ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಶ್ರಮದಾನ

Upayuktha
0




ಬದಿಯಡ್ಕ: ಕುಂಬಳೆ ಸೀಮೆಯ 450ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯಗಳು ವೇಗ ಪಡೆದುಕೊಂಡಿದ್ದು, ಊರಿನ ಯುವ ಕಾರ್ಯಕರ್ತರು ಪ್ರತಿದಿನ ಶ್ರಮದಾನದ ಮೂಲಕ ನಿರ್ಮಾಣ ಕಾರ್ಯಗಳಿಗೆ ನೆರವಾಗುತ್ತಿದ್ದಾರೆ. ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶ್ರೀಮದ್ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಾದದೊಂದಿಗೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ವಿವಿಧ ಸಮಿತಿಗಳನ್ನು ರಚಿಸಿ ಕಾರ್ಯೋನ್ಮುಖಗೊಳಿಸಲಾಗಿದೆ.


ಶ್ರೀಮಠದ ಅಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷರು ಹಾಗೂ ನಿವೃತ್ತ ಅಧ್ಯಾಪಕರಾದ ವಿ.ಬಿ. ಕುಳಮರ್ವ ಅವರ ಮಾರ್ಗದರ್ಶನದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ. ಶ್ರಮದಾನದಲ್ಲಿ ತೊಡಗಿರುವ ಯುವ ಕಾರ್ಯಕರ್ತರಿಗೆ ಊಟೋಪಚಾರದ ವ್ಯವಸ್ಥೆಗೆ ಊರ ಮಹನೀಯರು ಪ್ರಾಯೋಜಕತ್ವ ವಹಿಸುತ್ತಿದ್ದಾರೆ.


ಪ್ರತಿದಿನ ಸಂಜೆ 5 ಗಂಟೆಯಿಂದ ಶ್ರಮದಾನ ನಡೆಯುತ್ತಿದೆ. ಶಿವ ಮತ್ತು ವಿಷ್ಣುವಿನ ಏಕೀಕೃತ ಸಾನಿಧ್ಯವಿರುವ ಶಂಕರನಾರಾಯಣ ದೇವಸ್ಥಾನವು ಬಹಳ ಅಪರೂಪದ ಕ್ಷೇತ್ರವಾಗಿದೆ. 


ಹಿನ್ನೆಲೆ:

ಕಾಸರಗೋಡು ಜಿಲ್ಲೆಯ ನೀರ್ಚಾಲ್ ಗ್ರಾಮದ ಕುಂಟಿಕಾನ ಪ್ರದೇಶದ ನೈಸರ್ಗಿಕ ಮಡಿಲಿನಲ್ಲಿ ಶ್ರೀ ಕುಂಟಿಕಾನ ಮಠವೆಂಬ ಕ್ಷೇತ್ರವು ಒಂದು ಧಾರ್ಮಿಕ, ಸಾಂಸ್ಕೃತಿಕ ಕೇಂದ್ರವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಈ ದೇವಾಲಯವು ಕುಂಟಿಕಾನ ಮಠದ ಹಿರಿಯ, ಮಹಾತಪಸ್ವಿ ಸಾಧಕರಿಂದ ಸ್ಥಾಪನೆಯಾಯಿತೆಂದು ತಿಳಿದು ಬರುತ್ತಿದೆ. ಇಲ್ಲಿ ಶ್ರೀ ಶಂಕರನಾರಾಯಣ, ಶ್ರೀ ಅನ್ನಪೂರ್ಣೇಶ್ವರಿ, ಶ್ರೀ ಉಳ್ಳಾಕ್ಲು, ಶ್ರೀ ಧೂಮಾವತಿ, ಶ್ರೀ ರಕ್ತೇಶ್ವರಿ ಮೊದಲಾದ ದಿವ್ಯ ಶಕ್ತಿಗಳನ್ನು ಆರಾಧಿಸಿಕೊಂಡು ಬರಲಾಗುತ್ತಿದೆ. ಸುಮಾರು 450 ವರ್ಷಗಳ ಇತಿಹಾಸವಿರುವ ಈ ದೇವಸ್ಥಾನದಲ್ಲಿ ಇಂದಿನ ವರೆಗೂ ನಿತ್ಯ ಮೂರುಹೊತ್ತು ಪೂಜೆ, ಭೂತಕೋಲಗಳು, ಉತ್ಸವಾದಿಗಳು ನಿರಂತರವಾಗಿ ನಡೆಯುತ್ತಾ ಬಂದಿವೆ.


ಶ್ರೀ ರಾಮಚಂದ್ರಾಪುರ ಮಠದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ಪೂರ್ಣನುಗ್ರಹ ದೊಂದಿಗೆ ದೈವಜ್ಞರ ಮಾರ್ಗದರ್ಶನದಂತೆ, ಈ ಕ್ಷೇತ್ರದ ತಂತ್ರಿವರ್ಯರಾದ ದೇಲಂಪಾಡಿ ಶ್ರೀ ಗಣೇಶ ತಂತ್ರಿಗಳ ನೇತೃತ್ವದಲ್ಲಿ ದೇವಸ್ಥಾನದ ವಾಸ್ತುಶಿಲ್ಪಿಯವರ ನಿರ್ದೇಶನದಲ್ಲಿ ಈ ಎಲ್ಲಾ ಕಾಮಗಾರಿಗಳು ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯು, ಕುಂಟಿಕಾನ ಮಠದ ಕುಟುಂಬಸ್ಥರು, ಊರ ಪರವೂರ ಭಕ್ತ ಜನರು ಹಾಗೂ ಕೇರಳ ಧಾರ್ಮಿಕ ದತ್ತಿಯ ಸಹಯೋಗದೊಂದಿಗೆ ನಡೆಸುತ್ತಿದೆ. ಇದುವರೆಗೆ ಸುಮಾರು 1 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳು ನಡೆದಿರುತ್ತದೆ. ಇನ್ನೂ 1 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳು ಆಗಬೇಕಿದ್ದು, ಭಕ್ತ ಬಾಂಧವರ ಉದಾರ ದೇಣಿಗೆಯ ಸಹಕಾರವನ್ನು ನಿರೀಕ್ಷಿಸಲಾಗುತ್ತಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top