ಸುರತ್ಕಲ್: ವಿದ್ಯಾರ್ಥಿಗಳು ಸಂವಿಧಾನದ ಬಗ್ಗೆ ಅರಿವು ಮೂಡಿಸಿಕೊಂಡಲ್ಲಿ ಭಾರತದ ಶ್ರೇಷ್ಠ ಪ್ರಜೆಗಳಾಗಿ ಮೂಡಿ ಬರಲು ಸಾಧ್ಯ. ಭಾರತದ ಸಂವಿಧಾನ ಭಾರತೀಯರಿಗೆ ಆಧಾರವಾಗಿದ್ದು ಸರ್ವ ಸಮಾನತೆಯ ಸರ್ವೋದಯದ ಬಾಳಿಗೆ ಬುನಾದಿಯಾಗಿದೆ ಎಂದು ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯ ಪ್ರೊ.ಪಿ.ಕೃಷ್ಣಮೂರ್ತಿ ನುಡಿದರು.
ಅವರು ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, ಮಾನವಿಕ ವಿಭಾಗ, ರಾಜ್ಯಶಾಸ್ತ್ರ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕ, ಚುನಾವಣಾ ಸಾಕ್ಷರತಾ ಕ್ಲಬ್ ಮತ್ತು ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಚುನಾವಣಾ ಸಾಕ್ಷರತಾ ಕ್ಲಬ್‌ಗಳು ಜಂಟಿಯಾಗಿ ಆಯೋಜಿಸಿದ್ದ “ಸಂವಿಧಾನ ದಿವಸ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಾದ ಸೌಪರ್ಣಿಕಾ, ತೃತೀಯ ಬಿ.ಎ., ಸ್ಮಿತಾ ದ್ವಿತೀಯ ಬಿ.ಎ. ಮತ್ತು ಮಂಜುಳಾ ಪ್ರಥಮ ಬಿ.ಎ. ಸಂವಿಧಾನದ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರು. ಉಪಪ್ರಾಚಾರ್ಯ ಪ್ರೊ. ರಮೇಶ್ ಭಟ್ ಎಸ್.ಜಿ., ಪ್ರಾಧ್ಯಾಪಕರುಗಳಾದ ದಯಾ ಸುವರ್ಣ, ರಶ್ಮಿ ಕಾಯರ್‌ಮಾರ್, ಎನ್.ಎಸ್.ಎಸ್. ಸಂಯೋಜನಾಧಿಕಾರಿ ಅಕ್ಷತಾ ವಿ. ಉಪಸ್ಥಿತರಿದ್ದರು.
ಮಾನವಿಕ ವಿಭಾಗದ ಮುಖ್ಯಸ್ಥ ಪ್ರೊ. ಹರೀಶ ಆಚಾರ್ಯ ಪಿ., ಸ್ವಾಗತಿಸಿ ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥೆ ಕ್ಯಾ.ಡಾ. ಸುಧಾ ಯು ವಂದಿಸಿದರು. ವಿದ್ಯಾರ್ಥಿನಿ ಶಶಿಕಲಾ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ