ಉಜಿರೆ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ- ಶಿರಸಿ, ಶ್ರೀ ಮದ್ಭಗವದ್ಗೀತಾ ಅಭಿಯಾನ ಸಮಿತಿ- ದ.ಕ, ಸಂಸ್ಕೃತ ಸಂಘ:- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು ಉಜಿರೆ- ಧರ್ಮಸ್ಥಳ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಶ್ರೀ ಭಗವದ್ಗೀತಾ ಸ್ಪರ್ಧೆಗಳ ಉದ್ಘಾಟನೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಇಂದು ನಡೆಯಿತು.
ಉಜಿರೆಯ ಸಾಮಾಜಿಕ, ಧಾರ್ಮಿಕ ಮುಂದಾಳು ಹಾಗೂ ಕನ್ಯಾಡಿಯ ಯಕ್ಷಭಾರತಿ (ರಿ) ಇದರ ಅಧ್ಯಕ್ಷರಾದ ರಾಘವೇಂದ್ರ ಬೈಪಡಿತ್ತಾಯ ಇವರು ಉದ್ಘಾಟಿಸಿ ಶುಭ ಹಾರೈಸಿದರು.
ದ.ಕ ಜಿಲ್ಲಾ ಶ್ರೀ ಭಗವದ್ಗೀತಾ ಅಭಿಯಾನದ ಸಂಯೋಜಕ ಡಾ. ಮಧುಕೇಶ್ವರ ಶಾಸ್ತ್ರೀ, ಜಿಲ್ಲಾ ಸ್ಪರ್ಧಾ ಸಂಚಾಲಕರಾದ ಡಾ. ಶ್ರೀಧರ ಭಟ್, ಬೆಳ್ತಂಗಡಿ ತಾಲೂಕು ಸಂಯೋಜಕ ಡಾ. ಪ್ರಸನ್ನಕುಮಾರ ಐತಾಳ್, ಸಮಿತಿಯ ಸದಸ್ಯರಾದ ಉದಯ ಸುಬ್ರಹ್ಮಣ್ಯ, ಭಾಗ್ಯಲಕ್ಷ್ಮಿ ಹಾಗೂ ಇತರರು ಉಪಸ್ಥಿತರಿದ್ದರು.
ಕಂಠಪಾಠ, ಭಾಷಣ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ವಿದ್ಯಾರ್ಥಿಗಳ ಸ್ಪರ್ಧೆ ನಡೆಯಲಿದೆ.
ಗೀತಾ ಅಭಿಯಾನದ ಬೆಳ್ತಂಗಡಿ ತಾಲೂಕು ಸಂಯೋಜಕ ಡಾ.ಪ್ರಸನ್ನಕುಮಾರ ಐತಾಳ್ ನಿರೂಪಿಸಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ