ದೀಪಾವಳಿ - ಬಾಲ್ಯದ ನೆನಪುಗಳು

Upayuktha
0


ಸಾಂಧರ್ಬಿಕ ಚಿತ್ರ

ಣತೆ ಎಂದರೆ ಬೆಳಕು ಇದು ಕೇವಲ ಬೆಳಕಲ್ಲ ,ಜೀವನದ ಬೆಳಕು. ಅಂಧಕಾರವನ್ನು ಮರೆಮಾಡುವ ಚೇತನ. ಒಬ್ಬ ವ್ಯಕ್ತಿ ತನ್ನ ಎಲ್ಲ ಆಸೆ ಆಕಾಂಕ್ಷೆ ಗುರಿಯನ್ನು ನೆನೆದು ಹಚ್ಚಿದ ಹಣತೆ.


ದೀಪಾವಳಿ ಎಂದಾಗ ನೆನಪಾಗುವುದು ಜ್ಯೋತಿ ನನ್ನ ಎಲ್ಲಾ ಸ್ನೇಹಿತರಿಗೆ,ಶಿಕ್ಷಕರಿಗೆ, ನನಗೆ ಒಳ್ಳೆಯದನ್ನು ಬಯಸುವ ನನ್ನ ಎಲ್ಲ ಹಿರಿಯರಿಗೂ, ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ದೀಪಾವಳಿ ನಿಮ್ಮ ಬಾಳಿನ ಅಂಧಕಾರವನ್ನು ದೂರಮಾಡಲಿ ನಿಮ್ಮ ಬಾಳು ಬಂಗಾರವಾಗಲಿ.


ದೀಪಾವಳಿ ಎಂದಾಗ ನನಗೆ ನನ್ನ ಬಾಲ್ಯ ನೆನಪಾಗುತ್ತದೆ. ನಮ್ಮ ಮನೆಯಲ್ಲಿ ನರಕ‌ ಚತುರ್ಥಿಯಂದು ಎಣ್ಣೆ ಸ್ನಾನ ಮಾಡುತ್ತೇವೆ. ಈ ದಿನದ ಹಿಂದಿ ದಿನ ನಮ್ಮಮ್ಮ ಸ್ನಾನದ ಹಂಡೆಯನ್ನು ತೊಳೆದು ಹೂವಿನ ಹಾರ ಹಾಕಿ ಪೂಜೆ ಮಾಡುತ್ತಾರೆ. ನಾವು ಎಣ್ಣೆ ಹಾಕಿ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಸಂತೋಷದಿಂದ ದಿನ ಕಳೆಯುತ್ತಿದ್ದೆವು. ಬಾಲ್ಯದಲ್ಲಿ ಈ ದಿನಗಳ ವಿಶೇಷತೆಯ ಬಗ್ಗೆ ತಿಳಿಯುವ ಕುತೂಹಲ ಇತ್ತು. ಆ ಕುತೂಹಲ ಬಾಲ್ಯ‌ಕಳೆದು ಯೌವ್ವನ ಬಂದಾಗ ಮರೆಯಾಗಿದೆ. ಈಗಿನ ಮಕ್ಕಳಿಗೆ ಜಂಗಮ ವಾಣಿ ಇದ್ದರೆ ಸಾಕು ಜಗವನ್ನೇ ಮರೆಯುತ್ತಾರೆ. ನನಗೆ ಬಾಲ್ಯದಲ್ಲಿ ಪಟಾಕಿ ಎಂದರೆ ಭಯ. ಆದರೆ ಈಗ ಆ ಭಯ ಮಾಯವಾಗಿದೆ.

ನಮ್ಮ ಸಂಸ್ಕೃತಿಗಳ ಕುರುಹುಗಳು ಈ ಹಬ್ಬಗಳು. ಹಿಂದೆ ಹಬ್ಬ ಎಂದರೆ ಎಲ್ಲರೂ ಸೇರಿ ಆಚರಿಸುತ್ತಿದ್ದರು. ಆದರೆ ಈ ದಿನಗಳಲ್ಲಿ ಹಬ್ಬಗಳಿಗೆ ಬರುವುದೇ ಕಡಿಮೆಯಾಗಿದೆ. ಸಣ್ಣ ಮಕ್ಕಳು ಇಂತಹ ಹಬ್ಬಗಳ ವಿಶೇಷ ತಿಳಿಯುವುದು ಕಷ್ಟವಾಗಿದೆ. ಇದು ನಮ್ಮ ಸಂಸ್ಕೃತಿ ಅಳಿವಿಗೆ ಕಾರಣವಾಗಿದೆ.   

 

-ಹರ್ಷಿತಾ ವಿ. ಪಿ.                                                                                   

                                                               


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter     

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top