ಸುರತ್ಕಲ್: “ಪ್ರತಿಯೊಬ್ಬ ಸೇವಾ ನಿರತ ಸ್ವಯಂ ಸೇವಕನು ಸಮಾಜವನ್ನು ಬೆಳಗುವ ಸೂರ್ಯನಿದ್ದಂತೆ. ರಾಷ್ಟ್ರೀಯ ಸೇವಾ ಯೋಜನೆಯು ನಮಗರಿವಿಲ್ಲದೆಯೇ ನಮ್ಮಲ್ಲಿರುವ ನಾಯಕನನ್ನು ಗುರುತಿಸುತ್ತದೆ” ಎಂದು ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ವೆಂಕಟ್ರಮಣ ಪೈಕಾ ನುಡಿದರು. ಅವರು ಗೋವಿಂದ ದಾಸ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯು ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತಾ ಸಪ್ತಾಹ ಹಾಗೂ ಹೊಸ ಸ್ವಯಂ ಸೇವಕರ ಪುನರ್ಬಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಪ್ರೊ. ಪಿ.ಕೃಷ್ಣಮೂರ್ತಿ ಅವರು ವಿದ್ಯಾರ್ಥಿಗಳ ಮಹತ್ತರ ಸಾಧನೆಗೆ ರಾಷ್ಟ್ರೀಯ ಸೇವಾ ಯೋಜನೆ ಸರಿಯಾದ ವೇದಿಕೆಯಾಗಿದ್ದು ಇದನ್ನು ವಿದ್ಯಾರ್ಥಿಗಳು ಮನಗಾಣಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಅಕ್ಷತಾ ವಿ., ರಾಷ್ಟ್ರೀಯ ಐಕ್ಯತಾ ಪ್ರಮಾಣವಚನವನ್ನು ಬೋಧಿಸಿದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಭಾಗ್ಯಲಕ್ಷ್ಮೀ, ಕಾರ್ಯದರ್ಶಿಗಳಾದ ಜಿತಿನ್, ಮನೀಶ್, ನಿರ್ಮಿಕಾ ಉಪಸ್ಥಿತರಿದ್ದರು.
ಭರತ್ ಸ್ವಾಗತಿಸಿ ಎನ್.ಎಸ್.ಎಸ್. ಕಾರ್ಯದರ್ಶಿ ಹಿತಾ ಉಮೇಶ್ ವಂದಿಸಿದರು. ಸ್ಮಿತಾ ಸಿ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ