ಸುವರ್ಣ ಕುಮಾರಿ ಹಾಗೂ ಮಧೂರು ಮೋಹನ ಕಲ್ಲೂರಾಯ ಇವರ ಮಗನಾಗಿ 02.02.1996ರಂದು ರಾಮಪ್ರಕಾಶ ಕಲ್ಲೂರಾಯ ಮಧೂರು ಅವರ ಜನನ. M-tech in mechanical engineering ಇವರ ವಿದ್ಯಾಭ್ಯಾಸ. ಮನೆಯ ವಾತಾವರಣ, ಚಿಕ್ಕಪ್ಪ, ದೊಡ್ಡಪ್ಪ, ಅಣ್ಣಂದಿರು ಹಾಗೂ ಹಿಮ್ಮೇಳದ ಮೇಲಿನ ಆಸಕ್ತಿ ಯಕ್ಷಗಾನ ಚೆಂಡೆ ಹಾಗೂ ಮದ್ದಳೆ ಕಲಿಯಲು ಪ್ರೇರಣೆಯಾಯಿತು.
ಯಕ್ಷಗಾನದ ಚೆಂಡೆ ಮದ್ದಲೆ ಗುರುಗಳು:- ಮುಂಡೃಪ್ಪಾಡಿ ಶ್ರೀಧರ್ ರಾವ್.
ಮೋಹನ ಬೈಪಡಿತ್ತಾಯ.
ಚಂದ್ರ ಶೇಖರ್ ಆಚಾರ್ಯ ಗುರುವಾಯನಕೆರೆ.
ಕೃಷ್ಣ ಪ್ರಕಾಶ ಉಳಿತ್ತಾಯ.
ಕನ್ನಡಿಕಟ್ಟೆ, ಬಲಿಪರು, ಪ್ರದೀಪ್ ಕುಮಾರ್ ಗಟ್ಟಿ, ಹೊಳ್ಳ, ತಲಪಾಡಿ ಆಳ್ವ, ಅಮ್ಮಣ್ಣಾಯ, ಗಿರೀಶ್ ಕಕ್ಕೆಪದವು, ಕಾವ್ಯಶ್ರೀ ನೆಚ್ಚಿನ ಭಾಗವತರು.
ಶಂಕರನಾರಾಯಣ ಪದ್ಯಾಣ, ದೇಲಂತಮಜಲು ಸುಬ್ರಮಣ್ಯ ಭಟ್ , ಮಣಿಮುಂಡ ಸುಬ್ರಮಣ್ಯ ಶಾಸ್ತ್ರಿ, ಕೃಷ್ಣ ಪ್ರಕಾಶ ಉಳಿತ್ತಾಯ, ಚೈತನ್ಯ ಪದ್ಯಾಣ ನೆಚ್ಚಿನ ಚೆಂಡೆ ಹಾಗೂ ಮದ್ದಲೆ ವಾದಕರು.
ದೇವಿ ಮಹಾತ್ಮೆ, ದುಶ್ಯಾಸನ ವಧೆ, ಸುಧಾಮ, ಇಂದ್ರಜಿತು ಎಲ್ಲಾ ಪುರಾಣ ಪ್ರಸಂಗಗಳು ನೆಚ್ಚಿನ ಪ್ರಸಂಗಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನ ಒಳ್ಳೆಯ ರೀತಿಯಲ್ಲಿ ವಿಶ್ವ ವ್ಯಾಪಕ ಆಗ್ತಾ ಇರುವುದರಿಂದ ಒಳ್ಳೆಯ ಬೆಳವಣಿಗೆ.
ಒಳ್ಳೆಯ ಪ್ರೇಕ್ಷಕರು, ವ್ಯಕ್ತಿ ವಿಮರ್ಶೆಗಿಂತ ಸಮಷ್ಟಿ ವಿಮರ್ಶೆ ಮಾಡುವುದು ಒಳ್ಳೆದು. ಈಗಿನ ಕಲಾವಿದರಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡು ಮುಂದುವರೆಯುವವರು ತೀರ ಕಡಿಮೆ, ಅ ಪರಿಸ್ಥಿತಿಗೆ ತಂದದ್ದೆ ಪ್ರೇಕ್ಷಕರು, ವೇಷಧಾರಿಗಳು ಯಾರನ್ನೋ ಅನುಕರಣೆ ಮಾಡಿ ಪ್ರದರ್ಶನ ನೀಡ್ತಾರೆ ಅದು ವಾಸ್ತವದಲ್ಲಿ ಸರಿಯಾ ತಪ್ಪಾ ಎಂದು ಹಿರಿಯರಲ್ಲಿ ಕೇಳಿಕೊಳ್ಳುವುದಿಲ್ಲ, ಕೇಳಿದ್ರು ಸರಿ ಮಾಡಿಕೊಳ್ಳುವುದಿಲ್ಲ, ಕೆಲವರು ಅವರ ಪರವಾಗಿ ಮಾತಾಡ್ತಾರೆ ಮತ್ತೆ ವಿಮರ್ಶೆ ಮಾಡುವುದು ಅವರೇ. ಹಾಗಾಗಿ ವಿಮರ್ಶೆ ಮಾಡುವವರು ವಿಮರ್ಶೆ ಮಾಡುವ ವ್ಯಕ್ತಿಗಿಂತ ಹೆಚ್ಚು ತಿಳಿದು ವಿಮರ್ಶೆ ಮಾಡಿದರೆ ಆ ಕಲಾವಿದ ನಿಜವಾಗಿಯು ಬದಲಾಗುತ್ತಾನೆ. ಯಕ್ಷಗಾನಕ್ಕೆ ಒಳ್ಳೆಯ ಆಯಾಮ ದೊರಕುತ್ತದೆ, ಇಲ್ಲದಿದ್ದರೆ ನಿಜವಾದ ಪರಂಪರೆ ಯಾವುದು ಅನ್ನುವುದು ಬದಲಾಗಿಹೋಗ್ತದೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಪುರಾಣದಲ್ಲಿ ಅದೆಷ್ಟೋ ಪ್ರಸಂಗಗಳ ಬಗ್ಗೆ ಯಾರಿಗೂ ತಿಳಿದಿಲ್ಲ. ಅಂತಹ ಪ್ರಸಂಗಗಳು ರಂಗದಲ್ಲಿ ಪ್ರದರ್ಶನ ಆಗಬೇಕು ಅನ್ನುವುದು ನನ್ನ ಆಸೆ. ಅದಕ್ಕೆ ಹೆಚ್ಚಿನ ಆಸಕ್ತಿ ನೀಡಬೇಕು.
ಕೊಲ್ಲಂಗಾನ , ಚೀರುಂಭ, ಭಗವತಿ, ಕಟೀಲು, ಮತ್ತೆ ಹವ್ಯಾಸಿಯಾಗಿ ಸುಂಕದಕಟ್ಟೆ, ಬಾಚಕೆರೆ ಮೇಳದಲ್ಲಿ ತಿರುಗಾಟ ಮಾಡಿದ ಅನುಭವ ಹಾಗೂ 12 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸೇವೆಯನ್ನು ಮಾಡುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
-ಶ್ರವಣ್ ಕಾರಂತ್ ಕೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ