ನಿಜಗುಣಯ್ಯ ಹೆಚ್ ಎಸ್ ಇವರಿಗೆ ಗುರುಕುಲ ವಿದ್ಯಾರತ್ನ ಪುರಸ್ಕಾರ ಪ್ರದಾನ

Upayuktha
0


ತುಮಕೂರು: ಗುರುಕುಲ ವಿದ್ಯಾರತ್ನ (ಶಿಕ್ಷಣ) ಪ್ರಶಸ್ತಿಯನ್ನು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕು ನೊಣವಿನಕೆರೆಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಪ್ರೌಢಶಾಲಾ ಶಿಕ್ಷಕರು ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ ನಿಜಗುಣಯ್ಯ ಹೆಚ್.ಎಸ್ ಅವರಿಗೆ ಗುರುಕುಲ ವಿದ್ಯಾ ರತ್ನ (ಶಿಕ್ಷಣ) ಪ್ರಶಸ್ತಿ ಪ್ರದಾನ ಮಾಡಲಾಯಿತು.


ವಿಜಯನಗರ ಜಿಲ್ಲೆ ಹಂಪಿಯಲ್ಲಿ ಗುರುಕುಲ ಕಲಾ ಪ್ರತಿಷ್ಠಾನ ಕೇಂದ್ರ ಸಮಿತಿ ತುಮಕೂರು ವತಿಯಿಂದ ಅಖಿಲ ಭಾರತ ಮಟ್ಟದ 3ನೇ ಗುರುಕುಲ ಕಲಾ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇವರಿಗೆ ಸಮಸ್ತ ಸ್ನೇಹಿತರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿ ಅಭಿನಂದನೆ ಸಲ್ಲಿಸಿದ್ದಾರೆ.


Post a Comment

0 Comments
Post a Comment (0)
To Top