ಉಡುಪಿ: ಉಡುಪಿಯ ಸೈಂಟ್ ಸಿಸಿಲಿಸ್ ಕಾಲೇಜಿನ ಪ್ರಥಮ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿ ರೋನಾನ್ ಲೂವಿಸ್ ರವರು ಈಜು ವಿಭಾಗದಲ್ಲಿ ವಿಶೇಷವಾದ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ್ದಾರೆ.
ಮಂಗಳೂರಿನ ಮಂಗಳ ಈಜುಕೊಳದಲ್ಲಿ 50 ಮೀಟರ್ ನೀರಿನ ಒಳಗೆ ಒಂದೇ ಉಸಿರಿನಲ್ಲಿ ಈಜಿ 54 ಸೆಕೆಂಡ್ ಒಳಗೆ ಈ ದೂರ ಕ್ರಮಿಸಿ ದಾಖಲೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡುವಲ್ಲಿ ತಯಾರಿ ನಡೆಸುತ್ತಿದ್ದಾರೆ.
ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಮಾಣ ಪತ್ರ ಮತ್ತು ಮೆಡಲ್ ಅನ್ನು ಉಡುಪಿ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ್ ಶೆಟ್ಟಿ ಇಂದ್ರಾಳಿಯವರು ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಖ್ಯಾತ ಈಜು ಪಟು ಗೋಪಾಲ್ ಖಾರ್ವಿ, ರೋನಾನ್ ಲೂವಿಸ್ ಅವರ ತಂದೆ ರೋಷನ್ ಲೂವಿಸ್ ಮತ್ತು ತಾಯಿ ಶೈಲಾ ಲೂವಿಸ್ ಉಪಸ್ಥಿತರಿದ್ದರು.
ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ಈ ಬಗ್ಗೆ ಮಾಹಿತಿ ನೀಡಿದರು. ರೋನಾನ್ ರವರು ಈ ಸಾಧನೆಯನ್ನು ಈಜು ಕೋಚ್ ಚಂದ್ರಶೇಖರ ಶೆಟ್ಟಿ ಮತ್ತು ಗೋಪಾಲ್ ಖಾರ್ವಿ ಮಾರ್ಗದರ್ಶನದಲ್ಲಿ ತಯಾರಿ ನಡೆಸಿದ್ದರು.
ಬಹುಮುಖ ಪ್ರತಿಭೆಯ ವಿದ್ಯಾರ್ಥಿ: ರೋನಾನ್ ಕೇವಲ ಈಜು ಅಲ್ಲದೆ ಇನ್ನಿತರ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿದ್ದಾರೆ. ಸೈಕ್ಲಿoಗ್, ಸ್ಕೆಟಿಂಗ್, ವಿವಿಧ ಕ್ರೀಡಾ ವಿಭಾಗದಲ್ಲಿ ಎತ್ತಿದ್ದ ಕೈ. ಹಲವಾರು ಬಹುಮಾನಗಳನ್ನು ಬಾಚಿಕೊಂಡಿದ್ದಾರೆ.
ಪ್ರಕೃತಿಗೆ ಅಪೂರ್ವ ಕೊಡುಗೆ: ಸಣ್ಣ ವಯಸ್ಸಲ್ಲಿಯೇ ಪ್ರಕ್ರತಿ ಪ್ರೇಮಿಯಾಗಿರುವ ಇವರು ತನ್ನ ತಂದೆಯ ಮಾಗ೯ದಶ೯ನದಲ್ಲಿ ಇವರೆಗೆ ಸುಮಾರು 5 ಸಾವಿರಕ್ಕೂ ಮಿಕ್ಕಿ ಗಿಡಗಳನ್ನು ನೆಟ್ಟು ಎಲ್ಲರಿಗೂ ಮಾದರಿಯಾಗಿದ್ದಾರೆ. ಸ್ವತಃ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ರವರಿಂದ ಗೌರವ ಪಡೆದಿದ್ದಾರೆ.
ನೀರಿಗೆ ಹೆದರುತ್ತಿದ್ದ ಹುಡುಗ ಇಂದು ನೀರಿಗೆ ಹೆದರಿಸುತ್ತಿರುವ ಮಟ್ಟಿಗೆ ಬೆಳವಣಿಗೆ... ಸಣ್ಣ ವಯಸ್ಸಲ್ಲಿ ನೀರಿಗೆ ಹೆದರುತ್ತಿದ್ದ ಈ ಹುಡುಗ ಒತ್ತಾಯ ಪೂವ೯ಕವಾಗಿ ತಂದೆ ಈಜು ಕಲಿಸಲು ಬಿಡುತ್ತಿದ್ದರು. ಎಷ್ಟೋ ಸಂದಭ೯ದಲ್ಲಿ ನೀರಿನಿಂದ ಆಚಗೆ ಬಂದಿದ್ದು ಇದೆ. ಗುರುಗಳಾದ ಅಂತರಾಷ್ಟ್ರೀಯ ಖ್ಯಾತಿಯ ಈಜುಪಟು ಗೋಪಾಲ್ ಖಾವಿ೯ ಯವರಿ೦ದ ಈಜು ಕಲಿತು ಇಂದು ಈ ಹಂತಕ್ಕೆ ಬೆಳೆದು ನಿಂತಿದ್ದಾರೆ. ಮುಂದೆ ಇನ್ನಷ್ಟು ಸಾಧನೆ ಮಾಡಲು ಹೊರಟ್ಟಿದ್ದಾರೆ.
ಕೇವಲ 8ನೇ ವಯಸ್ಸಲ್ಲಿ ಪ್ರಾರಂಭವಾದ ಈ ಈಜು ಕಲಿಕೆ ನಿರಂತರವಾಗಿ ಸಾಗುತ್ತಿದೆ. ಇದೀಗ ಮಂಗಳೂರಿನಲ್ಲಿ ಚಂದ್ರಶೇಖರ ಶೆಟ್ಟಿ ಯವರ ಮಾರ್ಗದರ್ಶನದಲ್ಲಿ ಮುಂದಿನ ದಾಖಲೆಗಾಗಿ ತಯಾರಿ ನಡೆಯುತ್ತಿದೆ.
ಕೇವಲ ಆಟದಲ್ಲಿ ಮಾತ್ರ ವಲ್ಲವೆ ಕಲಿಕೆಯಲ್ಲಿಯೂ ಉತ್ತಮ ಅಂಕಗಳೊಂದಿಗೆ ಮುಂದುವರೆಯುತ್ತಿದ್ದಾರೆ. ನಾಣ್ಯ, ಸ್ಟಾoಪ್ ಸಂಗ್ರಹಣೆಯಲ್ಲಿ ಕೂಡ ಅತೀವ ಆಸಕ್ತಿ ಇದೆ. ತಂದೆ ರೋಶನ್ ಲೂವಿಸ್, ತಾಯಿ ಶೈಲಾ ಲೂವಿಸ್ ರ ನಿರಂತರ ಪ್ರೋತ್ಸಾಹದಿಂದ ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು ಎಂಬುದು ರೋನಾನ್ ರ ಮನದಾಳದ ಮಾತು.
ಗಿನ್ನೆಸ್ ದಾಖಲೆ ಸುಲಭದ ಸಂಗತಿಯಲ್ಲ ಈ ಸಾಧನೆ ಮಾಡಲು ಹೊರಟಿರುವ ಇವರು. 250 ಮೀ ನೀರಿನ ಅಡಿಯಲ್ಲಿ ಒಂದೇ ಉಸಿರಿನಲ್ಲಿ ಸಾಗಬೇಕು ಅದಕ್ಕಾಗಿ ಅಭ್ಯಾಸ ನಡೆಯುತ್ತಿದೆ.
ವಿದ್ಯಾರ್ಥಿಗಳಿಗೆ ಮಾದರಿ: ಎಷ್ಟೋ ವಿದ್ಯಾಥಿ೯ಗಳು ತಮಗೆ ಸಿಕ್ಕ ಸಮಯವನ್ನು ಪೋಲು ಮಾಡುತ್ತಾರೆ. ಆದರೆ ಈತ ಅದನ್ನು ಸಾಧನೆಗೆ ಸದುಪಯೋಗ ಪಡಿಸುತ್ತಿರುವುದು ಅಭಿನಂದನೀಯ. ಮುಂದಿನ ದಿನಗಳಲ್ಲಿ ಭಾರತವನ್ನು ಈಜಿನಲ್ಲಿ ಪ್ರತಿನಿಧಿಸುವ ಅವಕಾಶ ಬರಲಿ ಎಂಬ ಶುಭ ಹಾರೈಕೆ ನಮ್ಮದು.
-ರಾಘವೇಂದ್ರ ಪ್ರಭು ಕರ್ವಾಲು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ