ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಲಾಸಾಧಕಿ ಸವಿತಾ ಕೋಡಂದೂರ್ ಅವರಿಗೆ ಸನ್ಮಾನ

Upayuktha
0


ಬಂಟ್ವಾಳ: ಅಮ್ಮುಂಜೆ ಅನುದಾನಿತ ಹಿಪ್ರಾ ಶಾಲೆಯ ವೀರಯೋಧ ಯಾದವ್ ಪೂಜಾರಿ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು ಎ.ಸಿ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ಸಾಧಕರನ್ನು ಶಾಲು, ಹಾರ, ಪೇಟ, ಸ್ಮರಣಿಕೆ ಪುಸ್ತಕ ಅಭಿನಂದನಾ ಪತ್ರಗಳನ್ನು ಇಟ್ಟು ಸನ್ಮಾನಿಸಲಾಯಿತು.



ಸಮ್ಮೇಳನ ಅಧ್ಯಕ್ಷರಾದ ಹಿರಿಯ ಪತ್ರಕರ್ತ ಪ್ರೊ ಕೆ. ಬಾಲಕೃಷ್ಣಗಟ್ಟಿ, ದ.ಕ ಕಸಾಪ ಅಧ್ಯಕ್ಷ ಡಾ. ಎಂ.ಪಿ ಶ್ರೀನಾಥ್, ಬಂಟ್ವಾಳ ತಾಲೂಕು ಕ.ಸಾ.ಪ ಅಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ರಾಜೇಶ್ವರಿ, ರಾಷ್ಟ್ರಪ್ರಶಸ್ತಿ ವಿಜೇತ ಜೇನು ಕೃಷಿಕ ಹಾಗೂ ಕಲಾ ಪ್ರೋತ್ಸಾಹಕರಾದ ಕುಮಾರ್ ಪೆರ್ನಾಜೆ, ನ್ಯಾಯವಾದಿ ಅಶ್ವಿನಿ ಕುಮಾರ್ ರೈ, ಕಸಾಪ ಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ, ಸ್ವಾಗತ ಸಮಿತಿಯ ಅಧ್ಯಕ್ಷರಾದ ಉಮೇಶ್ ಸಾಲ್ಯಾನ್, ಬೆಂಜನ ಪದವು ಪ್ರಧಾನ ಸಂಚಾಲಕ ಅಬೂಬಕರ್, ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಾಮನ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಜನಾರ್ದನ ಅಮ್ಮುಂಜೆ ವಿ. ಸು ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.



ಗ್ರಾಮೀಣ ಕಲಾಪ್ರತಿಭೆ: ಕೃಷಿ ಜೊತೆ ಸಂಗೀತ ಶಾಸ್ತ್ರೀಯ, ಸುಗಮ ಸಂಗೀತ, ಸ್ಯಾಕ್ಸೋಫೋನ್ ಜೊತೆ ಗಾನ ವೈಭವ, ಸಪ್ತ ಮಾತೃಕೆಯರ ಗೀತ ಗಾಯನ, ಪುಟಾಣಿ ಮಕ್ಕಳಿಗೆ ಸಂಗೀತ ಶಾಲೆ, ಕುಮಾರ್ ಪೆರ್ನಾಜೆಯವರ ಸ್ವರ ಸಿಂಚನ ಕಲಾ ತಂಡದ ಮುಖ್ಯ ಹಾಡುಗಾರ್ತಿಯಾದ ಇವರು ಸಂಗೀತ ಲೋಕಕ್ಕೆ ನಮ್ಮನ್ನೆಲ್ಲಾ ಕರೆದೊಯ್ಯುವುದಲ್ಲದೆ ಪೇಟೆ, ಪಟ್ಟಣದ ಕಲಾವಿದರಿಂದ ತಾನೇನು ಕಡಿಮೆಯಲ್ಲ ಎಂದು ಸಾಧಿಸಿದ ಸವಿತಾ ಕೋಡಂದೂರು ಇವರಿಗೆ ಪರ್ನಾಜೆ ಪ್ರಶಸ್ತಿ, ಗಡಿನಾಡ ಧ್ವನಿ, ಸುಮಸೌರಭ ಪ್ರಶಸ್ತಿ ಕರಾವಳಿ ರತ್ನ ಸಹಿತ ಹಲವಾರು ವಿದ್ವಾನ್ ಬಳ್ಳಪದವು ಯೋಗೀಶ್ ಶರ್ಮಾರ ಶಿಷ್ಯ, ನೂಜಯ ವೇ ಮೂ ಕೇಶವ ಭಟ್ ಮತ್ತು ದೇವಕಿ ದಂಪತಿಗಳ ಪುತ್ರಿ. ಪತಿ 'ವಿಟ್ಲ ಸುಪ್ರಜಿತ್: ಐಟಿಐ ಕಾಲೇಜು ಮಾಜಿ ಪ್ರಾಂಶುಪಾಲರು. ಕೋಡಂದೂರು ರಘುರಾಮ್ ಶಾಸ್ತ್ರೀ, ಇವರು ಸ್ವರ ಸಿಂಚನ ಸಂಗೀತ ಶಾಲೆ ವಿಟ್ಲ ಪಡಿಬಾಗಿಲು ಇಲ್ಲಿನ ವಿದ್ಯಾರ್ಥಿಗಳು ಶೇ 100 ಫಲಿತಾಂಶ ಗಳಿಸುತ್ತಿದ್ದು ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.


ಹಲವಾರು ಕಾರ್ಯಾಗಾರಗಳನ್ನು ಶಾಲೆಗಳಲ್ಲೂ ನೀಡಿದ್ದು ಸಂಗೀತದ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಕರ್ನಾಟಕ ಸಂಗೀತ ಪರೀಕ್ಷೆಯ ಪರೀಕ್ಷಕರಾಗಿ ನಿರ್ವಹಿಸಿದ್ದಾರೆ. ಸಾಧಕೀಯ ಮುಕುಟಕ್ಕೆ ಇನ್ನೊಂದು ಗರಿ. ಬಿ ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top