ಪಣಜಿ-ಸಿಂಧಗಿ ಬಸ್ ಸಂಚಾರ ಪುನರಾರಂಭಕ್ಕೆ ಕರವೇ ಆಗ್ರಹ

Upayuktha
0


ಪಣಜಿ: ಕರ್ನಾಟಕ ರಕ್ಷಣಾ ವೇದಿಕೆಯ ಗೋವಾ ಪ್ರವೀಣಕುಮಾರ್ ಶೆಟ್ಟಿ ಬಣ ಸಂಘಟನೆಯ ವತಿಯಿಂದ ಗೋವಾದ ವಾಸ್ಕೊ-ಸಿಂಧಗಿ ಬಸ್ ಸಂಚಾರವನ್ನು ಪುನರಾರಂಭಗೊಳಿಸುವ ಕುರಿತಂತೆ ಸಿಂಧಗಿ ಬಸ್ ಸಂಚಾಲಕರ ಮುಖಾಂತರ ವಿಜಯಪುರ ಬಸ್‍ಡಿಪೊ ಮ್ಯಾನೇಜರ್‌ಗೆ ಮನವಿ ಪತ್ರ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಬಸ್ ಸಂಚಾರ ಆರಂಭಗೊಂಡಿರುವುದಿಲ್ಲ. ನವೆಂಬರ್ 4 ರವರೆಗೆ ವಾಸ್ಕೊ- ಸಿಂಧಗಿ ಬಸ್ ಸಂಚಾರ ಆರಂಭಗೊಳ್ಳದಿದ್ದರೆ, ನವೆಂಬರ್ 5 ರಂದು ಪಣಜಿ-ಸಿಂಧಗಿ ಬಸ್ ಓಡಾಟವನ್ನು ತಡೆಯುವ ಮೂಲಕ ಉಗ್ರ ಹೋರಾಟ ನಡೆಸಲಾಗವುದು ಎಂದು ಕರವೇ ಗೋವಾ ರಾಜ್ಯಾಧ್ಯಕ್ಷ ಮಂಜು ನಾಟೀಕರ್ ಮಾಹಿತಿ ನೀಡಿದ್ದಾರೆ.


ವಾಸ್ಕೊದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು- ವಿಜಯಪುರ ಡಿಪೊ ಮ್ಯಾನೇಜರ್ ರವರಿಗೆ ದೂರವಾಣಿಯ ಮೂಲಕ ವಾಸ್ಕೊ-ಸಿಂಧಗಿ ಬಸ್ ಸಂಚಾರ ಆರಂಭಿಸುವಂತೆ ಮನವಿ ಮಾಡಿಕೊಂಡೆವು. ಆದರೆ ನಮ್ಮ ಮನವಿಯನ್ನು ಅವರು ನಿರ್ಲಕ್ಷ ಮಾಡಿದ್ದಾರೆ. ಇದುವರೆಗೂ ಕೂಡ ವಾಸ್ಕೊ-ಸಿಂಧಗಿ ಬಸ್ ಓಡಾಟ ಆರಂಭಿಸಿಲ್ಲ. ನವೆಂಬರ್ 4 ರವರೆಗೆ ಈ ಮಾರ್ಗಕ್ಕೆ ಬಸ್ ಸಂಚಾರ ಆರಂಭಗೊಳ್ಳದಿದ್ದರೆ ನವೆಂಬರ್ 5 ರಂದು ಪಣಜಿ-ಸಿಂಧಗಿ ಬಸ್ ಓಡಾಟ ತಡೆಯಲಾಗುವುದು ಎಂದು ಮಂಜು ನಾಟೀಕರ್ ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top