ಸುರತ್ಕಲ್ : ಪರಿಸರ ಸ್ನೇಹಿ ಸಣ್ಣ ಉದ್ಯಮಗಳನ್ನು ಆರಂಭಿಸುವುದರಿಂದ ಸ್ವ ಉದ್ಯೋಗದೊಂದಿಗೆ ಸಮಾಜದ ಅಭಿವೃದ್ಧಿ ಕಾರ್ಯಗಳನ್ನು ನಡೆಸಬಹುದಾಗಿದೆ. ನಿರುಪಯುಕ್ತ ಎನಿಸಬಹುದಾದ ವಸ್ತುಗಳನ್ನು ಅಚ್ಚುಕಟ್ಟಾಗಿ ಸಂಸ್ಕರಿಸಿ ಸೃಜನಶೀಲಾತ್ಮಕವಾಗಿ ನೂತನ ಉತ್ಪನ್ನಗಳಾಗಿ ರೂಪಿಸಬಹುದು ಎಂದು ಪಕ್ಷಿಕೆರೆಯ ಪೇಪರ್ ಸೀಡ್ಸ್ ಸಂಸ್ಥೆಯ ಸಂಸ್ಥಾಪಕ ನಿತಿನ ವಾಸ್ ನುಡಿದರು.
ಅವರು ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗ, ಉದ್ಯಮಶೀಲ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಸಂಘ ಹಾಗೂ ಉದ್ಯಮಶೀಲ ಅಭಿವೃದ್ಧಿ ಸಂಘದ ಚಟುವಟಿಕೆಗಳನ್ನು ಉದ್ಘಾಟಿಸಿ ಸಾಮಾಜಿಕ ಉದ್ಯಮಶೀಲತೆ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಪೇಪರ್ ಸೀಡ್ಸ್ ಸಂಸ್ಥೆಯ ಮಂಗಳೂರು ಗೊಂಬೆ ಹಾಗೂ 'ಎಸೆದರೆ ಸಸಿ ಹುಟ್ಟುವ ಮಾಸ್ಕ್' ಮೊದಲಾದವುಗಳು ವಿಶ್ವದ ಅನೇಕರಿಂದ ಪ್ರಶಂಸೆಗೆ ಪಾತ್ರವಾಗಿದೆ. ಪಕ್ಷಿಕೆರೆಯ ಪ್ರದೇಶದಲ್ಲಿ ಕೆರೆ ಅಭಿವೃದ್ಧಿಗೊಳಿಸಿ ಪಕ್ಷಿಗಳು ಬರುವಂತೆ ಮಾಡುವ ಪರಿಸರಾಭಿವೃದ್ಧಿಯ ಕಾರ್ಯ ನಡೆಯುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ.ಪಿ. ಕೃಷ್ಣಮೂರ್ತಿ ಮಾತನಾಡಿ ಗ್ರಾಮೀಣಾಭಿವೃದ್ಧಿಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕಾಗಿದೆ. ಸಾಮಾಜಿಕ ಕಾಳಜಿಯ ಉದ್ಯಮ ಸ್ಥಾಪನೆಗೆ ಹೆಚ್ಚಿನ ಅವಕಾಶಗಳು ಲಭ್ಯವಾಗುತ್ತಿವೆ ಎಂದರು.
ವಾಣಿಜ್ಯ ವಿಭಾಗದದ ಮುಖ್ಯಸ್ಥೆ ಡಾ. ಸೌಮ್ಯ ಪ್ರವೀಣ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಿಯಾ ಅತಿಥಿಗಳನ್ನು ಪರಿಚಯಿಸಿದರು. ಪಲ್ಲವಿ ಸ್ವಾಗತಿಸಿ ಸುಮಂತ್ ಶೆಣೈ ವಂದಿಸಿದರು. ಪೂರ್ವಿ ಕಾರ್ಯಕ್ರಮ ನಿರೂಪಿಸಿದರು.
ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಶ್ರೀದೇವಿ, ಉದ್ಯಮಶೀಲ ಸಂಘದ ಸಂಯೋಜಕಿ ಪುನೀತಾ ಆರ್., ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಸಂಘದ ಸಂಯೋಜಕರಾದ ಡಾ. ಭಾಗ್ಯಲಕ್ಷ್ಮಿ ಎಂ., ಶಿಲ್ಪಾರಾಣಿ ಕೆ., ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಗಣೇಶ ಆಚಾರ್ಯ, ಪ್ರಾಧ್ಯಾಪಕರಾದ ಧನ್ಯ ಕುಮಾರ್, ಪ್ರಕೃತಿ, ಪೇಪರ್ ಸೀಡ್ಸ್ ಸಂಸ್ಥೆಯ ರೀನಾ ಡಿ' ಸೋಜಾ ಉದ್ಯಮಶೀಲ ಸಂಘದ ಕಾರ್ಯದರ್ಶಿ ಪೃಥ್ವಿರಾಜ್ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ