ಪುತ್ತೂರು: ಕರ್ನಾಟಕ 'ರಾಜ್ಯ ವೈಟ್ ಲಿಫ್ಟರ್ಸ್ ಎಸೋಶಿಯೇಷನ್' ವತಿಯಿಂದ ಬೆಂಗಳೂರಿನಲ್ಲಿ ನವಂಬರ್ 18 ಮತ್ತು 19ರಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಭಾರ ಎತ್ತುವ ಸ್ಪರ್ಧೆಯಲ್ಲಿ ಪೃಥ್ವಿ ಭಾಗವಹಿಸಿ ಬೆಳ್ಳಿಯ ಪದಕವನ್ನು ಪಡೆದಿರುತ್ತಾಳೆ.
ಈಕೆ ಪರ್ಪುಂಜದಲ್ಲಿರುವ ಸೌಗಂಧಿಕಾ ನರ್ಸರಿಯ ಮಾಲಕರಾದ ಚಂದ್ರ ಸೌಗಂಧಿಕಾ ಮತ್ತು ವಿದ್ಯಾಲಕ್ಷ್ಮಿಯವರ ಪುತ್ರಿ.
ಸಂತ ಫಿಲೋಮಿನಾ ಕಾಲೇಜಿನ ಪಿಯುಸಿ ವಿಭಾಗದ ಪ್ರಾಂಶುಪಾಲರಾದ ಅಶೋಕ ರಾಯನ ಕ್ರಾಸ್ತಾ ದೈಹಿಕ ನಿರ್ದೇಶಕರಾದ ರಾಜೇಶ್ ಮೂಲ್ಯ ತರಬೇತುದಾರರಾದ ಪುಷ್ಪರಾಜ್ ಕಾಲೇಜಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ ಸಹಕಾರದಿಂದ ಇದು ಸಾಧ್ಯವಾಯಿತು ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ