ಆನ್‍ಲೈನ್ ಖರೀದಿಗಳಲ್ಲಿ ಮೋಸದ ಸಂಭವ ಹೆಚ್ಚು: ಡಾ. ಅಬೂಬಕ್ಕರ್ ಸಿದ್ದೀಕ್

Upayuktha
0



ಸುರತ್ಕಲ್: ವೇಗವಾಗಿ ಜಾಗತೀಕರಣಗೊಳ್ಳುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಗ್ರಾಹಕರು ಉತ್ಪನ್ನಗಳನ್ನು ಖರೀದಿಸುವಾಗ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಬೇಕು. ಆನ್‍ಲೈನ್ ಖರೀದಿಗಳಲ್ಲಿ ಮೋಸಗೊಳ್ಳುವ ಸಂಭವಗಳು ಹೆಚ್ಚಾಗುತ್ತಿದ್ದು ಗ್ರಾಹಕರು ಇವುಗಳ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು  ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ  ಸ್ನಾತಕೋತ್ತರ ವಾಣಿಜ್ಯ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಮತ್ತು ಸಂಯೋಜಕರಾದ ಡಾ. ಅಬೂಬಕ್ಕರ್ ಸಿದ್ದೀಕ್ ನುಡಿದರು. 




ಅವರು ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿಕೋಶ, ಸ್ನಾತಕೋತ್ತರ ವಾಣಿಜ್ಯ ಅಧ್ಯಯನ ಕೇಂದ್ರ, ವಾಣಿಜ್ಯ ಮತ್ತು ವ್ಯವಹಾರಿಕ ಆಡಳಿತ ವಿಭಾಗ ಹಾಗೂ ಗ್ರಾಹಕರ ವೇದಿಕೆಗಳ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. 



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ಪಿ. ಕೃಷ್ಣಮೂರ್ತಿ ಮಾತನಾಡಿ ಯುವಪೀಳಿಗೆಯು ವಸ್ತುಗಳ ವಿನಿಮಯದ ನಿಜವಾದ ಚಿತ್ರಣವನ್ನು ಬಿತ್ತರಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.




ಗೌರವ ಅತಿಥಿಯಾಗಿ ಉಪಪ್ರಾಚಾರ್ಯ ಪ್ರೊ. ರಮೇಶ್ ಭಟ್ ಎಸ್.ಜಿ. ಮಾತನಾಡಿ, ಈಗಿನ ಒತ್ತಡದ ಜಂಜಾಟದಲ್ಲಿ ಗ್ರಾಹಕರನ್ನು ಲೂಟಿ ಮಾಡುವ ವ್ಯಾಪಾರಸ್ಥರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ ಎಂದರು.




ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಡಾ. ಗಣೇಶ ಆಚಾರ್ಯ ಬಿ. ಅತಿಥಿಗಳನ್ನು ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.




ಪೂರ್ವಿ ಸ್ವಾಗತಿಸಿ, ಶ್ರೇಯ ವಂದಿಸಿದರು. ವೈಭವಿ ಕಾರ್ಯಕ್ರಮ ನಿರೂಪಿಸಿದರು. ಹಿಂದೂ ವಿದ್ಯಾದಾಯಿನಿ ಸಂಘದ ಆಡಳಿತ ಅಧಿಕಾರಿ ಮೃದುಲಾ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಸೌಮ್ಯ ಪ್ರವೀಣ್, ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಶ್ರೀದೇವಿ, ಗ್ರಾಹಕರ ವೇದಿಕೆಯ ಸಂಯೋಜಕಿ ದಯಾ ಸುವರ್ಣ, ಉಪನ್ಯಾಸಕಿಯರಾದ ಹರ್ಷರಾಣಿ, ಭಾರತಿ, ದೀಕ್ಷಾ, ಪುನೀತಾ, ಶಿಲ್ಪರಾಣಿ ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 




Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top