|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಾಧ್ಯಮ ಮಾಹಿತಿಗಷ್ಟೇ ಸೀಮಿತವಲ್ಲ; ಜ್ಞಾನ ವಾಹಕವೂ ಹೌದು: ಡಾ. ಸಿಂಧೂ ಮಂಜೇಶ್

ಮಾಧ್ಯಮ ಮಾಹಿತಿಗಷ್ಟೇ ಸೀಮಿತವಲ್ಲ; ಜ್ಞಾನ ವಾಹಕವೂ ಹೌದು: ಡಾ. ಸಿಂಧೂ ಮಂಜೇಶ್


ಮಂಗಳೂರು: ಸಮಾಜದಲ್ಲಿ ಸಂಭವಿಸುವ ಪ್ರತಿಯೊಂದು ಘಟನೆಯು ಜನರ ಮೇಲೆ ನೇರವಾಗಿ ಪ್ರಭಾವ ಬೀರುತ್ತವೆ. ಸುದ್ದಿ ಮಾಧ್ಯಮಗಳು ಕೇವಲ ಸುದ್ದಿಗಳನ್ನು ಉತ್ಪಾದಿಸುವುದಿಲ್ಲ; ಬದಲಾಗಿ ಮಾಹಿತಿಗಳನ್ನು ಪಸರಿಸುವ ಮೂಲಕ ಜ್ಞಾನದ ಹರಿವನ್ನು ಹೆಚ್ಚಿಸುತ್ತಿದೆ ಎಂದು ಡಾ. ಸಿಂಧೂ ಮಂಜೇಶ್ ಹೇಳಿದರು.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಪಿ.ಪಿ. ಗೋಮತಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್‌ ಮತ್ತು ವಿಶ್ವವಿದ್ಯಾನಿಲಯ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಇದರ ಜಂಟಿ ಆಶ್ರಯದಲ್ಲಿ ಭಾರತದಲ್ಲಿ ಸುದ್ದಿಮಾಧ್ಯಮ: ಧನಾತ್ಮಕ ವರದಿ ಕುರಿತಾಗಿ ವಿಶೇಷ ಮುನ್ಸೂಚನೆ ವಿಷಯದ ಕುರಿತು ವಾರ್ಷಿಕ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಲಾಗಿತ್ತು.


ಮಾಧ್ಯಮ ಕೇವಲ ಒಂದು ಪರಿಸರ ವಿಜ್ಞಾನವಲ್ಲ, ಬದಲಾಗಿ ಇದೊಂದು ಪರಿಸರ ವ್ಯವಸ್ಥೆಯಾಗಿದೆ. ಹಾಗಾಗಿ ಸುದಿ ಮಾಧ್ಯಮಗಳು ಸಮಾಜದಲ್ಲಿ ಜ್ಞಾನ ಪ್ರಸಾರದ ವಾಹಿನಿಗಳಾಗಿವೆ. ಈ ನಿಟ್ಟಿನಲ್ಲಿ ಸಮಾಜಕ್ಕೆ ಉತ್ತಮವಾದುದನ್ನು ಕೊಡುವ ಕಡೆಗೆ ಗಮನ ನೀಡಬೇಕಿದೆ. ಅಲ್ಲದೇ, ಸಾರ್ವಜನಿಕರು ಮಾಹಿತಿಯ ಮೂಲದ ಕುರಿತು ಪ್ರಶ್ನೆ ಕೇಳುವ ಮೂಲಕ ಕ್ರಿಯಾಶೀಲರಾಗಬೇಕಿದೆ. ವೀಕ್ಷಕರು ಕೇವಲ ಜಡ ವಸ್ತುಗಳಾಗದೇ ಯೋಚಿತ ಪ್ರಚಾರಗಳ ವಿರುದ್ಧ ತಮ್ಮ ಧ್ವನಿ ಏರಿಸಿಬೇಕಿದೆ ಎಂದರು.


ಇಂದು ಬೃಹತ್ ಉದ್ಯಮಗಳು ಸಣ್ಣ ಪ್ರಮಾಣದ ಉದ್ಯಮಗಳನ್ನು ತಮ್ಮ ಕೈವಶ ಮಾಡಿಕೊಳ್ಳುತ್ತಿರುವುದರ ಪರಿಣಾಮ ಮಾಧ್ಯಮ ಕ್ಷೇತ್ರದಲ್ಲಿ ಏಕಸ್ವಾಮ್ಯತೆ ಹೆಚ್ಚಾಗುತ್ತಿದೆ. ಇದರಿಂದ ವೀಕ್ಷಕರಿಗೆ ಯಾವುದೇ ಆಯ್ಕೆ ಇಲ್ಲದಂತಾಗುತ್ತಿದೆ. ಆ ಮೂಲಕ ಇಡೀ ಸಮಾಜವನ್ನು ಖಾಸಗೀಕರಣದತ್ತ ಹೊರಳಿಸುತ್ತಿದೆ. ಇದರಿಂದ ಪತ್ರಿಕಾ ಸ್ವಾತಂತ್ರ‍್ಯಕ್ಕೂ ಧಕ್ಕೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. 


ಮಾಧ್ಯಮಗಳು ಸಮಾಜಕ್ಕೆ ಜವಾಬ್ದಾರರಾಗಬೇಕು. ಆ ನಿಟ್ಟಿನಲ್ಲಿ ಸಾರ್ವಜನಿಕರು ಮಾತನಾಡಬೇಕಿದೆ. ಮಾಧ್ಯಮಗಳು ತಮ್ಮ ಆಯ್ಕೆಗೆ ತಕ್ಕಂತೆ ಸುದ್ದಿ ನೀಡುವ ಬದಲಾಗಿ ಜನರಿಗೆ ಬೇಕಾದ್ದನ್ನು ಕೇಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕಿದೆ. ಆ ಮೂಲಕ ಮಾಧ್ಯಮಗಳನ್ನು ಬಾಧ್ಯಸ್ಥರನ್ನಾಗಿ ಮಾಡಬೇಕಿದೆ. ಒಟ್ಟಾರೆಯಾಗಿ ಮಾಧ್ಯಮಗಳು ಕೇವಲ ಕೆಲವೇ ವ್ಯಕ್ತಿಗಳ ಕೈಗೊಂಬೆಯಾಗಿ ಇಡೀ ಸಮಾಜವನ್ನು ಆಪೋಷಣೆ ತೆಗೆದುಕೊಳ್ಳುವ ಮುನ್ನಾ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದೆ ಎಂದರು. 


ಇದೇ ವೇಳೆ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೊ. ಕೆ. ಆರ್. ಶಾನಿ ಉಪಸ್ಥಿತರಿದ್ದರು.   



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

0 Comments

Post a Comment

Post a Comment (0)

Previous Post Next Post