ಪ್ರಾಯೋಗಿಕ ಕಲಿಕೆಯಿಂದ ಜ್ಞಾನವು ಸದೃಢವಾಗುವುದು: ಪ್ರೊ. ವೃಷಭರಾಜ್ ಜೈನ್

Upayuktha
0

ಕೆನರಾ ಕಾಲೇಜಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮೂಲ ವಿಜ್ಞಾನ ಕಾರ್ಯಾಗಾರ




ಮಂಗಳೂರು: ಕೆನರಾ ಕಾಲೇಜಿನ ವಿಜ್ಞಾನ ಸಂಘದ ವತಿಯಿಂದ ವಿವಿಧ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಒಂದು ದಿನದ ಮೂಲ ವಿಜ್ಞಾನ ಪ್ರಾಯೋಗಿಕ ಪ್ರತ್ಯಕ್ಷ ಕಾರ್ಯಾಗಾರವನ್ನು ಶನಿವಾರ ಆಯೋಜಿಸಲಾಯಿತು.


ಎಸ್‌ವಿಎಸ್‌ ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲರು ಹಾಗೂ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ವೃಷಭರಾಜ್ ಜೈನ್‌ ಅವರು ಕಾರ್ಯಾಗಾರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

 

ವಿದ್ಯಾರ್ಥಿಗಳು ಕಲಿಕೆಯಲ್ಲಿ ಪ್ರಗತಿಯನ್ನು ಕಾಣಲು ತಮ್ಮ ಪಂಚೇಂದ್ರಿಯಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಅವರು ವಿವರಿಸಿದರು. ಮೂಲ ವಿಜ್ಞಾನದ ಬಗ್ಗೆ ಒಲವು ಮೂಡಿಸಲು ಅಧ್ಯಾಪಕರು ಶ್ರಮ ವಹಿಸಬೇಕು. ಹಿಂದಿನ ಕಲಿಕೆಗೂ ಈಗಿನ ಕಲಿಕೆಗೂ ಇರುವ ವ್ಯತ್ಯಾಸವನ್ನು ತಿಳಿಸುತ್ತ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಫಲತೆಯನ್ನು ಕಾಣಲು ಜಗತ್ತಿನ ವಿದ್ಯಮಾನಗಳ ಬಗ್ಗೆ ಅರಿತಿರಬೇಕು ಎಂದು ಕಿವಿ ಮಾತುಗಳನ್ನಾಡಿದರು.



ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ ಪ್ರೇಮಲತ ವಿ ಶುಭ ಹಾರೈಸಿದರು. ವಿಜ್ಞಾನ ಸಂಘದ ಸಂಯೋಜಕಿಯರಾದ ಪ್ರೊ ಡಾಕ್ಟರ್ ಆಶಾ ಕಿರಣ ಪಕ್ಕಳ, ಪ್ರೊ ಪೂರ್ಣಿಮ, ಸಂಘದ ಕಾರ್ಯದರ್ಶಿ ಕುಮಾರಿ ದೀಪ್ತಿಕ, ಕುಮಾರ ವಿ. ವೆಂಕಟೇಶ್ ಉಪಸ್ಥಿತರಿದ್ದರು. ಕುಮಾರಿ ರಚಿತ ಸ್ವಾಗತಿಸಿ, ಕುಮಾರಿ ಮನಸ್ವಿ ಕಾರ್ಯಕ್ರಮವನ್ನು ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top