ಮಂಗಳೂರು: ಈ ವರ್ಷದ ಕ್ರಿಸ್‍ಮಸ್ ಮತ್ತು ವರ್ಷಾಂತ್ಯದ ಹಬ್ಬದ ಆಚರಣೆಗೆ ಫಿಝಾದ ನೆಕ್ಸಸ್ ಮಾಲ್ ವಿಶೇಷ ಉಡುಗೊರೆಗಳನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಫಿಝಾದ ನೆಕ್ಸಸ್ ಮಾಲ್ ನಲ್ಲಿ 200 ಕ್ಕೂ ಹೆಚ್ಚು ಬ್ರ್ಯಾಂಡ್ ಗಳ ಮಾರಾಟ ಮೇಳವನ್ನು ಆಯೋಜಿಸಿದೆ. ಈ ಬ್ರ್ಯಾಂಡ್ ಗಳ ಖರೀದಿ ಮೇಲೆ ಖಾತರಿಪಡಿಸಿದ ಬಹುಮಾನಗಳು ಇರುತ್ತವೆ.
ಕ್ರಿಸ್ಮಸ್ ಮೇಳ ಈಗಾಗಲೇ ಆರಂಭವಾಗಿದ್ದು, ಜೀಸಸ್ ಜನ್ಮದಿನದ ಗೌರವವಾಗಿ ಡಿಸೆಂಬರ್ 22 ರಂದು ಮಾಲ್ ಕ್ರಿಸ್ಮಸ್ ಕ್ರಿಬ್ ಮೇಕಿಂಗ್ ಸ್ಪರ್ಧೆಯನ್ನು ಏರ್ಪಡಿಸಿದೆ. ಮಾಲ್‍ಗೆ ಆಗಮಿಸುವ ಪ್ರತಿಯೊಬ್ಬರೂ ತಮ್ಮಲ್ಲಿರುವ ಸೃಜನಶೀಲತೆಯನ್ನು ಪ್ರದರ್ಶಿಸಲು ಮತ್ತು ಸಡಗರ ಸಂಭ್ರಮದಿಂದ ಕ್ರಿಸ್ಮಸ್ ಆಚರಣೆ ಮಾಡಲು ಅವಕಾಶ. ಡಿಸೆಂಬರ್ 22 ರಿಂದ ಡಿಸೆಂಬರ್ 25 ರವರೆಗೆ ಸ್ಪೆಷಲ್ ಕ್ರಿಸ್ಮಸ್ ಕಾರ್ನಿವಲ್ ನಲ್ಲಿ ಹಲವು ಬಗೆಯ ಮನರಂಜನಾ ಕಾರ್ಯಕ್ರಮಗಳು ಇರಲಿವೆ ಎಂದು ಪ್ರಕಟಣೆ ಹೇಳಿದೆ.
ಇದಲ್ಲದೇ, ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಾಂಪ್ರದಾಯಿಕ ಉಡುಗೆ ತೊಟ್ಟ ಕ್ರಿಸ್ಮಸ್ ಕೆರೋಲ್‍ಗಳಿರಲಿವೆ. ಲೇಡೀಸ್ ಮಾರ್ಕೆಟ್, ಕೇಕ್ ಫೆಸ್ಟ್ ಎಕ್ಸ್ಟ್ರಾವಗೆಂಜಾ, ಲೈವ್ ಮ್ಯೂಸಿಕ್ ಸ್ಪೆಕ್ಟಾಕ್ಯುಲರ್ ಮತ್ತು ಸಂತಾದೊಂದಿಗೆ ಮೀಟ್ & ಗ್ರೀಟ್ ಕಾರ್ಯಕ್ರಮಗಳೂ ಇರಲಿವೆ. ಡಿಸೆಂಬರ್ 29 ರಂದು ಲೈವ್ ಬೈಲಾ ನೈಟ್ ಇರಲಿದ್ದು, 31ರ ವರೆಗೂ ಆಚರಣೆ ಇರುತ್ತದೆ. ಎಚ್ & ಎಂ, ಟೈಂಝೋನ್, ಸೆಂಟ್ರೋ, ಪ್ಯಾಂಟಲೂನ್ಸ್, ಹರ್ಷ, ಝುಡಿಯೋ, ಲೈಫ್ ಸ್ಟೈಲ್, ಮ್ಯಾಕ್ಸ್ ಸೇರಿದಂತೆ ಇನ್ನಿತರೆ ಬ್ರ್ಯಾಂಡ್ ಗಳ ಹಬ್ಬದ ತೀರುವಳಿ ಮಾರಾಟ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ