ಕುಲಶೇಖರದಲ್ಲಿ 158ನೇ ಐಐಸಿಟಿ ಕಂಪ್ಯೂಟರ್ ತರಬೇತಿ ಕೇಂದ್ರ ಶುಭಾರಂಭ

Upayuktha
0



ಮಂಗಳೂರು: ಮಂಗಳೂರಿನ ಸೇಕ್ರೆಡ್ ಹಾರ್ಟ್ ಕೆರಿಯರ್ ಅಕಾಡೆಮಿ ಶಿಕ್ಷಣ ಸಂಸ್ಥೆಯ ಐಐಸಿಟಿ ಕಂಪ್ಯೂಟರ್ ತರಬೇತಿ ಕೇಂದ್ರಗಳು ಭಾರತ ದೇಶದಾದ್ಯಂತ ಕಾರ್ಯಾಚರಿಸುತ್ತಿದ್ದು, ಡಿ.01 ಶುಕ್ರವಾರದಂದು, ಮಂಗಳೂರು ಕುಲಶೇಖರದ ಪಿಂಟೋ ಕಾಂಪ್ಲೆಕ್ಸ್ ನಲ್ಲಿ ನೂತನ ಕೇಂದ್ರವು ಉದ್ಘಾಟನೆಗೊಂಡಿತು.



ಯಸ್.ಎಚ್.ಸಿ ಕೆರಿಯರ್ ಅಕಾಡೆಮಿ, ಬೆಂಗಳೂರು ಇದರ ಆಡಳಿತ ನಿರ್ದೇಶಕರಾದ ಶ್ರೀ ಕೆನೆಡಿ ಪಿ ಎ ಡಿಸೋಜರವರು ತಮ್ಮ ಪತ್ನಿ ಹಾಗೂ ಪುತ್ರಿಯರೊಂದಿಗೆ ಸಂಸ್ಥೆಯನ್ನು ಉದ್ಘಾಟಿಸಿ ಸಂಸ್ಥೆಯ ಬಗ್ಗೆ ಕಿರು ಪರಿಚಯವನ್ನು ನೀಡಿದರು. ಕುಲಶೇಖರದ ಹೋಲಿ ಕ್ರಾಸ್ ಚರ್ಚಿನ ಧರ್ಮ ಗುರುಗಳಾದ ವಂದನೀಯ ಪಾವ್ಲ್ ಸೆಬೆಸ್ಟಿಯನ್ ಡಿಸೋಜಾರವರು ನೂತನ ಸಂಸ್ಥೆಯನ್ನು ಆರ್ಶೀವಾದಿಸಿದರು, ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಪ್ಲಾವಿಯ ರವರು ಸಭಿಕರನ್ನು ಸ್ವಾಗತಿಸಿ, ಉಪ ಪ್ರಾಂಶುಪಾಲೆ ಶ್ರೀಮತಿ ಸುಜಿತಾ ಶಂಕರಲಿಂಗಂ ನವರು ಧನ್ಯವಾದ ಸರ್ಮಪಿಸಿದರು.



ನೂತನ ಐಐಸಿಟಿ ಕೇಂದ್ರದಲ್ಲಿ ಸಾಮ್ಯಾನ ಹಾಗೂ ಉನ್ನತ ತರಬೇತಿಗಳಾದ SAP, ಡಿಜಿಟಲ್ ಮಾರ್ಕೆಟಿಂಗ್, ಅಡ್ವಾಸ್ ಎಕ್ಸೆಲ್, ಇಂಡಿಯನ್ & ಫಾರಿನ್ ಅಕೌಂಟಿಂಗ್, ಬ್ಯಾಂಕಿಂಗ್ & ಫೈನಾನ್ಸ್, ಸೊಪ್ಟ್‍ವೆರ್ ಇಂಜಿನಿರಿಂಗ್‍ಗಳಂತಹ ತರಬೇತಿಗಳನ್ನು ನೀಡಲಾಗುವುದೆಂದು ತಿಳಿಸಲಾಗಿದೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top