ಬೆಂಗಳೂರು: ತ್ಯಾಗರಾಜನಗರದಲ್ಲಿರುವ ಶ್ರೀ ಅಭಯಗಿರಿ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಡಿ.01 ರಂದು ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಮತಿ ರೂಪಾ ಪ್ರಭಂಜನ ಅವರು ನಡೆಸಿಕೊಟ್ಟ "ಹರಿದಾಸರು ಕಂಡ ನರಸಿಂಹ" ಶೀರ್ಷಿಕೆಯ ಆರಂಭದಲ್ಲಿ ಗಣೇಶ, ಮತ್ತು ಲಕ್ಷ್ಮೀದೇವಿಯ ಕೃತಿಗಳಾದ "ಲಂಬೋದರ ರಕ್ತಂಬರಧರ", "ಕ್ಷೀರಭಿಕನ್ನಿಕೆ ಶ್ರೀ ಮಹಾಲಕ್ಷ್ಮಿ" ಎಂಬ ಈ ಎರಡು ಹಾಡುಗಳನ್ನು ತಾರತಮ್ಯೋಕ್ತವಾಗಿ ಹಾಡಿ ನಂತರ ಎಲ್ಲಾ ನರಸಿಂಹನ ದೇವರನ್ನು ಕುರಿತ ಕೃತಿಗಳಾದ "ನರಸಿಂಹನ ಪಾದ ಭಜನೆಯ ಮಾಡೋ", "ನರಸಿಂಹ ಪಾಹಿ ಲಕ್ಷ್ಮಿ ನರಸಿಂಹ", "ನರಮೃಗ ರೂಪನ ನೋಡಿ","ನಾರಸಿಂಹನೆಂಬೋ ದೇವನು","ಮಹದಾದಿ ದೇವ ನಮೋ", "ಕಾಯೋ ಶ್ರೀ ನಾರಸಿಂಹ ಕಾಯೋ", "ಭಳಿರೆ ಭಳಿರೆ ನರಸಿಂಹ", "ಆವಾತ ಬಲ ನಿನಗೆ ಹೇ ಪ್ರಹ್ಲಾದ" ಮತ್ತು "ಮಂಗಳಂ ನರಸಿಂಗ ಮೂರುತಿಗೆ" ಎಂಬ ಕೃತಿಯೊಂದಿಗೆ ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.
ದೇವಸ್ಥಾನದ ಅರ್ಚಕರು, ಪದಾಧಿಕಾರಿಗಳೂ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತಾದಿಗಳು ಪ್ರತಿಯೊಂದು ಹಾಡಿಗೂ ಕರಕಾಂಡವ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಇವರ ಗಾಯನಕ್ಕೆ ವಿದ್ವಾನ್ ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಅವರು ಮೃದಂಗ ವಾದನದಲ್ಲಿ ಸಾಥ್ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ