ಉಡುಪಿಯ ಶ್ರೀಕೃಷ್ಣನಿಗೆ ಡಿ.31ರಂದು ಕೋಟಿ ತುಳಸಿ ಅರ್ಚನೆ

Upayuktha
0


ಉಡುಪಿ: ಉಡುಪಿಯ ಶ್ರೀಕೃಷ್ಣನಿಗೆ ಡಿ.31ರಂದು ಕೋಟಿ ತುಳಸಿ ಅರ್ಚನೆ ನೆರವೇರಿಸಲು ವಿವಿಧ ಸಂಘಟನೆಗಳೊಂದಿಗೆ ಭಕ್ತರು ನಿರ್ಧರಿಸಿದ್ದಾರೆ.



ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯ ಹಾಗೂ ಶ್ರೀಶ್ರೀ ವಿದ್ಯಾಸಾಗರ ಶ್ರೀಪಾದರ ಅನುಗ್ರಹದೊಂದಿಗೆ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಸಭಾ ಕಡಿಯಾಳಿ ಶಾಖೆಯು ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ಉಡುಪಿ-ದಕ ಜಿಲ್ಲೆಯ ಎಲ್ಲಾ ಬ್ರಾಹ್ಮಣ ಸಮುದಾಯದ ಸಹಾಯ ಸಹಕಾರದೊಂದಿಗೆ ರುಕ್ಮಿಣೀಕರಾರ್ಚಿತ ಶ್ರೀಕೃಷ್ಣನಿಗೆ ನಾಲ್ಕಾವರ್ತಿ ಶ್ರೀ ವಿಷ್ಣು ಸಹಸ್ರ ನಾಮಾವಳೀ ಸಹಿತ "ಕೋಟಿ ತುಳಸಿ ಅರ್ಚನೆ" ಯನ್ನು ನಡೆಸಲಿದ್ದಾರೆ.


ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಡಿ.31ರ ಭಾನುವಾರ ಮುಂಜಾನೆ 7.30ರಿಂದ 12 ಗಂಟೆಯವರೆಗೆ ಕೋಟಿ ತುಳಸಿ ಅರ್ಚನೆ  ನಡೆಸುವ ಸಂಕಲ್ಪ ಮಾಡಿದ್ದು ಈ ಬಗ್ಗೆ ಕಡಿಯಾಳಿಯ ಕಾತ್ಯಾಯಿನಿ ಸಭಾ ಭವನದಲ್ಲಿ ಸಮಾಲೋಚನೆ ಹಾಗೂ ಪೂರ್ವಭಾವೀ ಸಭೆಯನ್ನು ನಡೆಸಲಾಯಿತು.


ಅತಿಥಿಗಳಾದ ಬ್ರಾಹ್ಮಣ ಮಹಾಸಭಾ ಉಡುಪಿ ಜಿಲ್ಲೆಯ ಅಧ್ಯಕ್ಷ ಸುಧಾಕರ ಭಟ್, ನಿಯೋಜಿತ ಅಧ್ಯಕ್ಷ ಸಂದೀಪ ಕುಮಾರ ಮಂಜ, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯ, ವಿಪ್ರ ಮಹಿಳಾ ಅಧ್ಯಕ್ಷೆ ಶೋಭಾ ಶ್ರೀನಿವಾಸ ಉಪಾಧ್ಯ ಕಾರ್ಯಕ್ರಮದ ಬಗ್ಗೆ ಮಾತನಾಡಿದರು.


ತಮ್ಮಿಂದಾದ ತನು ಮನ ಧನ ಇತ್ಯಾದಿ ಸಂಪೂರ್ಣ ಸಹಕಾರ ನೀಡುವುದರೊಂದಿಗೆ ಈ ಪುಣ್ಯ ಯಜ್ಞದ ಗುರಿ ತಲುಪಲು ಅಗತ್ಯವಿರುವ ಸುಮಾರು 2500 ಕ್ಕೂ ಮಿಕ್ಕಿ ಬ್ರಾಹ್ಮಣ ಬಂಧುಗಳನ್ನು ಸೇರಿಸುವಲ್ಲಿ ಪ್ರಯತ್ನಿಸುವ ಭರವಸೆಯನ್ನು ನೀಡಿದರು. ವೇದಿಕೆಯಲ್ಲಿ ತುಶಿಮಾಮ ಮಾತೃ ಸಂಸ್ಥೆಯ ಅಧ್ಯಕ್ಷ ರವಿ ಪ್ರಕಾಶ್ ಕಾರ್ಯದರ್ಶಿ ಜಯರಾಮ ಆಚಾರ್ಯ ಗೌರವಾಧ್ಯಕ್ಷ ಅರವಿಂದಾಚಾರ್ಯ ಹಾಗೂ ಕಡಿಯಾಳಿ ಶಾಖೆಯ ಅಧ್ಯಕ್ಷ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹವ್ಯಕ ಸಭಾ ಅಧ್ಯಕ್ಷ ಪಾದೆಕಲ್ಲು ವಿಷ್ಣು ಭಟ್, ತೌಳವ ಮಾಧ್ವ ಮಂಡಲದ ಅಧ್ಯಕ್ಷ ವೆಂಕಟೇಶ್ ಭಟ್, ಬೈಲೂರು, ಕೊಡವೂರು, ಹೆಬ್ರಿ, ಕಡಿಯಾಳಿ ವಲಯದ ಅಧ್ಯಕ್ಷರು, ಕೂಟ ಮಹಾಜಗತ್ತು, ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್, ಶ್ರೀಕೃಷ್ಣ ಮಠದ ವಿಷ್ಣು ಸಹಸ್ರ ನಾಮಾವಳಿ ಬಳಗ ಹೀಗೆ ಹಲವು ಬ್ರಾಹ್ಮಣ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದು ಸಲಹೆ ಸೂಚನೆಗಳನ್ನು ನೀಡಿ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ನೀಡಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top