ಮಂಗಳೂರು ವಿ.ಟಿ ರಸ್ತೆ ವಿಠೋಭ ರುಕುಮಾಯಿ ದೇವಸ್ಥಾನದ ಟ್ರಸ್ಟಿಗಳ ನೇಮಕ ಪ್ರಶ್ನಿಸಿದ ಅರ್ಜಿ ವಜಾ

Upayuktha
0


ಮಂಗಳೂರು: ವಿ.ಟಿ. ರಸ್ತೆಯಲ್ಲಿರುವ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ ಟ್ರಸ್ಟಿಗಳ ನೇಮಕದ ಸಿಂಧುತ್ವವನ್ನು ಪ್ರಶ್ನಿಸಿ ಎಂ ವರದರಾಯ ಪ್ರಭು ಹೂಡಿದ ದಾವೆಯಲ್ಲಿ ಸಲ್ಲಿಸಿದ ಮಧ್ಯಂತರ ಅರ್ಜಿಯನ್ನು ಮಂಗಳೂರು ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ವಜಾಗೊಳಿಸಿದೆ.


ಸದ್ರಿ ದೇವಸ್ಥಾನದ ಪ್ರಸ್ತುತ ಆಡಳಿತ ಮೋಕ್ತೇಸರ ಮರೋಳಿ ಸುರೇಂದ್ರ ಕಾಮತ್ ಅವರು ದೇವಸ್ಥಾನದ ಆಡಳಿತ ಮಂಡಳಿಗೆ 2020ರಲ್ಲಿ ಕಡೆಕನ್ ಪ್ರಕಾಶ್ ಕಾಮತ್ ಹಾಗೂ ಪದವ್ ಸುರೇಂದ್ರನಾಥ್ ಶೆಣೈ ಅವರನ್ನು ಟ್ರಸ್ಟಿಗಳನ್ನಾಗಿ ನೇಮಕಗೊಳಿಸಿದ್ದರು. ಇದನ್ನು ಪ್ರಶ್ನಿಸಿ ವರದರಾಯ್ ಪ್ರಭು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.


ಈ ಬಗ್ಗೆ ಮಧ್ಯಂತರ ತೀರ್ಪು ನೀಡಿರುವ ನ್ಯಾಯಾಧೀಶರು ಶ್ರೀ ವಿಠೋಭ ರುಕುಮಾಯಿ ದೇವಸ್ಥಾನವು ಜಿಎಸ್‌ಬಿ ಸಮಾಜಕ್ಕೆ ಸೇರಿದ ಸಾರ್ವಜನಿಕ ದೇವಾಲಯವಾಗಿದ್ದು, ಇಲ್ಲಿ ದೇವರ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಲು ಆಡಳಿತ ಮೊಕ್ತೇಸರರು ಕೈಗೊಂಡ ಕ್ರಮ ಸೂಕ್ತವಾಗಿದ್ದು, ಯಥೋಚಿತವಾಗಿದೆ. ಇನ್ನು ದಾವೆದಾರ ವರದರಾಯ ಪ್ರಭು ತಮ್ಮನ್ನು ಕೇಳಿ ಟ್ರಸ್ಟಿಗಳನ್ನು ಆಯ್ಕೆ ಮಾಡಬೇಕು ಎಂದು ಅಪೇಕ್ಷಿಸುವುದು ಸರ್ವಥಾ ಸರಿಯಲ್ಲ. ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ವರದರಾಯ ಪ್ರಭುಗಳಿಗೆ ಯಾವುದೇ ವಿಶೇಷ ಅಧಿಕಾರ ಇರುವುದಿಲ್ಲ. ಅವರು ದೇವಸ್ಥಾನದ ಪರವಾಗಿ ದಾವೆ ಹೂಡಿರುವುದು ದೇವಳದ ಅನುಯಾಯಿಯಾಗಿಯೇ ಹೊರತು ಬೇರೆ ಅಧಿಕಾರ ಅವರಿಗೆ ಇಲ್ಲ ಎಂದು ಹೇಳಿದರು.


ದೇವಳದ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ಸಮರ್ಪಕವಾಗಿ ನಡೆಯಲು 1923ರಲ್ಲಿ ಟ್ರಸ್ಟ್ ಡಿಡ್ ರಚಿಸಲಾಗಿದೆ. ವಿಠೋಭ ರುಕುಮಾಯಿ ದೇವಸ್ಥಾನ ಜಿಎಸ್‌ಬಿ ಸಮಾಜಕ್ಕೆ ಸೇರಿದ ಸಾರ್ವಜನಿಕ ದೇವಸ್ಥಾನ ಎಂದು ಈಗಾಗಲೇ ಮಾನ್ಯ ಹೈಕೋರ್ಟ್ ಬೇರೊಂದು ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ ಉಲ್ಲೇಖಿಸಿರುವುದರಿಂದ ನ್ಯಾಯಾಲಯ ಆ ಅಂಶವನ್ನು ಈ ತೀರ್ಪಿನಲ್ಲಿಯೂ ಪರಿಗಣಿಸಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಪ್ರತಿವಾದಿಗಳ ಪರವಾಗಿ ರಘುವೀರ್ ಭಂಡಾರಿಯವರು ವಾದಿಸಿದ್ದರು.


ದೇವಳವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬೇಕೆಂಬ ವರದರಾಯ ಪ್ರಭು ಅವರ ಸ್ವಾರ್ಥ ಸಾಧನೆಗೆ ಈ ತೀರ್ಪು ಹಿನ್ನಡೆಯಾಗಿದೆ. ದೇವಳದ ಅಭಿವೃದ್ಧಿ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ತೊಡಕು ಉಂಟು ಮಾಡಬೇಕೆಂಬ ದುರುದ್ದೇಶದಿಂದ ಪ್ರತಿ ಬಾರಿ ನ್ಯಾಯಾಲಯದಲ್ಲಿ ಅನಗತ್ಯ ದಾವೆಗಳನ್ನು ಹೂಡುವ ವರದರಾಯ ಪ್ರಭು ಅವರು ಇದರಿಂದ ವಿಚಲಿತರಾಗಿದ್ದು, ಇನ್ನೇನು ತಂತ್ರ ಹೂಡಿ ಇದೇ ತಿಂಗಳು ದೇವಳದಲ್ಲಿ ನಡೆಯಲಿರುವ ಅಖಂಡ ಭಜನಾ ಸಪ್ತಾಹಕ್ಕೆ ಅಡಚಣೆ ಉಂಟು ಮಾಡಲಿದ್ದಾರೆಯೋ ಎಂದು ಭಕ್ತಗಣ ಆತಂಕದಿಂದ ಇರುವಂತಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top