ತುಳಸಿ ವಿವಾಹ- ತುಳಸಿ ಪೂಜೆ

Upayuktha
0


ರಾಕ್ಷಸ ಜಲಂಧರನ ಪತ್ನಿ ತುಳಸಿ

ನಿನ್ನಯ ಭಕ್ತಿ ಪತಿಯನು  ಉಳಿಸಿ

ಇಂದ್ರಾದಿ ದೇವತೆಗಳ ನಿದ್ರೆಗೆಡಿಸಿ

ಬರುವಂತಾಯಿತು ವಿಷ್ಣು ಗಡಬಡಿಸಿ


ಪತಿಯ ವೇಷದಲ್ಲಿ ವಿಷ್ಣುವ ನೋಡಿ

ಪೂಜೆಯ ಬಿಟ್ಟು ಬಂದೆ ನೀನೋಡಿ

ಯೋಗ ಕ್ಷೇಮ ಉಪಚಾರವ ನೀಡಿ

ಅರಿಯದೆ ದೇವನ ಸಹವಾಸ ಮಾಡಿ


ನೀ ಮೈ ಮರೆದಾಗ ಜಲಂಧರನ ಸಾವು

ನಿಜವರಿತು ವಿಷ್ಣುವಿಗೆ ಶಾಪದ ಕಾವು

ಹರನಾದನು  ವಿಷ್ಣು ಸಾಲಿಗ್ರಾಮದ ಶಿಲೆ

ಗಂಡಕಿಯಾಗಿ ಹರಿದ ನೀ ಪಾವನ ಸಲಿಲೆ


ನಿನ್ನ ಭಕ್ತಿಯ ಲೋಕ ಕೊಂಡಾಡಿದೆ

ಮನೆ ಮನೆಗಳಲ್ಲಿ ನಿನ್ನ ಪೂಜಿಸಿದೆ

ನೀನಿರುವ ಪ್ರತಿ ಮನೆಯು ಬೃಂದಾವನ

ತುಳಸಿ ವಿವಾಹಗೈದರೆ ಜೀವನವೇ ಪಾವನ


- ವೀಣಾ ಹೇಮಂತ್ ಗೌಡ ಪಾಟೀಲ್

ಮುಂಡರಗಿ ಗದಗ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Tags

Post a Comment

0 Comments
Post a Comment (0)
To Top