ಯುವತಿಯರಿಗೆ ಉಚಿತ ವಸತಿ ಸಹಿತ ಅಧ್ಯಯನ ಕೇಂದ್ರ- 'ರಾಹ್‌ ಸೂಪರ್ 30'ಗೆ ಚಾಲನೆ

Upayuktha
0


-ನಾಗರಿಕ ಸೇವಾ ಪರೀಕ್ಷೆ ಬರೆಯಲು ಬಯಸುವ ಅವಕಾಶ ವಂಚಿತ ಯುವತಿಯರಿಗೆ ನೆರವು

-ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ಯುವತಿಯರಿಗೆ ಅವಕಾಶ

-ರಾಷ್ಟ್ರೀಯ ಶಿಕ್ಷಣ ದಿನದಂದು 'ರಾಹ್‌ ಸೂಪರ್ 30'ಗೆ ಚಾಲನೆ


ಬೆಂಗಳೂರು: ನಾಗರಿಕ ಸೇವಾ ಪರೀಕ್ಷೆ ಬರೆದು ಉನ್ನತ ಹುದ್ದೆಗೇರಲು ಬಯಸುವ ಅವಕಾಶ ವಂಚಿತ ಪ್ರತಿಭಾನ್ವಿತ ಯುವತಿಯರಿಗೆ ಉಚಿತ ವಸತಿ ಸಹಿತ ಅಧ್ಯಯನ ಕೇಂದ್ರಕ್ಕೆ ಪ್ರವೇಶ ಪಡೆಯುವ 'ರಾಹ್ ಸೂಪರ್‌ 30' ಕಾರ್ಯಕ್ರಮಕ್ಕೆ ರಾಷ್ಟ್ರೀಯ ಶಿಕ್ಷಣ ದಿನದಂದು ಚಾಲನೆ ದೊರೆತಿದೆ.



'ರಾಹ್‌ ಅಕಾಡೆಮಿ' ಮೂಲಕ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ರಾಜ್ಯದ 30 ಪ್ರತಿಭಾನ್ವಿತ ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಜತೆಗೆ, ಗ್ರಂಥಾಲಯದ ವ್ಯವಸ್ಥೆ, ಪರಿಣಿತರ ಮಾರ್ಗದರ್ಶನ ಸೇರಿದಂತೆ ಅಧ್ಯಯನಕ್ಕೆ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುವುದು.



ಪದವಿ ಪೂರ್ಣಗೊಳಿಸಿರುವ ಪ್ರತಿಭಾನ್ವಿತ ಯುವತಿಯರು ವೆಬ್‌ಸೈಟ್‌  https://raahsuper30.com ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಹಲವು ಸುತ್ತಿನ ಪರೀಕ್ಷೆ ನಂತರ ಕಾರ್ಯಕ್ರಮಕ್ಕೆ ಆಯ್ದ 30 ಅಭ್ಯರ್ಥಿಗಳನ್ನು ಸೇರ್ಪಡೆಗೊಳಿಸಲಾಗುವುದು. 



"ಭಾರತದ ಮೊದಲ ಶಿಕ್ಷಣ ಸಚಿವ, ಭಾರತ ರತ್ನ ಡಾ. ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರ ಜನ್ಮದಿನವಾದ ನವೆಂಬರ್ 11 ರಂದು ಆಚರಿಸಲಾಗುವ  'ರಾಷ್ಟ್ರೀಯ ಶಿಕ್ಷಣ ದಿನ'ದಂದು 'ರಾಹ್‌ ಸೂಪರ್‌ 30'ಕಾರ್ಯಕ್ರಮ ಆರಂಭಿಸಲಾಗುತ್ತಿದೆ. ಅಜಾದ್ ಅವರು ಶಿಕ್ಷಣ ಸಚಿವರಾಗಿದ್ದ ಸಮಯದಲ್ಲಿ'ರಾಷ್ಟ್ರೀಯ ಶಿಕ್ಷಣ ನೀತಿ' ಜಾರಿಗೆ ತಂದು, ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರ ಫಲವಾಗಿ ದೇಶದಲ್ಲಿಂದು ಸಾಕ್ಷರರ ಸಂಖ್ಯೆ ಹೆಚ್ಚಿ, ಶಿಕ್ಷಣ ಕ್ಷೇತ್ರದಲ್ಲಿ ನಾವು ಈ ಮಟ್ಟದ ಸಾಧನೆ ಮಾಡಲು ಸಾಧ್ಯವಾಗಿದೆ. ಅವರ ಹಾದಿಯಲ್ಲಿ ನಾವು ಇಂದು ಸಣ್ಣ ಹೆಜ್ಜೆ ಇಟ್ಟಿದ್ದೇವೆ,"ಎಂದು ರಾಹ್‌ ಸಂಸ್ಥೆಯ ಟ್ರಸ್ಟಿ ಹುಸೇನ್ ಪ್ರಕಟಣೆಯಲ್ಲಿ ಕೋರಿದ್ದಾರೆ. 



"ಐಎಎಸ್‌, ಐಪಿಎಎಸ್, ಕೆಎಎಎಸ್‌ ಅಧಿಕಾರಿಯಾಗುವ ಕನಸು ಹೊತ್ತ ಎಲ್ಲ ಪ್ರತಿಭಾನ್ವಿತ ಹೆಣ್ಣು ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದು ಸುಲಭದ ಮಾತಲ್ಲ. ಹಣಕಾಸಿನ ಅಡಚಣೆ, ಸಾಮಾಜಿಕ ಕಟ್ಟುಪಾಡು, ಮಾರ್ಗದರ್ಶನದ ಕೊರತೆಯಿಂದಾಗಿ ಮರೆಯಲ್ಲೇ ಉಳಿದು ಬಿಡುತ್ತಾರೆ. ಅಂತಹ ಹೆಣ್ಣು ಮಕ್ಕಳಿಗೆ ಪುಸ್ತಕ ಕೊಟ್ಟರಷ್ಟೇ ಸಾಲದು. ಅಧ್ಯಯನಕ್ಕೆ ಪೂರಕ ವಾತಾವರಣವೂ ಬೇಕು. ಅದಕ್ಕಾಗಿಯೇ ಈ ಕಾರ್ಯಕ್ರಮ ರೂಪಿಸಿದ್ದೇವೆ. ಈ ಸಂಬಂಧ ವೆಬ್‌ಸೈಟ್‌ನಲ್ಲಿ ಎಲ್ಲ ಮಾಹಿತಿ ಲಭ್ಯವಿದ್ದು, ಅರ್ಹ ಯುವತಿಯರು ಇದರ ಸದುಪಯೋಗ ಪಡದುಕೊಳ್ಳಬೇಕು" ಎಂದಿದ್ದಾರೆ.



"ಶಿಕ್ಷಣದಲ್ಲಿ ಲಿಂಗ ಸಮಾನತೆ ಇಂದಿನ ಅಗತ್ಯ. ಸ್ವಾತಂತ್ರ್ಯದ ನಂತರ ನಮ್ಮ ರಾಷ್ಟ್ರದ ಸಾಕ್ಷರತೆ ಪ್ರಮಾಣ ಹೆಚ್ಚಿದ್ದರೂ, ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಲಿಂಗ ಸಮಾನತೆಯನ್ನು ಸಾಧಿಸಲಾಗಿಲ್ಲ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ 'ರಾಹ್ ಸೂಪರ್ 30' ಉಚಿತ ವಸತಿ, ಅಧ್ಯಯನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ" ಎಂದು  ಎಸ್‌.ಎ. ಹುಸೇನ್‌ ಹೇಳಿದ್ದಾರೆ. 


"ಸಮಾಜ ಮತ್ತು ಸಮುದಾಯದ ಕಲ್ಯಾಣದಲ್ಲಿ ಮಹಿಳೆಯರ ಶಿಕ್ಷಣವು ಬಹಳ ಮುಖ್ಯವಾದ ಹೆಜ್ಜೆ. ಮಹಿಳೆಯರು ಸಮಾನ ಪಾತ್ರ ನಿರ್ವಹಿಸಿದಾಗ ಮಾತ್ರ ಸಮಾಜದ ಪ್ರಗತಿ ಸಾಧ್ಯ, ಇದನ್ನು ಶಿಕ್ಷಣದಿಂದ ಮಾತ್ರ ಸಾಧಿಸಬಹುದು" ಎಂದು ರಾಹ್‌ ಅಕಾಡೆಮಿಯ ಅಧ್ಯಕ್ಷರಾದ ರೆಹಾನಾ ಶಮೀಮ್‌ ತಿಳಿಸಿದ್ದಾರೆ.



 ಕಾರ್ಯಕ್ರಮದ ವಿವರ:

-ಪದವಿ ನಂತರದ ಈ ಶೈಕ್ಷಣಿಕ ಕಾರ್ಯಕ್ರಮಕ್ಕೆ ಪ್ರತಿ ವರ್ಷ 30 ಯುವತಿಯರಿಗೆ ಮಾತ್ರ ಅವಕಾಶ 

-ಆಯ್ದ ವಿದ್ಯಾರ್ಥಿನಿಯರಿಗೆ 12 ತಿಂಗಳ (1 ವರ್ಷ) ಉಚಿತ ವಸತಿ, ಅಧ್ಯಯನಕ್ಕೆ ನೆರವು 

-ಗ್ರಂಥಾಲಯ, ವಸತಿ ನಿಲಯ ಜತೆಗೆ ಪರಿಣಿತರು, ಹಿರಿಯ ಅಧಿಕಾರಿಗಳು, ವಿಷಯ ತಜ್ಞರಿಂದ ಮಾರ್ಗದರ್ಶನ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top