ಮಂಗಳೂರು ಮಾರುಕಟ್ಟೆಗೆ ಜೀತೊ ಸ್ಟ್ರಾಂಗ್ ಬಿಡುಗಡೆ

Upayuktha
0


ಮಂಗಳೂರು: ಮಹೀಂದ್ರಾ ಸಮೂಹದ ಅಂಗಸಂಸ್ಥೆಯಾಗಿರುವ ಮಹೀಂದ್ರಾ ಲಾಸ್ಟ್ ಮೈಲ್ ಮೊಬಿಲಿಟಿ ಲಿಮಿಟೆಡ್ (ಎಂಎಲ್‍ಎಂಎಂಎಲ್), ಮಂಗಳೂರು ಸೇರಿದಂತೆ ರಾಜ್ಯದ ಮಾರುಕಟ್ಟೆಗೆ "ಮಹೀಂದ್ರಾ ಜೀತೊ ಸ್ಟ್ರಾಂಗ್" ಬಿಡುಗಡೆ ಮಾಡಿದೆ.


ದೇಶದಲ್ಲಿ 2 ಲಕ್ಷಕ್ಕಿಂತ ಹೆಚ್ಚು ಸಂತೃಪ್ತ ಜೀತೊ ಗ್ರಾಹಕರಿದ್ದು, ಕೊನೆ ಮೈಲಿಯ ಕಾರ್ಗೊ ಸಾರಿಗೆಯನ್ನು ಮರು ವ್ಯಾಖ್ಯಾನಿಸಲು ಜೀತೊ ಸ್ಟ್ರಾಂಗ್ ಸನ್ನದ್ಧವಾಗಿದೆ. ಡೀಸೆಲ್‍ನಲ್ಲಿ 815 ಕೆಜಿ ಹಾಗೂ ಸಿಎನ್‍ಜಿಯಲ್ಲಿ 750 ಕೆಜಿಯಷ್ಟು ಅತಿ ಹೆಚ್ಚಿನ ಪೇಲೋಡ್ ಸಾಮಥ್ರ್ಯವನ್ನು ಹೊಂದಿದ್ದು, ಇದು ಉತ್ಪಾದಕತೆಯನ್ನು ಹೆಚ್ಚಿಸಲಿದೆ ಎಂದು ಎಂಡಿ ಮತ್ತು ಸಿಇಓ ಶ್ರೀಮತಿ ಸುಮನ್ ಮಿಶ್ರಾ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಉದ್ಯಮದಲ್ಲೇ ಅತ್ಯುತ್ತಮ ಮೈಲೇಜ್ (ಡೀಸೆಲ್‍ನಲ್ಲಿ ಲೀಟರ್‍ಗೆ 32 ಕಿ.ಮೀ ಮತ್ತು ಸಿಎಂಜಿಯಲ್ಲಿ ಪ್ರತಿ ಕೆಜಿಗೆ 35 ಕಿಲೋಮೀಟರ್) ನೀಡುವ ವಿಶೇಷತೆಯನ್ನು ಹೊಂದಿದ್ದು, ಸಬ್-2 ಟನ್ ಐಸಿಇ ಕಾರ್ಗೊ 4-ವೀಲರ್‍ನಲ್ಲಿಯೇ ಮೊದಲು ಎನ್ನಬಹುದಾದ ಎಲೆಕ್ಟ್ರಿಕ್ ವ್ಯಾಕ್ಯೂಮ್ ಪಂಪ್-ಸಹಾಯದ ಬ್ರೇಕಿಂಗ್, ಬಳಕೆದಾರಸ್ನೇಹಿ ಹೊಚ್ಚ ಹೊಸ ಡಿಜಿಟಲ್ ಕ್ಲಸ್ಟರ್ ಮತ್ತು ಸುಧಾರಿತ ಸಸ್ಪೆನ್ಶನ್ ಅನ್ನು ಒಳಗೊಂಡಿದೆ.


ಮಾಲೀಕತ್ವದ ಅನುಭವವನ್ನು ಹೆಚ್ಚಿಸಲು, ಚಾಲಕನಿಗೆ ರೂ. 10 ಲಕ್ಷ ಮೌಲ್ಯದ ಉಚಿತ ಅಪಘಾತ ವಿಮೆಯನ್ನು ಸಹ ಮಹೀಂದ್ರಾ ನೀಡಲಿದ್ದು, ತನ್ನ ಗ್ರಾಹಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುತ್ತದೆ. 3 ವರ್ಷ ಅಥವಾ 72000 ಕಿ.ಮೀ ವಾರಂಟಿಯನ್ನು ಸಹ ಒದಗಿಸಲಿದ್ದು, ಗುಣಮಟ್ಟ ಹಾಗೂ ಬಾಳಿಕೆಯ ಕುರಿತು ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಎಕ್ಸ್ ಶೋರೂಂ ಬೆಲೆ ಡೀಸೆಲ್‍ಗೆ ರೂ. 5.28 ಲಕ್ಷ ಮತ್ತು ಸಿಎನ್‍ಜಿಗೆ ರೂ. 5.50 ಲಕ್ಷ ಆಗಿರುತ್ತದೆ ಎಂದು ವಿವರಿಸಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top