ವೈದ್ಯಕೀಯ ಸಾಹಿತ್ಯ ಜನ ಮಾನಸಕ್ಕೆ ತಲುಪಲಿ: ಡಾ ಚಕ್ರಪಾಣಿ

Upayuktha
0

ಮಂಗಳೂರು: ಡಾ. ಚೂಂತಾರು ಅವರು ಬರೆದ ಧನ್ವಂತರಿ ಪುಸ್ತಕವು ವಿವಿಧ ರೋಗ ಲಕ್ಷಣಗಳು ಹಾಗೂ ವಿವರವನ್ನು ನೀಡುವ ಕೃತಿಯಾಗಿದ್ದು ಓದಿಸಿಕೊಂಡು ಹೋಗುವ ಗುಣವುಳ್ಳ ಭಾಷೆ ಹೊಂದಿದೆ. ಜೀವನ ಶೈಲಿ ಬದಲಾಯಿಸಿಕೊಂಡು ರೋಗದಿಂದ ದೂರ ಉಳಿಯಬಹುದಾದ ಸಲಹೆಗಳು ಮತ್ತು ಭವಿಷ್ಯದಲ್ಲಿ ವೈದ್ಯಕೀಯ ಎಂಬ ವೈದ್ಯಕೀಯ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಬಲ್ಲ ಅಧ್ಯಾಯ ಹೊಂದಿದೆ. ವೈದ್ಯ ನಿಂತ ನೀರಾಗದೆ ನಿರಂತರ ಅಧ್ಯಯನ/ಅಭ್ಯಾಸಶೀಲನಾಗಬೇಕು ಎಂದು ಡಾ. ಶಿಕಾರಿಪುರ ಕೃಷ್ಣಮೂರ್ತಿ ನುಡಿದರು.


ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ ಡಾ. ಚಕ್ರಪಾಣಿ ಅವರು ಇಂತಹ ಕೃತಿಗಳಿಂದ ಜನರಿಗೆ ಬಹಳ ಉಪಯೋಗ ಎಂದರು. ವೈದ್ಯರ ಮತ್ತು ರೋಗಿಗಳ ಸಮಯ ಉಳಿತಾಯ ಎಂದು ಡಾ. ಚಕ್ರಪಾಣಿ ಅಭಿಪ್ರಾಯಪಟ್ಟರು. 


ಇನ್ನೋರ್ವ ಅತಿಥಿ ಡಾ. ಕಿಶನ್ ರಾವ್ ಬಾಳಿಲ ಅವರು ಮಾತನಾಡಿ ವೈದ್ಯನ ಪರಿಣತಿ, ಕೌಶಲ್ಯ,ರೋಗ ವಿಧಾನ ಮತ್ತು ಔಷಧಿಯ ಜೊತೆಗೆ ರೋಗಿಯ ಶ್ರದ್ಧೆ ಮತ್ತು ನಂಬಿಕೆಗಳೂ ಕೆಲಸ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.


ಲಯನ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಲಯನ್ ಸೀನ್ ಪೂಜಾರಿ ಶುಭ ಹಾರೈಸಿದರು. ಲೇಖಕ ಡಾ. ಮುರಲಿ ಮೋಹನ್ ಚೂಂತಾರು ಸ್ವಾಗತಿಸಿದರು ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಮಂಜುನಾಥ ರೇವಣಕರ್ ಅಧ್ಯಕ್ಷತೆ ವಹಿಸಿದ್ದರು ಮತ್ತು ಶುಭ ಹಾರೈಸಿದರು. ಧನ್ವಂತರಿ ಮಂತ್ರ ಪಠಣ ದೊಂದಿಗೆ ಸಭೆ ಆರಂಭವಾಯಿತು. ಗಣೇಶ್ ಪ್ರಸಾದ್ ಜಿ ಅವರು ವಂದಿಸಿದರು. ರಾಮಕ್ರಷ್ಣ ಭಟ್ ಬೆಳಾಲು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಭಾರತೀ ಕಾಲೇಜು ಇದರ ಖಜಾಂಚಿ ಉದಯಶಂಕರ್ ನೀರುಪಾಜೆ, ಮಂಗಳೂರು ಹವ್ಯಕ ಸಭಾದ ಅಧ್ಯಕ್ಷ ಗೀತಾಗಣೇಶ್ ಉಪಸ್ಥಿತರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter     

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top