ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕದ ವತಿಯಿಂದ ಧನ್ವಂತರಿ ಜಯಂತಿಯ ಸಂದರ್ಭದಲ್ಲಿ ವೈದ್ಯಕೀಯ ಸಾಹಿತ್ಯದಲ್ಲಿ ವಿಶೇಷ ಸಾಧನೆ ಮಾಡಿದ ಡಾ ಮುರಲಿ ಮೋಹನ್ ಚೂಂತಾರು ಅವರನ್ನು ಹಿರಿಯ ವೈದ್ಯ ಡಾ ಚಕ್ರಪಾಣಿ ಅವರ ಉಪಸ್ಥಿತಿಯಲ್ಲಿ ಶುಕ್ರವಾರ ಶ್ರೀ ಭಾರತೀ ಕಾಲೇಜು ನಂತೂರು ಇದರ ಶಂಕರಶ್ರೀ ಸಭಾ ಭವನದಲ್ಲಿ ಹಿರಿಯ ವಿಮರ್ಶಕ ಶ್ರೀ ಶಿಕಾರಿಪುರ ಕ್ರಷ್ಣ ಮೂರ್ತಿ ಅವರು ಶಾಲು ಹೊದಿಸಿ ಪೇಟ ತೊಡಿಸಿ ಹಾರಿ ಹಾಕಿ ಫಲ ಪುಷ್ಪ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಕ ಸಾ ಪ ಇದರ ಗೌರವ ಕಾರ್ಯದರ್ಶಿ ಶ್ರೀ ಗಣೇಶ ಪ್ರಸಾದ್ ಜಿ, ಕೋಶಾಧಿಕಾರಿ ಶ್ರೀ ಸುಬ್ರಾಯ ಭಟ್, ಶ್ರೀ ಭಾರತೀ ಕಾಲೇಜು ಇದರ ಖಜಾಂಚಿ ಶ್ರೀ ಉದಯ ಶಂಕರ್ ಭಟ್, ಹವ್ಯಕ ಸಭಾ ಇದರ ಅಧ್ಯಕ್ಷರಾದ ಶ್ರೀ ಮತಿ ಗೀತಾಗಣೇಶ್,ಡಾ ಕಿಶನ್ ರಾವ್ ಬಾಳಿಲ, ಲಯನ್ ಶ್ರೀ ಸೀನ ಪೂಜಾರಿ, ಶ್ರೀ ರಾಮಕೃಷ್ಣ ಭಟ್ ಬೆಳಾಲು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ