ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜು, ಉಜಿರೆಯ ಸಸ್ಯಶಾಸ್ತ್ರ ಪ್ರಯೋಗಾಲಯದಲ್ಲಿ ರಾಷ್ಟೀಯ ಸೇವಾ ಯೋಜನೆ, ಯೂತ್ ರೆಡ್ ಕ್ರಾಸ್ ಹಾಗೂ ರೋವರ್ಸ್ ಆಂಡ್ ರೇಂಜರ್ಸ್ ಘಟಕಗಳು ಜಂಟಿಯಾಗಿ ಮಂಗಳೂರಿನ ಕೆ.ಎಂ.ಸಿ. ಬ್ಲಡ್ ಬ್ಯಾಂಕ್, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಲಯನ್ ಕ್ಲಬ್ ಬೆಳ್ತಂಗಡಿಯ ಇವುಗಳ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಉದ್ಘಾಟಕರಾಗಿ ಆಗಮಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರಾದ ಶ್ರೀ ಎಂ. ಜನಾರ್ದನ್ ರವರು ರಕ್ತದಾನದ ಮಹತ್ವದ ಬಗ್ಗೆ ಮಾತನಾಡಿ, "ರಕ್ತದಾನ ಮಾಡುವುದರಿಂದ ರಕ್ತದ ಅವಶ್ಯಕತೆ ಇರುವವರಿಗು ಉಪಯೋಗವಾಗುತ್ತದೆ, ರಕ್ತದಾನ ಮಾಡಿದವರಿಗೂ ಉಪಯೋಗವಾಗುತ್ತದೆ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ನಾಲ್ವರಿಗೆ ಜೀವದಾನ ಮಾಡಿದ ಹಾಗೆ.ರಕ್ತದಾನ ಅನ್ನೋದು ಜನಹಿತ ಕಾರ್ಯಕ್ರಮವಾಗಿದ್ದು,ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು." ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲಯನ್ ಕ್ಲಬ್, ಬೆಳ್ತಂಗಡಿಯ ಅಧ್ಯಕ್ಷ ಲಯನ್ ಉಮೇಶ್ ಶೆಟ್ಟಿರವರು ಮಾತನಾಡಿ, "ರಕ್ತದಾನದಿಂದ ಹಲವಾರು ಜನರಿಗೆ ಉಪಯೋಗ ಆಗುತ್ತದೆ. ಸೇವೆ ಮಾಡುವುದ ಕಲಿಬೇಕು ಅದು ದೇವರು ಮೆಚ್ಚುವ ಕೆಲಸ" ಎಂದರು.
ಎಸ್.ಡಿ.ಎಂ ಕಾಲೇಜು, ಉಜಿರೆಯ ಪ್ರಾಂಶುಪಾಲರಾದ ಡಾ.ಕುಮಾರ್ ಹೆಗ್ಡೆ ರವರು ಅಧ್ಯಕ್ಷಿಯ ನುಡಿಗಳನಾಡಿದರು" ರಕ್ತದಾನ ಶ್ರೇಷ್ಟದಾನ. ಜೀವಂತಾಗಿರುವಾಗ ಮಾಡಬಹುದಾದ ಶ್ರೇಷ್ಟ ದಾನವೆಂದರೆ ಅದು ರಕ್ತದಾನ. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸರಕ್ತ ಕಣಗಳು ಉತ್ಪಾದನೆಯಾಗುತ್ತವೆ, ಇದರಿಂದ ನಮ್ಮಲಿ ಚೈತನ್ಯ ಹೆಚ್ಚುತ್ತದೆ.ರಕ್ತದಾನ ಹಾಗೂ ಅಗಾಂಗಗಳ ದಾನ ಮಾಡುವುದರಿಂದ ನಮ್ಮ ಅಸ್ತಿತ್ವವನ್ನು ಇನ್ನೊಬ್ಬರಲ್ಲಿ ಕಾಣಬಹುದು. ಜನ ಸೇವೆಯೆ ಜನಾರ್ದನ ಸೇವೆ, ಸಮಾಜಮುಖಿ ಕೆಲಸಗಳನ್ನ ಮಾಡುತ್ತಾ ಸಂತೃಪ್ತಿ ಪಡಬೇಕು" ಎಂದರು.
ಶಿಬಿರಕ್ಕೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 225 ಯೂನಿಟ್ ನಷ್ಟು ರಕ್ತವನ್ನು ದಾನವಾಗಿದೆ. ಎಲ್ಲಾ ದಾನಿಗಳಿಗೂ ಶ್ಲಾಘನೆ ಪತ್ರ ವಿತರಿಸಲಾಯಿತು.
ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ,ಬ್ಲಡ್ ಬ್ಯಾಂಕ್ ಆಯೋಜಕರಾದ ಡಾ. ಪೃಥ್ವೀಶ್ ಕೆ.ಎಂ.ಸಿ, ಶಿತಿಕಂಠ ಭಟ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ, ಎನ್. ಎಸ್.ಎಸ್ ನ ಯೋಜನಾಧಿಕಾರಿಗಳಾದ ಪ್ರೊ. ದೀಪಾ ಆರ್.ಪಿ, ರೆಡ್ ಕ್ರಾಸ್ ನ ಸಂಯೋಜಕರಾದ ಮಂಜುಶ್ರೀ, ವೈದ್ಯಕೀಯ ಸಿಬಂದಿ, ಸ್ವಯಂಸೇವಕರು ಉಪಸ್ಥಿತರಿದ್ದರು.
ಯೋಜನಾಧಿಕಾರಿಗಳಾದ ಡಾ.ಮಹೇಶ್ ಕುಮಾರ್ ಶೆಟ್ಟಿ ಹೆಚ್ ರವರು ಪ್ರಸ್ತಾವಿಕನುಡಿಗಳನ್ನಾಡಿ, ಸ್ವಾಗತಿಸಿದರು. ಸ್ವಯಂ ಸೇವಕಿ ವೀಕ್ಷ ವಂದಿಸಿ, ಸ್ವಯಂಸೇವಕಿ ವಿನುತಾ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ