ಪುರಾಣ ಶ್ರವಣದಿಂದ ಲೋಕಜ್ಞಾನ ವೃದ್ಧಿ: ವಿ.‌ ಸುಬ್ರಹ್ಮಣ್ಯ ಭಟ್

Upayuktha
0

ಕರಂಬಳ್ಳಿ ಪ್ರವಚನ ಸಪ್ತಾಹ ಸಮಾರೋಪ



ಉಡುಪಿ: ಪುರಾಣ ಪ್ರವಚನಗಳ ಶ್ರವಣಗಳ ಬಗ್ಗೆ ನಮ್ಮಲ್ಲಿ ಸ್ವಲ್ಪ ಸೀಮಿತವಾದ ಅಥವಾ ತಪ್ಪು ಕಲ್ಪನೆಗಳಿವೆ. ಕೆಲವೆಡೆ ಅದು ಅಪಭ್ರಂಶ ಬಳಕೆಯೂ ಆಗುತ್ತದೆ.‌ ಇದು ಸರಿಯಲ್ಲ. ಪುರಾಣಗಳಲ್ಲಿ ಕೇವಲ ಭಗವಂತನ‌ ಗುಣಮಹಿಮಾ ವಿಶೇಷಗಳ ವಿಚಾರಗಳು ಮಾತ್ರವಲ್ಲದೇ ಜೀವನಮಾರ್ಗದರ್ಶಿ ನೀತಿಗಳು, ಕಾಲಗಣನೆಗಳು, ಪ್ರಕೃತಿಯ ವಿಸ್ತಾರ ವರ್ಣನೆಗಳೇ ಮೊದಲಾಗಿ ಅನೇಕ ಸಂಗತಿಗಳಿವೆ ಆದ್ದರಿಂದ ಪುರಾಣ ಶ್ರವಣಗಳು ಲೋಕಜ್ಞಾನವೃದ್ಧಿಗೆ ಸಹಕಾರಿಯಾಗಿವೆ. ಈ ಕಾರಣಗಳಿಂದಲೇ ಹಿಂದೆ ಎಲ್ಲಾ ದೇವಸ್ಥಾನಗಳಲ್ಲಿ ನಿತ್ಯ ಪುರಾಣ ವಾಚನ ಪ್ರವಚನಗಳಿಗೆ ಅದ್ಯತೆಯ ಮೇಲೆ ಪ್ರತ್ಯೇಕ ವ್ಯವಸ್ಥೆಗಳೇ ಇದ್ದವು ಎಂದು ಪ್ರಸಿದ್ದ ವಾಸ್ತುತಜ್ಞ ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್ಟರು ತಿಳಿಸಿದ್ದಾರೆ.


ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯಿಂದ ಗುರುವಾರದಂದು ಸ್ಥಳೀಯ ಶ್ರೀ ವೇಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ಕಾರ್ತಿಕ ಜ್ಞಾನದೀಪೋತ್ಸವದ ಅಂಗವಾಗಿ ಹಮ್ಮಿಕೊಂಡ ಮತ್ಸ್ಯ ಪುರಾಣ ಚಿಂತನೆಯ ಪ್ರವಚನ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ  ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಅವರು  ಪ್ರವಚನ ನಡೆಸಿಕೊಟ್ಟ ವಿದ್ವಾನ್ ಕುತ್ಪಾಡಿ  ಕೃಷ್ಣರಾಜ ಆಚಾರ್ಯರನ್ನು ಸಂಮಾನಿಸಿ  ಮಾತನಾಡಿದರು.


ಪುರಾಣ ಪ್ರವಚನಗಳಿಗೆ ಜಾಗತಿಕ ಮಾನ್ಯತೆಯನ್ನು ತಂದುಕೊಟ್ಟವರು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಎಂದೂ ಅವರು ಅಭಿಪ್ರಾಯಿಸಿದರು.


ದೇವಳದ ಅರ್ಚಕರಾದ ಗೋವಿಂದ ಐತಾಳ್, ದಿವಾಕರ ಐತಾಳ್, ಮಹಿಳಾ ವಿಭಾಗದ ಸಂಚಾಲಕಿ ಶಾಮಲಾ ಭಟ್, ಕಾರ್ಯದರ್ಶಿ ನಾಗರಾಜ ಭಟ್, ರಂಗನಾಥ ಸಾಮಗ, ಲಕ್ಷ್ಮೀನಾರಾಯಣ ಆಚಾರ್ಯ, ಕೋಶಾಧಿಕಾರಿ ಅಜಿತ್ ಬಿಜಾಪುರ್, ಶ್ರೀಪತಿ ಭಟ್, ಪ್ರಕಾಶ್ ಆಚಾರ್ಯ, ರಂಗನಾಥ ಸರಳಾಯ, ರಮೇಶ ಬಾರಿತ್ತಾಯ, ಸುಧಾ ಹರಿದಾಸ ಭಟ್, ವ್ಯವಸ್ಥಾಪಕ ವಾಗೀಶ್ ಮೊದಲಾದವರಿದ್ದರು. 


ಇದೇ ಸಂದರ್ಭದಲ್ಲಿ ಸಮಿತಿಯ ಮಹಿಳಾ ಸಂಕೀರ್ತನಾ ವಿಭಾಗದ ದಶಮಾನೋತ್ಸವದ ಅಂಗವಾಗಿ ಬೆಳಗ್ಗೆಯಿಂದ ಸಂಜೆಯವರೆಗೆ  ಕುಣಿತ ತುಳಸಿ ಸಂಕೀರ್ತನೆಯು ನಡೆಯಿತು. ಸುಮಾರು ಹತ್ತಕ್ಕೂ ಅಧಿಕ ಮಹಿಳಾ ತಂಡಗಳು ಇದರಲ್ಲಿ ಭಾಗವಹಿಸಿದ್ದವು. ತುಲಸೀ ಸಂಕೀರ್ತನೆಯ ಮಾರ್ಗದರ್ಶಕರಾದ ವಿದ್ವಾನ್ ವೇಣುಗೋಪಾಲ ಸಾಮಗರನ್ನು ಅಭಿನಂದಿಸಲಾಯಿತು. ಜಯಶ್ರೀ ಗೀತಾ ರಮಾ ಕವಿತಾ ವಸುಧಾ ಶ್ರೀಜಾ ಮೊದಲಾದವರು ವಿಶೇಷವಾಗಿ ಸಹಕರಿಸಿದರು.


ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿ, ಅಧ್ಯಕ್ಷರಾದ ಕೃಷ್ಣರಾಜ ಭಟ್ ವಂದನಾರ್ಪಣೆಗೈದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top