿ.ದಯಾನಂದ ಸಪಲ್ಯ, ಹರೀಶ ಆಚಾರ್ಯ ರಾಯಿ, ರತ್ನಾ ಆನಂದ, ಸದಸ್ಯೆ ಶೋಭಾ ಎನ್.ಚಿಂಗಲಚ್ಚಿಲ್, ಸಿದ್ಧಕಟ್ಟೆ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಶೆಟ್ಟ್ಟಿಗಾರ್, ಸದಸ್ಯರಾದ ಕಿರಣ್ ಕುಮಾರ್ ಮಂಜಿಲ, ವಕೀಲ ಸುರೇಶ ಶೆಟ್ಟಿ, ಪ್ರಮುಖರಾದ ಪ್ರಕಾಶ್ ಕುಮಾರ್ ಜೈನ್, ಮೋಹನ್ ಕೆ.ಶ್ರೀಯಾನ್, ಆನಂದ ಪೂಜಾರಿ ಅಂತರ, ಜಗದೀಶ ಕೊಯಿಲ, ದಿನೇಶ ಸುವರ್ಣ, ಚಂದ್ರಶೇಖರ ಆಚಾರ್ಯ, ಮಧುಕರ ಬಂಗೇರ, ರಂಜನ್ ಶೆಟ್ಟಿ ಅರಳ, ಭಜನಾ ಮಂಡಳಿ ಅಧ್ಯಕ್ಷ ಸಂದೇಶ ಕೊಯಿಲ ಮತ್ತಿತರರಿದ್ದರು. ಕಡಂದಲೆ ಸೋಮನಾಥೇಶ್ವರ ಭಜನಾ ಮಂಡಳಿ ತಂಡವು ಸಾರ್ವಜನಿಕ ಅನ್ನಸಂತರ್ಪಣೆ ವೇಳೆ ವಿಶೇಷ ಭಜನೆ ಸೇವೆ ಸಲ್ಲಿಸಿ ಗಮನ ಸೆಳೆದರು.


ಸಂಜೆ ಪರಿವಾರ ದೈವಗಳ ಭಂಡಾರ ಇಳಿದು ಮೈಸಂದಾಯ ದೈವದ ನೇಮ, ಭಜನೆ, ದುರ್ಗಾ  ನಮಸ್ಕಾರ ಪೂಜೆ, ರಾತ್ರಿ ರಕ್ತೇಶ್ವರಿ, ಕಲ್ಲುರ್ಟಿ, ಅಣ್ಣಪ್ಪ ಪಂಜುರ್ಲಿ  ದೈವಗಳ ನೇಮ ನಡೆಯಿತು.

 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top