ಮಂಗಳೂರು: ಸಿಟಿಜನ್ಸ್ ಕೌನ್ಸಿಲ್ ಮಂಗಳೂರು ಚಾಪ್ಟರ್ ಆಯೋಜನೆ ಮಾಡಿದಂತಹ 'ಇಂಡಿಯಾ ಅನ್ಲೀಶ್ಡ್: ಡೆಕೇಡ್ ಒಫ್ ಟ್ರಾನ್ಸ್ ಫಾರ್ಮೇಷನ್' ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಭಾಗವಹಿಸಿದರು.
ಜನ್ ಧನ್ ಖಾತೆಯ ಮೂಲಕ ಇಂದು ಎಲ್ಲಾ ಸರಕಾರಿ ಯೋಜನೆಗಳು ಎಲ್ಲಿಯೂ ಸೋರಿಕೆಯಿಲ್ಲದೆ ಜನರನ್ನು ತಲುಪುತ್ತಾ ಬರುತ್ತಾ ಇದೆ. 40 ಶೇಖಡಕ್ಕಿಂತ ಕಡಿಮೆಯಿದ್ದ ಶೌಚಾಲಯ ವ್ಯವಸ್ಥೆ, ಇಂದು ಶೇಖಡ ನೂರರಷ್ಟು ಜನರಿಗೆ ಶೌಚಾಲಯಗಳು ತಲುಪಿದೆ. ಸಾಂಪ್ರದಾಯಿಕ ರೀತಿಯಲ್ಲೇ ಹೆಚ್ಚು ಅಡುಗೆ ಮಾಡುತ್ತಿದ್ದ ನಮ್ಮ ತಾಯಿಯಂದರಿಗೆ ಇಂದು ಹತ್ತು ಕೋಟಿಗಿಂತ ಹೆಚ್ಚು ಮನೆಗಳಿಗೆ ಉಚಿತ ಗ್ಯಾಸ್ ನೀಡಲಾಗಿದೆ. ಮಹಿಳಾ ಮೀಸಲಾತಿಯಿಂದ ಹಿಡಿದು ಬೇಟಿ ಬಚಾವ್ ಯೋಜನೆಗಳವರೆಗೆ, ಇವುಗಳಿಂದ ಕಳೆದ ದಶಕ ಮಹಿಳಾ ಸಶಕ್ತೀಕರಣ ದಶಕವಾಗಿ ಪರಿಣಮಿಸಿದೆ. ಇಂತಹ ಕಷ್ಟದ ಸನ್ನಿವೇಶದಲ್ಲೂ ಭಾರತ ಜಗತ್ತಿನ 5ನೇ ದೊಡ್ಡದಾದ ಆರ್ಥಿಕತೆಯಾಗಿ ಬೆಳೆದಿದೆ. ಗುಲಾಮಗಿರಿಯ ಮಾನಸಿಕತೆಯಿಂದ ನಿಜವಾಗಿ ನಾವು ಹೊರ ಬಂದದ್ದೇ ಇತ್ತೀಚೆಗೆ. ಇದುವೇ ಅತ್ಯಂತ ದೊಡ್ಡ ಪರಿವರ್ತನೆಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಸಿಟಿಜನ್ಸ್ ಕೌನ್ಸಿಲಿನ ಉಪಾಧ್ಯಕ್ಷೆಯಾದ ಶ್ರೀಮತಿ ರಮಾ ಸೊರಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಭಿಜಿತ್ ಹೆಗ್ಡೆ ಧನ್ಯವಾದ ಸಮಪರ್ಪಿಸಿದರು. ಶ್ರೀಮತಿ ಅಕ್ಷತಾ ಶೆಣೈ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ