'ಎನ್‍ಆರ್‍ಐ ಹೋಮ್‍ಕಮಿಂಗ್' ಉತ್ಸವ

Upayuktha
0


ಮಂಗಳೂರು: ಅನಿವಾಸಿ ಭಾರತೀಯರು ತಮ್ಮ ಕುಟುಂಬಗಳೊಂದಿಗೆ ಮತ್ತೆ ಒಂದಾಗಲು ದೇಶಕ್ಕೆ ಹಿಂದಿರುಗಿದ ನೆನಪಿಗಾಗಿ ಇಂಡಸ್‍ಇಂಡ್ ಬ್ಯಾಂಕ್ ಇಂದು 'ಎನ್‍ಆರ್‍ಐ ಹೋಮ್‍ಕಮಿಂಗ್' ಎಂಬ ವಿಶಿಷ್ಟ ಉತ್ಸವವನ್ನು ಪ್ರಾರಂಭಿಸಿದೆ.


ಈ ಉಪಕ್ರಮವು ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸೇವೆಗಳ ಮೇಲೆ ಸಂಭ್ರಮಾಚರಣೆಯ ಕಾರ್ಯಕ್ರಮಗಳು ಮತ್ತು ಆಕರ್ಷಕ ಕೊಡುಗೆಗಳ ಮೂಲಕ ಗ್ರಾಹಕರಿಗೆ ಸ್ಮರಣೀಯ ಅನುಭವವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.


ಉತ್ಸವದ ಅಂಗವಾಗಿ ಬ್ಯಾಂಕ್ ಎನ್‍ಆರ್‍ಇ/ಎನ್‍ಆರ್‍ಓ ಉಳಿತಾಯ ಖಾತೆಗಳ ಮೇಲೆ ವಾರ್ಷಿಕ ಶೇಕಡ 6.75 ರ ವರೆಗಿನ ಬಡ್ಡಿದರ, ಎನ್‍ಆರ್‍ಇ/ಎನ್‍ಆರ್‍ಓ ಠೇವಣಿಗಳ ಮೇಲೆ ಶೇಕಡ 7.5 ರ ವರೆಗಿನ ಬಡ್ಡಿ ದರಗಳು, ಮತ್ತು ಯುಎಸ್‍ಡಿ ಎಫ್‍ಎನ್‍ಸಿಆರ್ ಠೇವಣಿಗಳ ಮೇಲೆ ಶೇಕಡ 5.95 ರ ವರೆಗಿನ ಬಡ್ಡಿ ದರಗಳನ್ನು ಒಳಗೊಂಡಿರುವ ಸೀಮಿತ ಅವಧಿಯ ಲಾಭಗಳನ್ನು ಒದಗಿಸುತ್ತದೆ.


ಇದಲ್ಲದೆ, ಆರ್ಥಿಕ ಸಾಕ್ಷರತೆಯ ಕುರಿತು ತಿಳಿವಳಿಕೆ ನೀಡುವ ಸೆಷನ್‍ಗಳನ್ನು ಒಳಗೊಂಡಿದೆ, ವಿದೇಶಕ್ಕೆ ಹಿಂದಿರುಗುವ ಮೊದಲು ಅವರ ಹಣಕಾಸಿನ ಅವಶ್ಯಕತೆಗಳ ಕುರಿತು ಎನ್‍ಆರ್‍ಐಗಳು ಮತ್ತು ಪಿಐಒಗಳಿಗೆ ಅಮೂಲ್ಯವಾದ ಒಳನೋಟಗಳು ಮತ್ತು ಮಾರ್ಗದರ್ಶನವನ್ನು ಒದಗಿಸುತ್ತದೆ ಎಂದು ಪ್ರಕಟಣೆ ಹೇಳಿದೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top