ಕುಷ್ಠ ರೋಗಿಗಳ ಸೇವಕನಿಗೆ ದೊಡ್ಡಮ್ಮ ದೇವಿ ರಾಷ್ಟ್ರೀಯ ಪ್ರಶಸ್ತಿ

Upayuktha
0

  • ಕಲಬುರಗಿಯ ಆಟೋ ಚಾಲಕನಿಗೆ ಅರಸಿಬಂದ ಗೌರವ
  • ಸೌಂದರ್ಯ ಲಹರಿ ಉಪಾಸಕಿ ಕಾಮಾಕ್ಷಮ್ಮಗೆ ಶ್ರೀ ಲಲಿತಾ ಪುರಸ್ಕಾರ
  • ದೊಡ್ಡಮ್ಮ ದೇವಿ ದೇವಸ್ಥಾನ ಟ್ರಸ್ಟ್ ಘೋಷಣೆ
  • ದೇವಿ ಉಪಾಸಕ ಸಿದ್ದಪ್ಪಾಜಿ ನೇತೃತ್ವದಲ್ಲಿ ಪ್ರಶಸ್ತಿ ಪ್ರದಾನ 



ಶಿವಮೊಗ್ಗ: ನಗರದ ಸೋಮಿನಕೊಪ್ಪ ಕೆಎಚ್‌ಬಿ ಪ್ರೆಸ್ ಕಾಲನಿಯ ದೊಡ್ಡಮ್ಮ ದೇವಿ ದೇವಸ್ಥಾನದ ಅನುಗ್ರಹ ರಾಷ್ಟ್ರೀಯ ಪುರಸ್ಕಾರಕ್ಕೆ ಕಲಬುರಗಿಯ ಕುಷ್ಠ ರೋಗಿಗಳ ಆಶಾಕಿರಣ, ಆಟೋ ಚಾಲಕ ಹಣಮಂತ ದೇವನೂರ ಅವರನ್ನು ಆಯ್ಕೆ ಮಾಡಿದ್ದು ಅ.24ರಂದು ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪುರಸ್ಕಾರ ಆಯ್ಕೆ ಸಮಿತಿ ಸಂಚಾಲಕ ಎಂ.ಎನ್.ಸುಂದರರಾಜ್ ತಿಳಿಸಿದರು.

ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ದೊಡ್ಡಮ್ಮ ಚಾರಿಟೇಬಲ್ ಟ್ರಸ್ಟ್‌ನಿಂದ ದೇವಿಯ ಹೆಸರಲ್ಲಿ ರಾಷ್ಟ್ರೀಯ ಪುರಸ್ಕಾರ ನೀಡಲಾಗುತ್ತಿದೆ. 24ರ ಬೆಳಗ್ಗೆ 10ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಮಾಜದಲ್ಲಿ ಬಡವರು, ದೀನ ದಲಿತರು, ಅಂಗವಿಕಲರು, ರೋಗಿಗಳ ಪರ ಸಮಾಜಕಾರ್ಯಗಳಲ್ಲಿ ತೊಡಗಿಕೊಂಡವರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಪ್ರಸ್ತುತ ವರ್ಷದ ಪ್ರಶಸ್ತಿಯನ್ನು ಕಲಬುರಗಿಯಲ್ಲಿ ರಿಕ್ಷಾ ಚಾಲಕನಾಗಿ 22 ವರ್ಷಗಳಿಂದ ಕುಷ್ಠ ರೋಗಿಗಳ ಸೇವೆ ಮಾಡುತ್ತಿರುವ ಕರ್ಮಯೋಗಿ ಹಣಮಂತ ದೇವನೂರ ಅವರಿಗೆ ಘೋಷಿಸಲಾಗಿದೆ. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಮತ್ತು ಸನ್ಮಾನವನ್ನು ಒಳಗೊಂಡಿದೆ ಎಂದವರು ವಿವರಿಸಿದರು.

ಮಹಾತ್ಮ ಗಾಂಧಿ ಲೆಪ್ರಸಿ ಸೊಸೈಟಿ ಸ್ಥಾಪಿಸಿರುವ ಹಣಮಂತ ಅವರು ಭಿಕ್ಷೆ ಬೇಡುವ, ಮನೆಯಿಂದ ಹೊರಹಾಕಲ್ಪಟ್ಟ, ಸಮಾಜದಿಂದ ಬಹಿಷ್ಕೃತರಾದ ಕುಷ್ಠ ರೋಗಿಗಳನ್ನು ಕರೆತಂದು ಅವರ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಸೌಂದರ್ಯ ಲಹರಿ ಉಪಾಸಕಿ ಶಿವಮೊಗ್ಗದ ಅಶೋಕನಗರದ ಕಾಮಾಕ್ಷಮ್ಮ ಅವರಿಗೆ ಶ್ರೀ ಲಲಿತಾ ಪುರಸ್ಕಾರವನ್ನು ಐದು ಸಾವಿರ ರೂ. ನಗದಿನೊಂದಿಗೆ ನೀಡಲಾಗುವುದು. ಮಾಗಡಿಯ ಪೋಲೋಹಳ್ಳಿಯ ಭವತಾರಿಣಿ ಆಶ್ರಮದ ಅಧ್ಯಕ್ಷೆ ಮಾತಾಜಿ ವಿವೇಕಮಯಿ ಪ್ರಶಸ್ತಿ ಪ್ರದಾನ ಮಾಡುವರು. ಟ್ರಸ್ಟಿನ ಅಧ್ಯಕ್ಷ, ಉಪಾಸಕ ಸಿದ್ದಪ್ಪಾಜಿ ಅಧ್ಯಕ್ಷತೆ ವಹಿಸುವರು ಎಂದರು. ದೇವಸ್ಥಾನ ಸಮಿತಿಯ ನರಸಿಂಹ, ಪುರುಷೋತ್ತಮ ಸುದ್ದಿಗೋಷ್ಠಿಯಲ್ಲಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top