'ಮಂಗಳೂರು ಬ್ಲೂ’ ಟಾಪ್‌ 4 ಫಂಡ್‌ ರೆಡಿ- ಸ್ಟಾರ್ಟ್‌ಅಪ್‌ಗಳ ಆಯ್ಕೆ

Upayuktha
0

- ಬೆಂಗಳೂರು ಟೆಕ್ ಸಮ್ಮಿಟ್‌'ನ ಪೂರ್ವಭಾವಿಯಾಗಿ'ಬ್ಲೂ'


- ಉದಯೋನ್ಮುಖ ಟೆಕ್ ಕ್ಲಸ್ಟರ್‌ಗಳಲ್ಲಿ ಸಂಭಾವ್ಯ ಹೂಡಿಕೆದಾರರೊಂದಿಗೆ ಸ್ಟಾರ್ಟ್‌ಅಪ್‌ ಮುಖ್ಯಸ್ಥರ ಭೇಟಿಗೆ 'ಬ್ಲೂ' ಅಪೂರ್ವ ವೇದಿಕೆ




ಮಂಗಳೂರು: 'ಬೆಂಗಳೂರು ಟೆಕ್ ಸಮ್ಮಿಟ್‌'ನ ಪೂರ್ವಭಾವಿಯಾಗಿ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್‌ಟಿ ಇಲಾಖೆಯ ಸಹಯೋಗದೊಂದಿಗೆ 'ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್' ಮಂಗಳೂರು ಟೆಕ್‌ ಕ್ಲಸ್ಟರ್‌ನಲ್ಲಿ ಆಯೋಜಿಸಿದ್ದ 'ಬ್ಲೂ' ಕಾರ್ಯಕ್ರಮ ಯಶಸ್ವಿಯಾಗಿದ್ದು, ಟಾಪ್‌ 3 ಫಂಡ್‌ ರೆಡಿ- ಸ್ಟಾರ್ಟ್‌ಅಪ್‌ಗಳ ಹೆಸರನ್ನು ಶನಿವಾರ ಘೋಷಿಸಲಾಯಿತು.


ಬ್ಯುಕೋಲಿಕ್ ಕೈಲಾಶ್ ಅಗ್ರಿಟೆಕ್ ಮತ್ತು ಎಫ್‌ಎಂಸಿಜಿ ಪ್ರೈವೇಟ್ ಲಿಮಿಟೆಡ್, ರೆಮಿಟಿಯಾಸ್ ಟೆಕ್ನಾಲಜೀಸ್ ಎಲ್‌ಎಲ್‌ಪಿ, ಟೈನಿ ಪ್ರಿಸ್ಮ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್, ಟ್ರಾಕ್‌ಹೆಲ್ತ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್‌ ಟಾಪ್‌ 4 'ಫಂಡಬಲ್ ಸ್ಟಾರ್ಟ್‌ಅಪ್‌'ಗಳಾಗಿ ಘೋಷಿಸಲಾಗಿದೆ. 


ಇಲ್ಲಿನ ಯೂನಿಕೋರ್ಟ್ ಮಂಗಳೂರು ಇನ್ಫೋಟೆಕ್ ಸಲ್ಯುಷನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಟ್ಟು 35 ತಂಡಗಳು ಅರ್ಜಿ ಸಲ್ಲಿಸಿದ್ದವು. ಈ ಪೈಕಿ ಆಯ್ದ 15 ತಂಡಗಳನ್ನು ಬ್ಲೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಹೂಡಿಕೆದಾರರ ಎದುರು ಈ ತಂಡಗಳು ತಮ್ಮ ವಿನೂತನ ಯೋಜನೆಗಳನ್ನು ಮುಂದಿಟ್ಟವು. ತೀರ್ಪುಗಾರರು ಟಾಪ್‌ 3 ಫಂಡ್‌ ರೆಡಿ ಸ್ಟಾರ್ಟ್‌ ಅಪ್‌ಗಳನ್ನು ಆಯ್ಕೆ ಮಾಡಿದ್ದಾರೆ. 


ಕೆಐಟಿವಿಇಎನ್‌ನ ಸಹಾಯಕ ಉಪಾಧ್ಯಕ್ಷ  ಮನೀಶ್ ಕುಮಾರ್, ವೆಂಟಾನಾ ವೆಂಚರ್ಸ್‌ನ ಶೈಲಜಾ ರಾವ್, ಪ್ರಾಂಶುಪಾಲ ಸಂದೀಪ್ ಐತಾಳ್, ಯುನಿಕೋರ್ಟ್ ಸಿಟಿಓ ಸಹ-ಸಂಸ್ಥಾಪಕ, ಪ್ರಶಾಂತ್ ಶೆಣೈ ಕಟ್ಪಾಡಿ ತೀರ್ಪುಗಾರಾಗಿದ್ದರು.   



'ಬ್ಲೂ'ನಲ್ಲಿ ಪಾಲ್ಗೊಂಡ ಸ್ಟಾರ್ಟ್‌ಅಪ್‌ಗಳು:

ಅಲರ್ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್, ಬ್ಯುಕೋಲಿಕ್ ಕೈಲಾಶ್ ಅಗ್ರಿಟೆಕ್ ಮತ್ತು ಎಫ್‌ಎಂಸಿಜಿ ಪ್ರೈವೇಟ್ ಲಿಮಿಟೆಡ್, ಡ್ರೀಮ್‌ಸಾಫ್ಟ್ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್, ಎಮಿಸ್ ಬಯೋನಿಕ್ಸ್ ಪ್ರೈವೇಟ್ ಲಿಮಿಟೆಡ್, ಫಿನ್ಕ್ಲಸ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಫ್ಲ್ಯಾಶ್ಮೇಟ್ಸ್, ಇನ್ಫ್ರಾಗ್ರಾಮರ್‌, ಇನ್ಸ್ಟ್ರುಮಸ್, ಪ್ರಾಜೆಕ್ಟ್ ಡ್ರೊನೈಡ್, ರೆಮಿಟಿಯಾಸ್ ಟೆಕ್ನಾಲಜೀಸ್ ಎಲ್‌ಎಲ್‌ಪಿ, ರೋಸೆಟ್ ಸ್ಮಾರ್ಟ್, ಸ್ನೋರಿಂಗ್ ಔಲ್‌ ಬೈ ಡಾಕ್ಟೆಕ್ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್, ಟಾಡ್ ಏರ್ಕಾನ್ ಪ್ರೈವೇಟ್ ಲಿಮಿಟೆಡ್, ಟೈನಿ ಪ್ರಿಸ್ಮ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್, ಟ್ರಾಕ್‌ಹೆಲ್ತ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್


ಉದಯೋನ್ಮುಖ ಕ್ಲಸ್ಟರ್‌ಗಳಲ್ಲಿ ಆವಿಷ್ಕಾರವನ್ನು ಉತ್ತೇಜಿಸುವ ದೃಷ್ಟಿಯಿಂದ ಸಂಭಾವ್ಯ ಹೂಡಿಕೆದಾರರೊಂದಿಗೆ ಸ್ಟಾರ್ಟ್‌ಅಪ್‌ ಮುಖ್ಯಸ್ಥರ ಭೇಟಿಗೆ ಕಾರ್ಯಕ್ರಮದಲ್ಲಿ ಅವಕಾಶ ಕಲ್ಪಿಸಲಾಗಿತ್ತು.ದೊಟ್ಟ ಮಟ್ಟದಲ್ಲಿ ಬಂಡವಾಳ ಹೂಡುವ (ವಿಸಿಗಳು) ಹಾಗೂ ದೇಶದ ಏಂಜಲ್‌ ಹೂಡಿಕೆದಾರರ ಎದುರು ಆರಂಭಿಕ-ಹಂತದ ಸ್ಟಾರ್ಟ್‌ಅಪ್‌ಗಳು ತಮ್ಮ ವಿನೂತನ ಆಲೋಚನೆಗಳನ್ನು ಮುಂದಿಟ್ಟವು. ಸ್ಟಾರ್ಟ್‌ಅಪ್‌ಗಳು ಮಾಡಿದ್ದ ಮನವಿಗೆ ಹೂಡಿಕೆದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.


ತಂಡದ ಅನುಭವ, ಮಾರುಕಟ್ಟೆ ಸಾಮರ್ಥ್ಯ, ಉತ್ಪನ್ನ ನಾವೀನ್ಯತೆ, ಸಾಮಾಜಿಕ ಪರಿಣಾಮ ಮತ್ತು ಅವುಗಳ ಯುಎಪಿ ಅಥವಾ X- ಫ್ಯಾಕ್ಟರ್‌ ಒಳಗೊಂಡ ಮಾನದಂಡಗಳ ಆಧಾರದ ಮೇಲೆ ಕೆಡಿಇಎಂ, ಸ್ಟಾರ್ಟ್‌ಅಪ್‌ಗಳ  ಮೌಲ್ಯಮಾಪನ ಮಾಡಿದೆ.


ಏನಿದು ‘ಬ್ಲೂ’ ಉಪಕ್ರಮ:

ದೊಟ್ಟ ಮಟ್ಟದಲ್ಲಿ ಬಂಡವಾಳ ಹೂಡುವ (ವಿಸಿಗಳು) ಹಾಗೂ ದೇಶ ಏಂಜಲ್‌  ಹೂಡಿಕೆದಾರರ ಎದುರು ತಮ್ಮ ನವೀನ ಆಲೋಚನೆಗಳನ್ನು ಮುಂದಿಡಲು ಆರಂಭಿಕ-ಹಂತದ ಸ್ಟಾರ್ಟ್‌ಅಪ್‌ಗಳಿಗೆ ‘ಬ್ಲೂ’ ಅಪೂರ್ವ ವೇದಿಕೆಯಾಗಿದೆ. ಹುಬ್ಬಳ್ಳಿ-ಧಾರವಾಡ-ಬೆಳಗಾವಿ, ಮಂಗಳೂರು ಮತ್ತು ಮೈಸೂರಿನಲ್ಲಿರುವ ಬಿಯಾಂಡ್ ಬೆಂಗಳೂರು ಕ್ಲಸ್ಟರ್‌ಗಳಲ್ಲಿ ಪ್ರತಿ ವರ್ಷ ಈ ‘ಬ್ಲೂ’ ಕಾರ್ಯಕ್ರಮ ಆಯೋಜಿಸಲಾಗುತ್ತದೆ. 


ಆಯ್ಕೆಯಾದ ತಂಡಗಳಿಗೆ ಆಗುವ ಲಾಭ: 

 -ನವೆಂಬರ್ 29-ಡಿಸೆಂಬರ್ 1 ರಿಂದ ನಿಗದಿಪಡಿಸಿರುವ ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಆಯ್ಕೆಯಾದ ಸ್ಟಾರ್ಟ್‌ಅಪ್‌ಗಳಿಗೆ ಆಲ್-ಆಕ್ಸೆಸ್ ಪಾಸ್‌ 

-ಮುಂಬರುವ ದಿನಗಳಲ್ಲಿ ಕೆಇಡಿಎಂ ಆಯೋಜಿಸುವ ವಿಶೇಷ ಹೂಡಿಕೆದಾರರ ಸಭೆಗಳಲ್ಲಿ ಭಾಗವಹಿಸುವ ಅವಕಾಶ ಪಡೆಯುತ್ತವೆ. 

- ಫಂಡ್‌ ರೆಡಿ- ಸ್ಟಾರ್ಟ್‌ಅಪ್‌ಗಳಿಗೆ ಬಿಟಿಎಸ್ 2023ರಲ್ಲಿ ಬೂತ್‌ 

-ಮೈಸೂರು ಟೆಕ್‌ ಕ್ಲಸ್ಟರ್ ಸೀಡ್ ಫಂಡ್ ಮತ್ತು ಕರ್ನಾಟಕ ಆಕ್ಸಿಲರೇಶನ್ ನೆಟ್‌ವರ್ಕ್ (ಕೆಎಎನ್‌) ಕಾರ್ಯಕ್ರಮದಲ್ಲಿ  ಆದ್ಯತೆ

 

ಹೆಚ್‌ಬಿಡಿ, ಮೈಸೂರು ‘ಬ್ಲೂ’ ಯಶಸ್ವಿ: 

ಹುಬ್ಬಳ್ಳಿ ಬೆಳಗಾವಿ ಧಾರವಾಡ ಕ್ಲಸ್ಟರ್‌ ಹಾಗೂ ಮೈಸೂರಿನಲ್ಲಿ ಆಯೋಜಿಸಿದ್ದ ಬ್ಲೂ ಕಾರ್ಯಕ್ರಮ ಯಶಸ್ವಿಯಾಗಿದ್ದು, ಎರಡೂ ಕ್ಲಸ್ಟರ್‌ಗಳಲ್ಲಿ  ಟಾಪ್‌ 3 ಫಂಡ್‌ ರೆಡಿ ಸ್ಟಾರ್ಟ್‌ ಅಪ್‌ಗಳನ್ನು ಆಯ್ಕೆ ಮಾಡಲಾಗಿದೆ. ಮಂಗಳೂರು ಬ್ಲೂ  ಆಯ್ಕೆ ನಂತರ ಒಟ್ಟು 10 ಟಾಪ್‌ ಸ್ಟಾರ್ಟ್‌ಅಪ್‌ ತಂಡಗಳನ್ನು ಆಯ್ಕೆ ಮಾಡಲಾಗಿದೆ. 




ದಕ್ಷಿಣ ಕನ್ನಡ, ಉಡುಪಿ ಮತ್ತು ಕಾರವಾರದ ಸಿಲಿಕಾನ್ ಬೀಚ್ ಸ್ಟ್ರೆಚ್‌ನಲ್ಲಿರುವ ಸ್ಟಾರ್ಟ್‌ಅಪ್‌ಗಳಿಗೆ ತಮ್ಮ ನಾವೀನ್ಯತೆ ಮತ್ತು ಉದ್ದಿಮೆಯ ಮಾದರಿಯನ್ನು ತೀರ್ಪುಗಾರರ ಮುಂದೆ ಪ್ರದರ್ಶಿಸಲು ಮತ್ತು ಕ್ಲಸ್ಟರ್ ಸೀಡ್ ಫಂಡ್  ಗೆಲ್ಲುವ ಅವಕಾಶವನ್ನು ಪಡೆಯಲು ಮಂಗಳೂರು ಬ್ಲೂ ಅತ್ಯುತ್ತಮ ವೇದಿಕೆಯಾಗಿತ್ತು. ನಮ್ಮಲ್ಲಿ ಫಿನ್‌ಟೆಕ್, ಅಗ್ರಿಟೆಕ್‌ನಿಂದ ಡ್ರೋನ್‌ ಮತ್ತು ಐಒಟಿ ಸ್ಟಾರ್ಟ್‌ಅಪ್‌ಗಳವರೆಗೆ ಎಲ್ಲವೂ ಇವೆ. ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳೂರು ಕ್ಲಸ್ಟರ್‌ನ ಸ್ಟಾರ್ಟಪ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ನಮಗೆ ಸಂತಸದ ವಿಷಯ.

- ಪ್ರಶಾಂತ್ ಶೆಣೈ, ಯುನಿಕೋರ್ಟ್ ಸಿಟಿಓ ಸಹ-ಸಂಸ್ಥಾಪಕ  



"ಸ್ಟಾರ್ಟ್‌ಅಪ್ ಪರಿಸರ ಬೆಂಗಳೂರಿಗಷ್ಟೇ ಸೀಮಿತವಾಗಿಲ್ಲ, ರಾಜ್ಯಾದ್ಯಂತ ವಿಸ್ತರಿಸಿದೆ ಎಂದು ಜಗತ್ತಿಗೆ ತೋರಿಸಿಕೊಡಬೇಕಿದೆ.  ಅದಕ್ಕೆ ಪೂರಕವಾಗಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.ರಾಜ್ಯದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಟೆಕ್ ಕ್ಲಸ್ಟರ್‌ಗೆ ಮಂಗಳೂರು ಕ್ಲಸ್ಟರ್‌  ಅತ್ಯುತ್ತಮ ಸಾಕ್ಷಿ. ‘ಬ್ಲೂ’ ಕಾರ್ಯಕ್ರಮದ ಮೂಲಕ ರಾಜ್ಯದ ನಾನಾ ಭಾಗಗಳಲ್ಲಿರುವ ಟೆಕ್‌ ಕ್ಲಸ್ಟರ್‌ಗಳಿಗೆ ಬೆಂಬಲ ನೀಡಲಾಗುತ್ತಿದೆ. ಈ ಕ್ಲಸ್ಟರ್‌ಗಳು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುವ ವಿಶ್ವಾಸ ನಮಗಿದೆ.


 - ಸಂಜೀವ್ ಗುಪ್ತಾ, ಕೆಡಿಇಎಂ ಸಿಇಒ

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top