ಬೆಳ್ತಂಗಡಿ: ಮುಂಡಾಜೆ ಪದವಿಪೂರ್ವ ಕಾಲೇಜಿನಲ್ಲಿ ರೋವರ್ಸ್ ರೇಂಜರ್ಸ್ ವಿಭಾಗದ ವತಿಯಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಇತಿಹಾಸ ಉಪನ್ಯಾಸಕಿ ಶ್ರೀಮತಿ ಗೀತಾ ವಹಿಸಿದ್ದರು. ಸಂಸ್ಥಾಪನಾ ದಿನದ ಮಹತ್ವನ್ನು ರೇಂಜರ್ ಕೀರ್ತನಾ ತಿಳಿಸಿದರು.
ಬಳಿಕ ಕಾಲೇಜಿನ ಹಿರಿಯ ರೋವರ್ ಮತ್ತು ಪ್ರಸ್ತುತ ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆಯ ಸೀನಿಯರ್ ರೋವರ್ ಮೇಟ್ ಕೀರ್ತಿ ಇವರು ನಿಪುಣ್ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ರೇಂಜರ್ ಲೀಡರ್ ಶ್ರೀಮತಿ ವಸಂತಿ, ರೋವರ್ ಸ್ಕೌಟ್ ಲೀಡರ್ ಕೃಷ್ಣ ಕಿರಣ್ ಕೆ ಉಪಸ್ಥಿತರಿದ್ದರು. ರೇಂಜರ್ ಯಶಸ್ವಿನಿ ಸ್ವಾಗತಿಸಿ, ವಿಂಧ್ಯಾ ಕಾರ್ಯಕ್ರಮವನ್ನು ನಿರೂಪಿಸಿ, ರೋವರ್ ಸುದರ್ಶನ್ ಸರ್ವರನ್ನೂ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ