ಮಂಗಳೂರು: ಡಿ.10ರಂದು ಅಂತರ್ ಧರ್ಮೀಯ ಸೌಹಾರ್ದ ಕ್ರೀಡಾ ಕೂಟ

Upayuktha
0


ಮಂಗಳೂರು: ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ), ಆಂಜೆಲೊರ್ ಘಟಕ ಮತ್ತು ಅಂತರ್ ಧರ್ಮೀಯ ಸಂವಾದ ಆಯೋಗ, ಆಂಜೆಲೊರ್ ಚರ್ಚ್, ಪುರುಷರಿಗೆ ವಾಲಿಬಾಲ್ ಹಾಗೂ ಮಹಿಳೆಯರಿಗೆ ತ್ರೋಬಾಲ್ ಪಂದ್ಯಾವಳಿಯನ್ನು ಭಾನುವಾರ, ಡಿಸೆಂಬರ್ 10, 2023 ಬೆಳಿಗ್ಗೆ 8.45 ರಿಂದ ಕಪಿತಾನಿಯೊ ಶಾಲಾ ಮೈದಾನದಲ್ಲಿ ಆಯೋಜಿಸಿದೆ. ಸರ್ವಧರ್ಮದವರು ಕಟ್ಟಿ ಬೆಳೆಸಿದ ಮಂಗಳೂರು ಸೌಹಾರ್ದತೆಯಿಂದ ಕೂಡಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಈ ಲಯವನ್ನು ಇನ್ನೂ ಉತ್ತಮ ರೀತಿಯಲ್ಲಿ ಬೆಳೆಸಲು ಈ ಕ್ರೀಡಾ ಪಂದ್ಯಾವಳಿಯನ್ನು ಕಥೊಲಿಕ್ ಸಭಾ (ರಿ) ಆಂಜೆಲೊರ್ ಘಟಕ ಆಯೋಜಿಸಿದೆ.


ಆಂಜೆಲೊರ್ ಚರ್ಚ್‌ನ ಅಂತರ್ ಧರ್ಮೀಯ ಆಯೋಗದ ಹಾಗೂ ಸ್ಪರ್ಧೆಯ ಸಂಚಾಲಕರಾದ ಫೆಲಿಕ್ಸ್ ಮೊರಾಸ್ ಹಾಗೂ ಇತರ ಗಣ್ಯರು ಇಂದು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.


ಸ್ಪರ್ಧೆಯ ನಿಯಮಗಳು:

• ವಾಲಿಬಾಲ್ ತಂಡದಲ್ಲಿ 9 ಕ್ರೀಡಾಳುಗಳಿದ್ದು, 6 ಕ್ರೀಡಾಳುಗಳು ಆಡಬೇಕು. (ಮೂವರು ಬದಲಿಗಾಗಿ)

• ತ್ರೋಬಾಲ್ ತಂಡದಲ್ಲಿ 10 ಕ್ರೀಡಾಳುಗಳಿದ್ದು, 7 ಕ್ರೀಡಾಳುಗಳು ಆಡಬೇಕು. (ಮೂವರು ಬದಲಿಗಾಗಿ)

• ವಯಸ್ಸಿನ ಮಿತಿಯಿಲ್ಲ.

• ತಂಡದಲ್ಲಿ 4 ಕ್ರೀಡಾಳುಗಳು ಕ್ರೈಸ್ತೇತರಿರಬೇಕು ಮತ್ತು ಆಟದಲ್ಲಿ ಕಡ್ಡಾಯವಾಗಿ ಕನಿಷ್ಠ 2  ಕ್ರೀಡಾಳುಗಳಿರಬೇಕು.

• ಈ ಪಂದ್ಯಾಟವು ಸಿಟಿ ಮತ್ತು ಎಪಿಸ್ಕೋಪಲ್ ಸಿಟಿ ಕ್ಷೇತ್ರಗಳ ಚರ್ಚುಗಳಿಗೆ ಸೀಮಿತವಾಗಿದ್ದು, ಒಂದು   ಚರ್ಚಿನಿಂದ ಒಂದಕ್ಕಿಂತ ಹೆಚ್ಚು ಪಂಗಡಗಳು ಭಾಗವಹಿಸಬಹುದು.

• ಪ್ರಥಮ ಮತ್ತು ದ್ವಿತೀಯ ಬಹುಮಾನದೊಂದಿಗೆ ಟ್ರೋಫಿಯನ್ನು ನೀಡಲಾಗುವುದು.

• ಭಾಗವಹಿಸುವ ಪ್ರತಿಯೊಂದು ಪಂಗಡಗಳಿಗೆ ಸಂಭಾವನೆ ನೀಡಲಾಗುವುದು.


ಹೆಚ್ಚಿನ ವಿವರಗಳಿಗೆ ಸ್ಪರ್ಧೆಯ ಸಂಚಾಲಕರಾದ ಫೆಲಿಕ್ಸ್ ಮೊರಾಸ್ : 9448476546 ಅಥವಾ ಅಂತರ್ ಧರ್ಮೀಯ ಸಂವಾದ ಆಯೋಗದ ಕಾರ್ಯದರ್ಶಿ ರಾಜೇಶ್ ಮಿಸ್ಕಿತ್: 9448428113 ಇವರನ್ನು ಸಂಪರ್ಕಿಸಬಹುದಾಗಿದೆ.


ಪತ್ರಿಕಾಗೋಷ್ಠಿಯಲ್ಲಿ  ರೋಶನ್ ಪತ್ರಾವೊ, ಕಥೊಲಿಕ್ ಸಭಾ ಅಧ್ಯಕ್ಷರು, ಆಂಜೆಲೊರ್ ಘಟಕ; ವಂದನೀಯ ವಿಲ್ಯಮ್ ಮಿನೇಜಸ್, ಧರ್ಮಗುರುಗಳು, ಆಂಜೆಲೊರ್ ಚರ್ಚ್; ರೊಯ್ ಕ್ಯಾಸ್ಟಲಿನೊ, ಸಂಚಾಲಕರು, ಅಂತರ್ ಧರ್ಮೀಯ ಆಯೋಗ, ಮಂಗಳೂರು ಧರ್ಮಪ್ರಾಂತ್ಯ; ರಾಜೇಶ್ ಮಿಸ್ಕಿತ್, ಅಂತರ್ ಧರ್ಮೀಯ ಆಯೋಗ ಕಾರ್ಯದರ್ಶಿ; ಹಾಗೂ ಲೊಲಿನಾ ಡಿಸೋಜಾ, ಪಾಲನಾ ಮಂಡಳಿ ಕಾರ್ಯದರ್ಶಿ ಉಪಸ್ಥಿತರಿದ್ದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top