ಗಣಿತ ವಿಭಾಗದ ಸಿಗ್ಮಾ ಅಸೋಸಿಯೇಶನ್ ಅತಿಥಿ ಉಪನ್ಯಾಸ ಕಾರ್ಯಕ್ರಮ
ಉಜಿರೆ: ನಿಸರ್ಗವು ಭೌತಶಾಸ್ತ್ರದ ಮೂಲಕ ಬರೆಯಲ್ಪಟ್ಟಿದೆ ಮತ್ತು ಅದರ ವ್ಯಾಕರಣ ಗಣಿತವಾಗಿದೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ರಾಘವೇಂದ್ರ ಅಭಿಪ್ರಾಯಪಟ್ಟರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಗಣಿತ ವಿಭಾಗದ ಸಿಗ್ಮಾ ಅಸೋಸಿಯೇಶನ್ ನ. 10ರಂದು ಆಯೋಜಿಸಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಸಿಮ್ಮೆಟ್ರಿಸ್, ಪ್ಯಾಟರ್ನ್ಸ್ ಮತ್ತು ಲಿಂಕಿಂಗ್ ಎಂಬ ಮೂರು ಸರಣಿ ಉಪನ್ಯಾಸಗಳ ಮೂಲಕ ವಿವಿಧ ವಿಷಯಗಳ ಮೇಲೆ ಗಣಿತದ ಪ್ರಭಾವ ಮತ್ತು ಪ್ರಾಮುಖ್ಯವನ್ನು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಮೊದಲ ಸರಣಿ 'ಸಿಮ್ಮೆಟ್ರಿಸ್' ನಲ್ಲಿ ಡಚ್ ಮೂಲದ ಚಿತ್ರಕಾರ ಎಶರ್ ನ ಅದ್ಭುತ ಚಿತ್ರಗಳು ಮತ್ತು ಗಣಿತದ ಹಿನ್ನೆಲೆಯೇ ಇಲ್ಲದೇ ಆತ ಗಣಿತಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಿದರು. ದ್ವಿ ವಕ್ರೀಭವನ ಭೌತಶಾಸ್ತ್ರ, ಗಣಿತ ಹಾಗೂ ಕಲೆ ಹೇಗೆ ನಾನಾ ವಿಷಯಗಳ ಮೇಲೆ ಯಾವ ರೀತಿ ಪ್ರಭಾವ ಬೀರಿದೆ ಎಂಬುದನ್ನು ತಿಳಿಸಿದರು.
ಎರಡನೆಯ ಸರಣಿ 'ಪ್ಯಾಟರ್ನ್' ಮೂಲಕ ರಚನಾ ವಿನ್ಯಾಸಗಳು ಪರಿಸರ, ಇತಿಹಾಸ, ಕ್ರೀಡೆಗಳಲ್ಲಿ ಬೆರೆಯುವುದರೊಂದಿಗೆ ದಿನ ನಿತ್ಯದ ಜೀವನದಲ್ಲಿ ಯಾವ ರೀತಿ ಬಳಕೆಯಾಗುತ್ತಿದೆ ಎಂಬ ಮಾಹಿತಿ ನೀಡಿದರು.
ಕೊನೆಯ ಸರಣಿ 'ಲಿಂಕಿಂಗ್' ನಲ್ಲಿ ಭೂ ವಿಜ್ಞಾನ, ಇತಿಹಾಸಕ್ಕೆ ಸಂಬಂಧಿಸಿದಂತೆ ಗಣಿತದ ಅನ್ವಯಗಳನ್ನು ವಿವರಿಸಿದರು.
ಗಣಿತ ವಿಭಾಗದ ಮುಖ್ಯಸ್ಥ ಪ್ರೊ. ಬಿ. ಗಣೇಶ್ ನಾಯಕ್, ಉಪನ್ಯಾಸಕಿ ಅಕ್ಷತಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಬಿಂದು ಸ್ವಾಗತಿಸಿ, ಸಂಜನಾ ಪ್ರಾರ್ಥಿಸಿ, ರಿಯಾ ವಂದಿಸಿ, ಸತೀಶ್ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ