ಉಡುಪಿ: ಭಾರತ ವಿಕಾಸ ಪರಿಷದ್ ದಕ್ಷಿಣ ಪ್ರಾಂತ, ಬೆಂಗಳೂರು ಇವರು ರಾಮನಗರ ಜಿಲ್ಲೆಯ ಚೆನ್ನಪಟ್ಟಣ ನಗರದ ಶತಮಾನೋತ್ಸವ ಭವನ ದಲ್ಲಿ 18/11/23 ರಂದು ನಡೆಸಿದ ರಾಜ್ಯ (ಪ್ರಾಂತ) ಮಟ್ಟದ "ಭಾರತ್ ಕೋ ಜಾನೋ 2023" ಸ್ಪರ್ಧಾತ್ಮಕ ರಸಪ್ರಶ್ನೆಯ ಜೂನಿಯರ್ ವಿಭಾಗದ ಸ್ಪರ್ಧೆಯಲ್ಲಿ ಉಡುಪಿಯಲ್ಲಿನ ಟಿ ಎ ಪೈ ಪ್ರೌಢ ಶಾಲೆಯ ದೀಪೇಶ್ ದೀಪಕ್ ಶೆಣೈ ನೇತೃತ್ವದ ಶ್ರೀಪಾದ ಒಡಗೂಡಿದ ತಂಡವು ವಿಜೇತರಾಗಿ ರಾಜ್ಯ (ಪ್ರಾಂತ್ಯ) ಕ್ಕೆ ಪ್ರಥಮ ಸ್ಥಾನ ಮುಡಿಗೇರಿಸಿಕೊಂಡಿದೆ.
ಶಾಲೆಯ ಮುಖ್ಯೋಪಾಧ್ಯಾಯಿನಿ, ಆಡಳಿತ ಮಂಡಳಿ, ಶಿಕ್ಷಕ ವೃಂದ, ಶಿಕ್ಷಕೇತರ ವೃಂದ, ರಕ್ಷಕ-ಶಿಕ್ಷಕ ವೃಂದವು ವಿದ್ಯಾರ್ಥಿಗಳ ಈ ಮಹೋನ್ನತ ಸಾಧನೆಗೆ ಅತೀವ ಹರ್ಷ ವ್ಯಕ್ತಪಡಿಸಿ ಶುಭಾಶಯ ಕೋರಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ