
ಮಂಗಳೂರು: ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಚುಟುಕು ಸೌರಭ 2023 ಪದಸ್ವಿಕಾರ - ಗೌರವ ಸನ್ಮಾನ- ಚುಟುಕು ಗೋಷ್ಠಿ ಕಾರ್ಯಕ್ರಮವು ದಿನಾಂಕ 11 ನವೆಂಬರ್ 2023 ಶನಿವಾರ ಬೆಳಗ್ಗೆ 9:30 ರಿಂದ ಹೋಟೆಲ್ ಉತ್ಸವ್ ಸಭಾಂಗಣದಲ್ಲಿ ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪನರೂರು ಅವರು ಉದ್ಘಾಟಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಚುಸಾಪದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಹರೀಶ ಸುಲಾಯ ಒಡ್ಡಂಬೆಟ್ಟು ಅವರು ವಹಿಸಲಿದ್ದಾರೆ.ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷರಾದ ಪುತ್ತೂರು ಉಮೇಶ ನಾಯಕ್, ಚುಸಾಪ ದ ಕ. ಜಿಲ್ಲಾ ಗೌರವಾಧ್ಯಕ್ಷರಾದ ಇರಾ ನೇಮ ಪೂಜಾರಿ ಹಾಗೂ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ನಿರ್ಗಮನ ಅಧ್ಯಕ್ಷರು ಮತ್ತು ಉಡುಪಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಆಗಿರುವ ಕಾ.ವೀ.ಕೃಷ್ಣದಾಸ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪದ ಸ್ವೀಕಾರ ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಶಾಸ್ತ್ರಿಯವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ 2023-24 ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಉಪಾಧ್ಯಕ್ಷರಾಗಿ ಹಿತೇಶ್ ಕುಮಾರ್ ಎ., ಕಾರ್ಯದರ್ಶಿಯಾಗಿ ರಶ್ಮಿ ಸನಿಲ್, ಜೊತೆ ಕಾರ್ಯದರ್ಶಿಯಾಗಿ ರಾಜೇಶ್ವರಿ ಎಚ್. ಬಜ್ಪೆ ಹಾಗೂ ಕೋಶಾಧಿಕಾರಿಯಾಗಿ ಭಾಸ್ಕರ್ ಎ. ವರ್ಕಾಡಿ ಅವರು ಅಧಿಕಾರವನ್ನು ಸ್ವೀಕರಿಸಲಿದ್ದಾರೆ.
ಬಳಿಕ ಇರಾ ನೇಮು ಪೂಜಾರಿ, ಮಹೇಶ್ ಆರ್ ನಾಯಕ್, ಅರುಣಾ ನಾಗರಾಜ್, ಮೊಹಮ್ಮದ್ ಇಸ್ಮಾಯಿಲ್, ರಘು ಇಡ್ಕಿದು, ಪ್ರೊ. ಪಿ. ಕೃಷ್ಣಮೂರ್ತಿ, ಸುಜಯ ಶೆಟ್ಟಿ, ಯಶವಂತ್ ಡಿ.ಎಸ್, ಎನ್. ಸುಬ್ರಾಯ ಭಟ್, ಮಾಲತಿ ಶೆಟ್ಟಿ ಮಾಣೂರು, ಅರೆಹೊಳೆ ಸದಾಶಿವ ರಾವ್, ಡಾ. ಸುರೇಶ್ ನೆಗಳಗುಳಿ, ರೇಮಂಡ್ ಡಿಕುನಾ ತಾಕೊಡೆ, ಕಾ.ವೀ.ಕೃಷ್ಣದಾಸ್, ಗಣೇಶ ಪ್ರಸಾದ ಪಾಂಡೇಲು, ಪಾರ್ವತಿ ಶಾಸ್ತ್ರಿ, ನಾರಾಯಣ ಕುಂಬ್ರ ಹಾಗೂ ಗುಣಾಜೆ ರಾಮಚಂದ್ರ ಭಟ್ ಇವರುಗಳಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ. ನಂತರ ನಡೆಯಲಿರುವ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಖ್ಯಾತ ಸಾಹಿತಿಗಳು ಹಾಗೂ ಉಪನ್ಯಾಸಕರು ಆಗಿರುವ ರಘು ಇಡ್ಕಿದು ಅವರು ವಹಿಸಲಿದ್ದಾರೆ.
ಹಿರಿಯ ಕವಿಗಳಾದ ಶ್ಯಾಮ್ ಪ್ರಸಾದ್ ಭಟ್ ಚಾಲನೆ ನೀಡಲಿರುವ ಕವಿಗೋಷ್ಠಿಯಲ್ಲಿ ಪಾರ್ವತಿ ಶಾಸ್ತ್ರಿ, ಗುಣಾಜೆ ರಾಮಚಂದ್ರ ಭಟ್, ಡಾ. ಸುರೇಶ್ ನೆಗಳಗುಳಿ, ರೇಮಂಡ್ ಡಿಕುನಾ ತಾಕೊಡೆ, ಎನ್. ಸುಬ್ರಾಯ ಭಟ್, ಸತ್ಯವತಿ ಭಟ್ ಕೊಳಚಪ್ಪು, ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು, ಅಶೋಕ ಎನ್. ಕಡೇಶಿವಾಲಯ, ಸೌಮ್ಯಾ ಗೋಪಾಲ್, ಉಮೇಶ್ ಶಿರಿಯ, ವೆಂಕಟೇಶ ಗಟ್ಟಿ, ಆಕೃತಿ ಐ. ಎಸ್. ಭಟ್, ಸೌಮ್ಯ ಆರ್ ಶೆಟ್ಟಿ, ಅನುರಾಧಾ ರಾಜೀವ್ ಸುರತ್ಕಲ್, ರೇಖಾ ಸುದೇಶ್ ರಾವ್, ಅಪೂರ್ವ ಕಾರಂತ್, ಅಬ್ದುಲ್ ಸಮದ್ ಬಾವ ಪುತ್ತೂರು, ಪ್ರೇಮಾ ಉದಯ್, ಅನಾರ್ಕಲಿ ಸಲೀಂ, ಶಮೀಮ ಕುತ್ತಾರ್, ಮನೋಜ್ ಕುಮಾರ್, ಗೀತಾ ಲಕ್ಷ್ಮೀಶ್, ಸುಶೀಲಾ ಕೆ. ಪದ್ಯಾಣ, ಪ್ರಮೀಳಾ ಚುಳ್ಳಿಕ್ಕಾನ, ರತ್ನಾ ಕೆ ಭಟ್, ತಲಂಜೇರಿ ಪುತ್ತೂರು, ವಿಂಧ್ಯಾ ಎಸ್. ರೈ, ಚಂದ್ರಿಕ ಕೈರಂಗಳ, ಸತೀಶ್ ಬಿಳಿಯೂರು, ಮಾನಸ ಪ್ರವೀಣ್ ಭಟ್ ಸೇರಿದಂತೆ 30ಕ್ಕೂ ಹೆಚ್ಚು ಕವಿಗಳು ಭಾಗವಹಿಸಲಿದ್ದಾರೆ.
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಚುಟುಕು ರಚನಾ ಸ್ಪರ್ಧೆಯ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನಗಳನ್ನು ಈ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಅಶೋಕ ಎನ್. ಕಡೇಶಿವಾಲಯ ಅವರು, ದ್ವಿತೀಯ ಸ್ಥಾನವನ್ನು ಅನಾರ್ಕಲಿ ಸಲೀಂ ಅವರು, ತೃತೀಯ ಸ್ಥಾನವನ್ನು ಚಿತ್ರಾಶ್ರೀ ಕೆ.ಎಸ್. ಅವರು ಪಡೆದಿರುತ್ತಾರೆ. ಎನ್. ಸುಬ್ರಾಯ ಭಟ್, ಪ್ರೇಮಾ ಶ್ರೀಕೃಷ್ಣ, ಉಮೇಶ್ ಶಿರಿಯ, ವಿಘ್ನೇಶ್ ಕೆ. ಭಿಡೆ, ಸೌಮ್ಯ ಅರ್. ಶೆಟ್ಟಿ ಅವರು ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ