ಮನುಷ್ಯರಾದ ನಾವು ಕೆಲವೊಮ್ಮೆ ನಮ್ಮ ಭಾವನೆಗಳು ಎಷ್ಟ್ಟು ಪ್ರಬಲವಾಗಿರಬಹುದು ಎಂಬುದರ ಕುರಿತು ವ್ಯಾಪಾಕವಾದ ಕಲ್ಪನೆಯನ್ನು ಹೊಂದಿದ್ದೇವೆ. ಭಾವನೆ ಎಂಬುದು ಕೇವಲ ಮನುಷ್ಯನಿಗೆ ಮಾತ್ರ ಇರುವುದಿಲ್ಲ, ಪ್ರತಿಯೊಂದು ಪ್ರಾಣಿಯಲ್ಲೂ, ಜೀವಿಯಲ್ಲೂ ಭಾವನೆ ಎಂಬುದು ಇರುತ್ತದೆ.
ಕೆಲವೊಮ್ಮೆ ಮನುಷ್ಯ ಬುದ್ದಿ ಇದ್ದರು ಸಹ ಬುದ್ದಿಹೀನಾನಾಗಿ ವರ್ತಿಸುತ್ತಾನೆ, ಬೀದಿ ಬದಿಗಳಲ್ಲಿ ನಾಯಿಯಂತಹ ಮೂಕ ಜೀವಿ ಇದ್ದಾಗ ಅದರ ಹೊಟ್ಟೆ ಪಾಡಿನ ನೋವಿನ ಭಾವನೆಯನ್ನು ಸಹ ಅರಿಯದೇ, ತಾನು ಅದಕ್ಕೆ ಏನಾದರೂ ಒಂದು ಸಣ್ಣ ತಿನಿಸು ಆಹಾರವನ್ನು ಹಾಕದಿದ್ದರೂ ಸಹ, ಕಲ್ಲು ಬಿಸಾಡಿ ಅಥವಾ ಕಾಲಲ್ಲಿ ಒದ್ದು ಹಿಂಸಿಸುವ ಮೂಲಕ ಅವುಗಳಿಗೆ ನೋವನ್ನು ನೀಡಿ ಅಲ್ಲಿಂದ ಓಡಿಸಿಬಿಡುತ್ತಾನೆ.ಮಳೆಗಾಲದ ಸಂದರ್ಭದಲ್ಲಿ ಅವುಗಳು ಪಾಪ ಮಳೆಯಲ್ಲಿ ಒದ್ದೆಯಾಗುವುದನ್ನು ರಕ್ಷಿಸಿಕೊಳ್ಳಲು ಅಂಗಡಿಗಳ ಬದಿಗಳಲ್ಲಿ, ಅಥವಾ ಬಸ್ಟ್ಯಾಂಡಗಳ ಮೂಲೆಯಲ್ಲಿ ಬಂದು ಒಂದು ಇಂಚು ಜಾಗವನ್ನು ಅವರಿಸಿಕೊಂಡು ತಮ್ಮ ಪಾಡಿಗೆ ಬಂದು ಮಲಗಿರುತ್ತವೆ. ಅಲ್ಲಿದ್ದ ಮನುಷ್ಯ ಜೀವಿಗಳು ಓಡಿಸಿಬಿಡುತ್ತಾರೆ, ಆಗ ಅವುಗಳು ಹೋಗಿ ನಿಂತಿರುವ ವಾಹನಗಳ ಅಡಿಯಲ್ಲಿ ಮಲಗುತ್ತವೆ. ಇದರಿಂದ ಕೆಲವೊಮ್ಮೆ ಅದೆಷ್ಟೋ ಬಾರಿ ನಾಯಿಗಳು ವಾಹನಗಳ ಅಡಿಗೆ ಬಿದ್ದು ಒದ್ದಾಡಿ ಸಾಯುತ್ತವೆ. ಅವುಗಳು ಬೇಕೆಂದು ಹೋಗಿ ಸಾಯಲಿಲ್ಲ, ಹೊರತು ಈ ಮಾನವ ಜೀವಿಯಿಂದ ಸಾವು ಕಾಣುತ್ತವೆ. ಅವುಗಳು ಮೊದಲು ಇದ್ದ ಜಾಗದಲ್ಲಿ ಇರುತ್ತಿದ್ದರೆ ಜೀವ ಉಳಿಯುತ್ತಿತ್ತು ಅಲ್ಲವೇ?! ಈ ಬೇಸಿಗೆಯಲ್ಲಿ ಬೀದಿ ನಾಯಿಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ, ನೀರಿಲ್ಲದ ಕಾರಣ ಖಾಲಿ ಹೊಟ್ಟೆ ತುಂಬಿಸಿಕೊಳ್ಳಲು ಚರಂಡಿಯ ನೀರನ್ನೇ ಕುಡಿಯುತ್ತವೆ, ಒಂದು ಬಾರಿಯಾದರೂ ಅವುಗಳಿಗೆ ಆಹಾರ, ನೀರಾನ್ನಾದರೂ ನೀಡಿ. ಅವುಗಳು ತಮ್ಮ ಜೀವಿತಾವಧಿಯಲ್ಲಿ ಆ ವ್ಯಕ್ತಿಯನ್ನು ಎಂದಿಗೂ ಮರೆಯುವುದಿಲ್ಲ.
ಮೂಕ ಜೀವಿಗಳು ಹಾಗಾದರೆ ತಮ್ಮ ಭಾವನೆಯನ್ನು ಹೇಗೆ ವ್ಯಕ್ತ ಪಡಿಸಲು ಸಾಧ್ಯ? ಕೆಲವೊಮ್ಮೆ ತೀರಾ ನೋವಾದಾಗ ಕಣ್ಣೀರಿನ ಮೂಲಕ ಮೂಕವಾಗಿ ತಮ್ಮ ಭಾವನೆಯನ್ನು ಹೊರ ಹಾಕುವುದನ್ನು ಪ್ರತಿಯೊಬ್ಬ ಮನುಷ್ಯನು ಗಮನಿಸಬಹುದು. ಪ್ರತಿಯೊಂದು ಪ್ರಾಣಿ, ಪಕ್ಷಿಯಂತಹ ಜೀವಿಗಳ ಭಾವನೆಯನ್ನು ಬುದ್ಧಿ ಇರುವ ಮನುಷ್ಯರಾದ ನಾವು ಅರಿತುಕೊಳ್ಳಬೇಕು. ಅವುಗಳ ಭಾವನೆಯನ್ನು ಅರಿಯದಿದ್ದರೂ ಪರವಾಗಿಲ್ಲ, ಆದರೆ ಅವುಗಳಿಗೆ ಅಪಾಯ, ತೊಂದರೆಯನ್ನು ನೀಡುವ ಹಕ್ಕು ನಮಗಿಲ್ಲ. ಒಂದು ವೇಳೆ ನಾವು ಆ ಮೂಕ ಜೀವಿಗಳ ಸ್ಥಾನದಲ್ಲಿರುತ್ತಿದ್ದರೆ ನಮ್ಮ ಸ್ಥಿತಿ ಹೇಗೆ ಇರುತ್ತಿತ್ತು?! ಮನುಷ್ಯರಲ್ಲದ ಪ್ರಾಣಿಯ ಭಾವನೆ ಎಷ್ಟ್ಟು ಆಳವಾಗಿರುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?! ಸಂತೋಷ, ಭಯ, ನೋವಿನಂತಹ ಭಾವನೆಗಳನ್ನು ಅನುಭವಿಸುವ ಮಾನವರಲ್ಲದ ಪ್ರಾಣಿಗಳ ಸಾಮರ್ಥ್ಯದ ಪರಿಮಾಣವನ್ನು ಮಾನವರು ಅರ್ಥಮಾಡಿಕೊಳ್ಳಬೇಕು. ಅವುಗಳಿಗೂ ಸಹ ಬದುಕುವ ಹಕ್ಕು ಇದೆ, ಅವುಗಳ ಸೂಕ್ಷ್ಮ ಮನಸ್ಸಿನೊಳಗೆ ಮುಗ್ಧತೆಯ ಭಾವನೆಯು ಅಡಗಿದೆ.
- ಶಿಲ್ಪಾ ಜಯಾನಂದ್
ಪ್ರಥಮ ಎಂ.ಸಿ.ಜೆ ವಿಭಾಗ
ವಿವೇಕಾನಂದ ಕಾಲೇಜ್, ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ