ನ.5ರಂದು ಭಾಗವತ ಸುಬ್ರಹ್ಮಣ್ಯ ಧಾರೇಶ್ವರರಿಗೆ ಸೃಷ್ಟಿಕಲಾಭೂಷಣ ಪ್ರಶಸ್ತಿ

Upayuktha
0



ಮಂಗಳೂರು: ಬೆಂಗಳೂರಿನ ಸೃಷ್ಟಿಕಲಾ ವಿದ್ಯಾಲಯದ ಯಕ್ಷೋತ್ಸವ ಮತ್ತು ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ಸೃಷ್ಟಿ ಕಲಾಭೂಷಣ ಪ್ರಶಸ್ತಿ ಪ್ರದಾನ ಸಮಾರಂಭವು ನ.5ರಂದು ಚೆನ್ನಮ್ಮನಕೆರೆ ಅಚ್ಚುಕಟ್ಟು ಬಳಿಯ ಪರಂಪರಾ ಸಭಾಂಗಣದಲ್ಲಿ ನಡೆಯಲಿದೆ.



ಎಪಿಎಸ್‌ ಪಬ್ಲಿಕ್‌ ಸ್ಕೂಲ್‌ ಪ್ರಾಂಶುಪಾಲೆ ಶಾಲಿನಿ ಜಗದೀಶ್‌, ಕುಂದೇಶ್ವರ ಪ್ರತಿಷ್ಠಾನ ಅಧ್ಯಕ್ಷ ಜಿತೇಂದ್ರ ಕುಂದೇಶ್ವರ, ಸೃಷ್ಟಿ ಕಲಾ ವಿದ್ಯಾಲಯ ಗೌರವಾಧ್ಯಕ್ಷ ಶ್ರೀಕಾಂತ್‌ ಎಂ.ಜಿ. ಭಾಗವಹಿಸುವರು. ಈ ಸಂದರ್ಭ ಮಧ್ಯಾಹ್ನ 3.30ರಿಂದ ರಾತ್ರಿ 8.30 ಗಂಟೆವರೆಗೆ ಭಾಗವತ ಸುಬ್ರಾಯ ಹೆಬ್ಬಾರ್ ಮತ್ತು ಭರತ್‌ರಾಜ್‌ ಪರ್ಕಳ ನಿರ್ದೇಶನದಲ್ಲಿ ದ್ರೌಪದಿ ಪ್ರತಾಪ ಮತ್ತು ಶ್ವೇತಕುಮಾರ ಚರಿತ್ರೆ ಎರಡು ಆಖ್ಯಾನ ಪ್ರದರ್ಶನಗೊಳ್ಳಲಿದೆ ಎಂದು ಅಧ್ಯಕ್ಷ ಛಾಯಪತಿ ಕಂಚಿಬೈಲ್ ತಿಳಿಸಿದ್ದಾರೆ.



ಯಕ್ಷರಸಧಾರೆ:

ಧಾರೇಶ್ವರ ಅವರು ಯಕ್ಷಲೋಕದ ನಿಜವಾದ ಗಾನಗಂಧರ್ವ. ಆರಂಭದಲ್ಲಿ ಹಿಂದುಸ್ತಾನಿ ಸಂಗೀತ ಅಭ್ಯಸಿಸಿ ಬಳಿಕ ಕೋಟ 'ಅಮೃತೇಶ್ವರಿ ಮೇಳ' ಶ್ರೀ ಪೆರ್ಡೂರು ಮೇಳದಲ್ಲಿ ಭಾಗವತರಾಗಿ, ಹೊಸರಾಗಗಳನ್ನು ಹೊಸ ತಾಂತ್ರಿಕತೆಯನ್ನು ಯಕ್ಷರಂಗದಲ್ಲಿ ಯಶಸ್ವಿಯಾಗಿ ಬಳಸಿದವರು.



450 ಕ್ಕೂ ಹೆಚ್ಚು  ಯಕ್ಷ ಪ್ರಸಂಗಗಳ ಆಡಿಯೋ ಕ್ಯಾಸೆಟ್ ಮುದ್ರಣ, 250 ಕ್ಕೂ ಹೆಚ್ಚು ವೀಡಿಯೋ ಚಿತ್ರೀಕರಣ, ದಾಖಲೀಕರಣದ ಮೂಲಕ ಯಕ್ಷ ಲೋಕದಲ್ಲಿ ದಾಖಲೆ ಮಾಡಿದವರು. ಪುರಂದರದಾಸ,ಕನಕದಾಸ,ಗುರು ಬಸವಣ್ಣ,ಚೆನ್ನಮಲ್ಲಿಕಾರ್ಜುನರ ಕೀರ್ತನೆಗಳು ಅಲ್ಲದೇ ರಾಷ್ಟ್ರಕವಿ ಕುವೆಂಪು, ದ.ರಾ.ಬೇಂದ್ರೆಯವರ ಅನೇಕ ಹಾಡುಗಳನ್ನು ಯಕ್ಷಗಾನ ಚೌಕಟ್ಟಿಗೆ ಒಗ್ಗುವಂತೆ ಹಲವು ಸಾಮಾಜಿಕ ಪ್ರಸಂಗಗಳಲ್ಲಿ ಭಾವಪೂರ್ಣವಾಗಿ ಬಳಸಿದವರು.



50 ವರ್ಷದ ಯಕ್ಷಲೋಕದ ಪಯದಣದಲ್ಲಿ 300 ಕ್ಕೂ ಹೆಚ್ಚು ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಪ್ರಸಂಗಗಳನ್ನು ನಿರ್ದೇಶಿಸಿ ಭಾಗವತಿಕೆ ಮಾಡಿದವರು. ಅಮೃತ ವರ್ಷಿಣಿ, ಸಿಂಧೂರ ಭಾಗ್ಯ, ರಕ್ತ ತಿಲಕ,ಶೂದ್ರ ತಪಸ್ವಿನಿ,ಚಾರು ಚಂದ್ರಿಕೆ, ಗಗನ ಗಾಮಿನಿ, ವಸಂತ ಸೇನೆ, ವಿಜಯ ಕೇಸರಿ ಹೀಗೇ ನಿರ್ದೇಶಿಸಿದ ಎಲ್ಲ ಪ್ರಸಂಗಗಳೂ ಯಶಸ್ವಿ ಪ್ರದರ್ಶನ ಕಂಡಿವೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top