ಜಿಲ್ಲಾ ಜೂನಿಯರ್ ಅಥ್ಲೆಟಿಕ್ ಮೀಟ್‌ನಲ್ಲಿ ಬೆಳ್ಳಿ, ಕಂಚಿನ ಪದಕ ಪಡೆದ ಪೃಥ್ವಿ

Upayuktha
0



ಪುತ್ತೂರು: ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಪೃಥ್ವಿ ಅವರು ದಕ್ಷಿಣ ಕನ್ನಡ ಜಿಲ್ಲಾ ಜೂನಿಯರ್ ಅಥ್ಲೆಟಿಕ್ ಮೀಟ್ 2023ರ ಹ್ಯಾಮರ್ ಥ್ರೋದಲ್ಲಿ ಬೆಳ್ಳಿಯ ಪದಕ ಹಾಗೂ 2023 ಕರ್ನಾಟಕ ರಾಜ್ಯ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ಹ್ಯಾಮರ್ ತ್ರೋದಲ್ಲಿ ಕಂಚಿನ ಪದಕ ಪಡೆದಿದ್ದಾರೆ.



2023 ಪುತ್ತೂರು ತಾಲೂಕು ಪದವಿ ಪೂರ್ವ ಬಾಲಕಿಯರ ಕ್ರೀಡಾಕೂಟದಲ್ಲಿ ಪುತ್ತೂರು ತಾಲೂಕಿನ ಪದವಿಪೂರ್ವ ಬಾಲಕಿಯರ  ಅಥ್ಲೆಟಿಕ್ಸ್ ಆಲ್-ರೌಂಡರ್ ಚಾಂಪಿಯನ್ ಆಗಿದ್ದಾರೆ. (ಡಿಸ್ಕಸ್ ತ್ರೋ ಚಿನ್ನ, ಶಾಟ್ ಪುಟ್ ಚಿನ್ನ, ಹ್ಯಾಮರ್ ತ್ರೋ ಚಿನ್ನ).  2023 ಪದವಿಪೂರ್ವ ಬಾಲಕಿಯರ ಹ್ಯಾಮರ್ ತ್ರೋ ವಿಭಾಗದಲ್ಲಿ ಜಿಲ್ಲಾಮಟ್ಟದಲ್ಲಿ ಬೆಳ್ಳಿಯ ಪದಕ ನವೆಂಬರ್ 28ರಂದು ಧಾರವಾಡದ ಆರ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಮಟ್ಟದ ಹ್ಯಾಮರ್ ತ್ರೋ ವಿಭಾಗದಲ್ಲಿ ಪೃಥ್ವಿ ಸ್ಪರ್ಧಿಸಲಿದ್ದಾರೆ.


ನವೆಂಬರ್ ತಿಂಗಳಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ವೇಟ್ ಲಿಫ್ಟರ್ ಅಸೋಸಿಯೇಷನ್ ಆಯೋಜನೆಯಲ್ಲಿ ನಡೆದ ರಾಜ್ಯಮಟ್ಟದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ (81+) ಪಡೆದಿದ್ದಾರೆ.


ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆ ಪುತ್ತೂರಿನಲ್ಲಿ ಈಕೆ ಪಡೆದಿದ್ದಾರೆ. 2019-20 ಪ್ರೌಢಶಾಲಾ ವಿಭಾಗದ ಬಾಲಕಿಯರ ರಾಷ್ಟ್ರೀಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪ್ರತಿನಿಧಿಯಾಗಿ ಕರ್ನಾಟಕ ರಾಜ್ಯ ಮಟ್ಟದಲ್ಲಿ ಆಯ್ಕೆಗೊಂಡು ದೆಹಲಿಯಲ್ಲಿ ಆಡಿದ ಅನುಭವ ಪಡೆದಿದ್ದಾರೆ.



ಈಕೆ ಪುತ್ತೂರು ತಾಲೂಕಿನ ಪರ್ಪುಂಜದಲ್ಲಿರುವ ಸೌಗಂಧಿಕಾ ನರ್ಸರಿಯ ಮಾಲಕರಾದ ಚಂದ್ರ ಸೌಗಂಧಿಕಾ ಮತ್ತು ವಿದ್ಯಾಲಕ್ಷ್ಮಿ ದಂಪತಿಗಳ ಪುತ್ರಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top